ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಏಕರೂಪದ ವಾಹನ ತೆರಿಗೆಗಾಗಿ ಇಲ್ಲಿ ಸಹಿ ಹಾಕಿ

|
Google Oneindia Kannada News

ಬೆಂಗಳೂರು, ಏ. 9: ಮೋಟಾರು ವಾಹನ ಕಾಯ್ದೆ ಕಿರಿಕಿರಿ ತಂದಿದೆ ಎನಿಸುತ್ತಿದೆಯೇ? ಟೋಲ್ ಗೇಟ್ ಗಳು, ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ವಾಹನ ತೆರಿಗೆ ಪದ್ಧತಿ ಹಗಲು ದರೋಡೆ ಎಂಬ ಭಾವನೆ ಮೂಡಿದೆಯಾ? ನಮ್ಮದೇ ದೇಶದವೊಳಗೆ ಸಂಚರಿಸಲು ಇದೆಂಥಾ ನಿರ್ಬಂಧ ಎಂಬ ಪ್ರಶ್ನೆ ಉಂಟಾಗಿದೆಯಾ? ಹಾಗಾದರೆ ನಿಮ್ಮ ಸಮಸ್ಯೆಗೆ ಇಲ್ಲೊಬ್ಬರು ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಿದ್ದಾರೆ.

ದೇಶದಲ್ಲೆಡೆ ಏಕರೂಪದ ವಾಹನ ತೆರಿಗೆ ಪದ್ಧತಿ ನಿರ್ಮಾಣವಾಗಬೇಕು ಎಂದು ಆಗ್ರಹಿಸಿ ಆನ್ ಲೈನ್ ಅಭಿಯಾನವೊಂದು ಆರಂಭವಾಗಿದೆ. ಇದಕ್ಕೆ ಸುಮಾರು 40 ಸಾವಿರಕ್ಕೂ ಅಧಿಕ ಜನರು ಸಹಿ ಹಾಕಿದ್ದಾರೆ. ಬೆಂಗಳೂರು, ಹೈದ್ರಾಬಾದ್, ಚೆನ್ನೈ, ಮುಂಬೈ, ಪುಣೆ, ನವದೆಹಲಿ ಸೇರಿದಂತೆ ಅನೇಕ ಮಹಾನಗರದ ನಾಗರೀಕರು ಸಹಿ ಮಾಡಿದ್ದಾರೆ.[ಕಳುವಾದ ವಾಹನ ಪತ್ತೆಗೆ ಬಂತು ಅಪ್ಲಿಕೇಶನ್]

tax

'ಡ್ರೈವ್ ವಿತ್ ಔಟ್ ಬಾರ್ಡರ್, ಒನ್ ನೇಶನ್ -ನನ್ ರೋಡ್ ಟ್ಯಾಕ್ಸ್'ಎಂಬ ಹೆಸರಿನಲ್ಲಿ ಆರಂಭವಾಗಿರುವ ಅಭಿಯಾಣ ಅನೇಕ ಸಂಗತಿಗಳನ್ನು ಹೇಳುತ್ತಿದೆ. ವಾಸಿಂ ಮೆನನ್ ಎಂಬುವರು ಆರಂಭಿಸಿರುವ ಸಹಿ ಸಂಗ್ರಹ ಕೆಲಸಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು ಕೆಲವೇ ದಿನದಲ್ಲಿ 1 ಲಕ್ಷ ತಲುಪಲಿದೆ. ನಂತರ ಈ ದೂರನ್ನು ಅಥವಾ ಬೇಡಿಕೆಗಳುಳ್ಳ ಮನವಿಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ನೀಡಲಾಗುವುದು.[ಹಳೇ ವಾಹನ ಮಾರ್ತೀರಾ? ಈ ಅಂಶ ಗಮನದಲ್ಲಿರಲಿ]

ಮೋಟಾರು ವಾಹನ ಕಾಯ್ದೆಯಲ್ಲಿ ಅನೇಕ ಅವೈಜ್ಞಾನಿಕ ಅಂಶಗಳಿವೆ. ಕರ್ನಾಟಕದಲ್ಲಿ ಯಾವುದಾದರೂ ಒಂದು ಬೇರೆ ರಾಜ್ಯದ ವಾಹನ 30 ದಿನಕಕ್ಕಿಂತ ಅಧಿಕ ಕಾಲ ಇದ್ದರೆ, ಅದಕ್ಕೆ ಸಂಬಂಧಿಸಿದ ಲೈಫ್ ಟೈಮ್ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಬೇರೆ ರಾಜ್ಯಗಳಲ್ಲಿ 11 ತಿಂಗಳು ಕಾಲ ಸಂಚರಿಸುವುದಾದರೆ ರಜಿಸ್ಟರ್ ಮಾಡಬೇಕು, ಈ ಬಗೆಯ ಹಲವಾರು ಗೊಂದಲಗಳು ಕಾಯ್ದೆಯಲ್ಲಿದ್ದು ಅವೆಲ್ಲವನ್ನು ನಿವಾರಿಸಬೇಕು ಎಂದು ಕೇಳಿಕೊಳ್ಳಲಾಗಿದೆ.[ರಿಚ್ಮಂಡ್ ರಸ್ತೆ ಆರ್ ಟಿಒ ಜತೆ 'ರಿಚ್' ಯುವತಿ ರಚ್ಚೆ]

ಅಭಿಯಾನದ ಫೇಸ್ ಬುಕ್ ಪೇಜ್ ಗೆ 8 ಸಾವಿರಕ್ಕೂ ಅಧಿಕ ಲೈಕ್ ದೊರೆತಿದೆ. ನಿಮಗೂ ಸಹಿ ಮಾಡಬೇಕು ಎಂದೆನಿಸುತ್ತಿದೆಯಾ? ಇಲ್ಲಿ ಕ್ಲಿಕ್ ಮಾಡಿ...

English summary
An online petition launched by a Bengalurean a fortnight ago demanding uniform road tax throughout the country has garnered 40,000 signatures. The campaign, titled ‘Drive without borders: one nation-one road tax', aims to prevent harassment of vehicle owners relocating from one State to another; and enabling them to get refund of their vehicle's lifetime tax from a Central agency without hassles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X