ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮೇಶ್ವರಂ :ಅಬ್ದುಲ್ ಕಲಾಂ ಪುಣ್ಯ ಸ್ಮರಣೆ, ಪ್ರತಿಮೆ ಅನಾವರಣ

By Mahesh
|
Google Oneindia Kannada News

ನವದೆಹಲಿ, ಜುಲೈ 27: ಭಾರತರತ್ನ, ವಿಜ್ಞಾನಿ, ಮಾಜಿ ರಾಷ್ಟ್ರಪತಿ ದಿವಂಗತ ಡಾ. ಅಬ್ದುಲ್ ಕಲಾಂ ಅವರ ಪ್ರಥಮ ಪುಣ್ಯ ಸ್ಮರಣೆಯನ್ನು ಬುಧವಾರ ದೇಶದ ಹಲವೆಡೆ ಆಚರಿಸಲಾಗುತ್ತಿದೆ. ದೇಶದ ಹೆಮ್ಮೆಯ ಗುರು ಕಲಾಂ ಅವರ ಸ್ಮರಣಾರ್ಥ ರಾಮೇಶ್ವರಂನಲ್ಲಿ ಬುಧವಾರ ಆಳೆತ್ತರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.

ಕಲಾಂ ಅವರ ಕುಟುಂಬಸ್ಥರು, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಕಲಾಂ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. [ಅಬ್ದುಲ್ ಕಲಾಂ ಸಂಕ್ಷಿಪ್ತ ಪರಿಚಯ]

'ಮಿಷನ್ ಆಫ್ ಲೈಪ್' ಶೀರ್ಷಿಕೆಯಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ದೇಶದ ಅಪ್ರತಿಮ ಮಣ್ಣಿನ ಮಗನಾಗಿರುವ ಕಲಾಂ ಅವರ ಪ್ರತಿಮೆ ಎಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸಿದರು. ಪೈ ಕುರುಂಬನಲ್ಲಿರುವ ಕಲಾಂ ಅವರ ಸಮಾಧಿ ಬಳಿ ಅವರ ಪ್ರತಿಮೆ ಅನಾವರಣಗೊಂಡಿದೆ.[ಕಲಾಂ ಸ್ಫೂರ್ತಿದಾಯಕ ನುಡಿಮುತ್ತುಗಳು]

ಜುಲೈ 27, 2015ರಂದು ಮೇಘಾಲಯದ ಶಿಲ್ಲಾಂಗ್ ನಲ್ಲಿ ಐಐಎಂನಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ ಕುಸಿದು ಬಿದ್ದ ಕಲಾಂ ಅವರು ಮತ್ತೆ ಮೇಲಕ್ಕೇ ಏಳಲಿಲ್ಲ. [ಭಾರತ ತನ್ನ 'ರತ್ನ' ಕಳೆದುಕೊಂಡಿದೆ : ಕಲಾಂ ಕುರಿತು ಮೋದಿ ಲೇಖನ]

1997ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಸೇರಿದಂತೆ ಹತ್ತು ಹಲವು ಪ್ರಶಸ್ತಿ, ಪಾರಿತೋಷಕಗಳನ್ನು ಪಡೆದುಕೊಂಡಿದ್ದ ಕಲಾಂ ಅವರ ಮಾತುಗಳು ಎಲ್ಲರಿಗೂ ಸ್ಫೂರ್ತಿದಾಯಕ.

ಪ್ರತಿಮೆ ಅನಾವರಣ ವಿವಾದಕ್ಕೆ ಕಾರಣವಾಗಿತ್ತು.

ಪ್ರತಿಮೆ ಅನಾವರಣ ವಿವಾದಕ್ಕೆ ಕಾರಣವಾಗಿತ್ತು.

