ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕಲ್ಲಿ ಇಂಕ್ ಬಳಸದಿರಲು ಚುನಾವಣಾ ಆಯೋಗ ಸೂಚನೆ

By Ananthanag
|
Google Oneindia Kannada News

ನವದೆಹಲಿ.ನವೆಂಬರ್ 18: ದೇಶದ ಎಲ್ಲ ಬ್ಯಾಂಕುಗಳಲ್ಲಿ ಈಗಾಗಲೇ ನೋಟಿನ ಅವ್ಯವಹಾರ ತಡೆಯಲು ಬೆರಳಿಗೆ ಮಸಿ ಬಳಿಯಲಾಗುತ್ತಿದೆ. ಆದರೆ ಚುನಾವಣಾ ಆಯೋಗ ಬ್ಯಾಂಕುಗಳಲ್ಲಿ ಇಂಕನ್ನು ಬಳಸದಿರಲು ಆರ್ ಬಿಐಗೆ ಪತ್ರ ಬರದಿದೆ.

ಚುನಾವಣಾ ಆಯೋಗವು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದ್ದು ಚುನಾವಣೆಗೆ ಬಳಸುವ ಇಂಕನ್ನು ಬಳಸಬೇಡಿ ಎಂದು ತಿಳಿಸಿದೆ.

ink

ಇನ್ನು ಇದಕ್ಕೆ ಸಂಬಂಧಿಸಿದಂತೆ ಬಹಳಷ್ಟು ರಾಜ್ಯಗಳು ಚುನಾವಣೆಗೆ ಬಳಸುವ ಶಾಯಿಯನ್ನು ಬಳಸಬಹುದೇ ಎಂಬ ಗೊಂದಲದಲ್ಲಿದ್ದವು, ಹಾಗೆಯೇ ಕೆಲವು ರಾಜ್ಯಗಳಲ್ಲಿ ಶಾಯಿಯನ್ನು ಗುರುವಾರದಿಂದ ಬಳಸಲು ಮುಂದಾಗಿದ್ದವು.[1,000 ರೂಪಾಯಿಗೆ ತಿಲಾಂಜಲಿ, ಹೊಸ ನೋಟು ಚಲಾವಣೆ ಇಲ್ಲ]

ಸರ್ಕಾರವು ಸಹ ಶಾಯಿನ್ನು ಬಲಗೈ ಬೆರಳುಗಳಿಗೆ ಬಳಸಬಹುದು. ಎಡಗೈ ಬೆರಳಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಳಸುವುದು ಎಂದು ಹೇಳಿತ್ತು. ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಚುನಾವಣಾ ವಾತಾವರಣವಿದೆ ಹಾಗಾಗಿ ಶಾಯಿಯಿಂದ ಗೊಂದಲವಾಗಬಾರದು ಎಂದು ಆಯೋಗದ ವಾದವಾಗಿದೆ.

ಸರ್ಕಾರದ ನಿರ್ದೇಶನದಂತೆ ಸರದಿ ಸಾಲಿನಲ್ಲಿ ಮತ್ತೆ ಮತ್ತೆ ನಿಂತು ಹಣವನ್ನು ಮತ್ತೆ ಮತ್ತೆ ಬದಲಿಸಿಕೊಳ್ಳುತ್ತಾರೆ. ಹಾಗೇ ಸಾಮಾನ್ಯ ಜನರಿಗೆ ಎಲ್ಲರಿಗೂ ನ್ಯಾಯಬದ್ಧವಾಗಿ ಹಣ ದೊರಕುವುದು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಲಾಗಿತ್ತು.[ಬ್ಲಾಕ್ ಅಂಡ್ ವೈಟ್ ಆಟದಲ್ಲಿ ಸೋತು ಗೆಲ್ಲುವವರಾರು?]

ಇನ್ನು ಚುನಾವಣಾ ಆಯೋಗದ ನಿಯಮದ ಪ್ರಕಾರ ಎಡಗೈ ಬೆರಳಿಗೆ ಹಚ್ಚುವ ಇಂಕು ಮತದಾನದ ಪ್ರತೀಕ, ಮತದಾರ ಎಡಗೈ ಹೊಂದಿಲ್ಲದವನು ಮಾತ್ರ ಬಲಗೈ ಬೆರಳಿಗೆ ಶಾಯಿಯನ್ನು ಹಾಕಿಸಿಕೊಳ್ಳಬೇಕು.

English summary
Don't Use Indelible Ink in Banks: Election Commission To Finance Ministry
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X