ಇಸ್ಲಾಂ ಧರ್ಮದಲ್ಲಿ ಮೂರ್ತಿಪೂಜೆ ಹಾಗೂ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ. ಆದ್ದರಿಂದ ಕಲಾಂ ಅವರ ಆದರ್ಶಗಳನ್ನು ಅನುಸರಿಸಿ, ಗೌರವಿಸಿ, ಪ್ರತಿಮೆ ಏಕೆ ನಿರ್ಮಿಸಬೇಕು ಎಂದು ಕೆಲ ಇಸ್ಲಾಮ್ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿದ್ದವು. ಆದರೆ, ಕಲಾಂ ಅವರ ಸೋದರ ಮೊಹಮ್ಮದ್ ಅವರ ಅನುಮತಿ ಬಳಿಕ ಪ್ರತಿಮೆ ನಿರ್ಮಾಣ ಮಾಡಲಾಯಿತು.

 ವಿಷನ್ 20-20 ಕಲಾಂರ ಕನಸು

ವಿಷನ್ 20-20 ಕಲಾಂರ ಕನಸು

2020ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಿ ಮಾಡಬೇಕು ಎಂಬುದು ಕಲಾಂ ಅವರ ಕನಸಾಗಿತ್ತು. 500 ತಜ್ಞರ ಸಮಿತಿಯ ಮುಖ್ಯಸ್ಥರಾಗಿ ಅವರು ರೂಪಿಸಿದ ವಿಷನ್‌ 2020 ಯೋಜನೆ ಅನೇಕ ಕಾರ್ಯಕ್ರಮಗಳನ್ನು ಒಳಗೊಂಡಿದೆ.

ಕ್ಷಿಪಣಿ ಜನಕ, ಮಿಸೈಲ್ ಮ್ಯಾನ್ ಕಲಾಂ

ಕ್ಷಿಪಣಿ ಜನಕ, ಮಿಸೈಲ್ ಮ್ಯಾನ್ ಕಲಾಂ

ಇಸ್ರೋ, ಡಿಆರ್ ಡಿಒ ವಿಜ್ಞಾನಿಯಾಗಿದ್ದ ಕಾಲದಲ್ಲಿ ಪಿಎಸ್ ಎಲ್ವಿ, ರೋಹಿಣಿ ಉಪಗ್ರಹ, ಡಿಆರ್ ಡಿಒದಲ್ಲಿ ಸ್ವದೇಶಿ ಕ್ಷಿಪಣಿ ನಿರ್ಮಾಣ, ಅಣುಶಕ್ತಿ ಆಯೋಗದ ಸಹಭಾಗಿತ್ವದಲ್ಲಿ ಪೋಖ್ರಾನ್ ಪರಮಾಣು ಪರೀಕ್ಷೆಯ ನೇತೃತ್ವ, ಹಗುರ ಯುದ್ಧ ವಿಮಾನಗಳ ನಿರ್ಮಾಣ ಯೋಜನೆ ಎಲ್ಲವೂ ಕಲಾಂರ ಸ್ಪೂರ್ತಿಯ ದ್ಯೋತಕವಾಗಿದೆ.

ಭಾರತದ ನಿಜವಾದ 'ರತ್ನ'

ಭಾರತದ ನಿಜವಾದ 'ರತ್ನ'

ಒಂದು ದೇಶ ಭ್ರಷ್ಟಾಚಾರ ಮುಕ್ತವಾದರೆ ಆ ದೇಶದಲ್ಲಿ ಸುಂದರ ಚಿಂತನೆಗಳನ್ನು ಕಾಣಬಹುದು. ಸಮಾಜವನ್ನು ಮೂವರು ಮಾತ್ರ ನಿರ್ಮಾಣ ಮಾಡಬಲ್ಲರು, ಅವರೆಂದರೆ ತಂದೆ,ತಾಯಿ ಮತ್ತು ಗುರು.

ಇವತ್ತಿನ ನಮ್ಮ ಇಂದಿನ ದಿನವನ್ನು ತ್ಯಾಗ ಮಾಡಿದರೆ ನಮ್ಮ ಮಕ್ಕಳ ನಾಳೆಗೆ ಸುಂದರ ಬದುಕು ಕಟ್ಟಿಕೊಡಲು ಸಾಧ್ಯ ಎಂದು ಹೇಳುತ್ತಿದ್ದ ಕಲಾಂ ಅವರು ಭಾರತದ ನಿಜವಾದ ಭಾರತರತ್ನ

English summary
A life-size statue of former president Dr APJ Abdul Kalam was unveiled at Peikarumbu on the occasion of his first death anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X