ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳಿತಾಯ ಖಾತೆಯಿಂದ ವಿತ್ ಡ್ರಾ: ರಿಸರ್ವ್ ಬ್ಯಾಂಕ್ ಹೊಸ ನಿಯಮ

ಉಳಿತಾಯ ಖಾತೆಯಿಂದ ವಾರವೊಂದಕ್ಕೆ ವಿತ್ ಡ್ರಾ ಮಿತಿಯನ್ನು ರಿಸರ್ವ್ ಬ್ಯಾಂಕ್ ಐವತ್ತು ಸಾವಿರ ರೂಪಾಯಿಗೆ ಏರಿಸಿದೆ.

By Balaraj Tantry
|
Google Oneindia Kannada News

ನವದೆಹಲಿ, ಫೆ 20: ಅಪನಗದೀಕರಣದಿಂದ ಉಂಟಾಗಿದ್ದ ಚಿಲ್ಲರೆ, ಕರೆನ್ಸಿ ಸಮಸ್ಯೆ ನಿಧಾನವಾಗಿ ಸರಿದಾರಿಗೆ ಬರುತ್ತಿರುವ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಉಳಿತಾಯ ಖಾತೆಯಿಂದ ಹಣ ಹಿಂಪಡೆಯುವಿಕೆ (ವಿತ್ ಡ್ರಾ) ಮಿತಿಯನ್ನು ಹೆಚ್ಚಿಸಿದೆ.

ಸೋಮವಾರ (ಫೆ 20) ದಿಂದಲೇ ಜಾರಿಗೆ ಬರುವಂತೆ, ವಾರವೊಂದಕ್ಕೆ ಈಗ ಇದ್ದ 24ಸಾವಿರ ಮಿತಿಯನ್ನು 50ಸಾವಿರ ರೂಪಾಯಿಗೆ ಹೆಚ್ಚಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ.

ಹಂತ ಹಂತವಾಗಿ ವಿತ್ ಡ್ರಾ ಮಿತಿಯನ್ನು ಏರಿಕೆ ಮಾಡುತ್ತಾ ಬಂದಿರುವ ರಿಸರ್ವ್ ಬ್ಯಾಂಕ್, ಮಾರ್ಚ್ 13ನೇ ತಾರೀಕಿನ ನಂತರ ವಿತ್ ಡ್ರಾ ಮಿತಿಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯುವುದಾಗಿ ಈಗಾಗಲೇ ಪ್ರಕಟಿಸಿದೆ.

Demonetisation: From Feb 20, cash withdrawal limit for savings account is Rs 50K

ಕಳೆದ ಜನವರಿ 30ಕ್ಕೆ ಹಣ ಹಿಂಪಡೆಯುವಿಕೆ ಮಿತಿಯನ್ನು 24 ಸಾವಿರ ರೂಪಾಯಿಗೆ ಆರ್ಬಿಐ ಏರಿಸಿತ್ತು. ಇದಕ್ಕೆ ಮೊದಲು ಜನವರಿ ಹದಿನಾರರಂದು ವಾರಕ್ಕೆ ನಾಲ್ಕು ಸಾವಿರ ರೂಪಾಯಿ ಇದ್ದ ಮಿತಿಯನ್ನು ಹತ್ತು ಸಾವಿರ ರೂಪಾಯಿಗೆ ಏರಿಸಲಾಗಿತ್ತು.

ಈ ನಡುವೆ ಹತ್ತಕ್ಕಿಂತ ಹೆಚ್ಚು ಹಳೆಯ ಐನೂರು ಮತ್ತು ಸಾವಿರ ರೂಪಾಯಿ ನೋಟು ಹೊಂದಿರುವುದು ಅಪರಾಧ ಎನ್ನುವ ಕಾನೂನು ಲೋಕಸಭೆಯಲ್ಲಿ ಆಂಗೀಕಾರಗೊಂಡಿದೆ. ಈ ಕಾನೂನಿನನ್ವಯ ಕನಿಷ್ಠ ಹತ್ತು ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ.

ನವೆಂಬರ್ ಎಂಟರ ನೋಟು ನಿಷೇಧದ ಸಂದರ್ಭದಲ್ಲಿ ಹಳೆಯ ಐನೂರು ಮತ್ತು ಸಾವಿರ ರೂಪಾಯಿಯ 15.4 ಲಕ್ಷ ಕೋಟಿ ಹಣ ಚಲಾವಣೆಯಲ್ಲಿ ಇತ್ತು ಕೇಂದ್ರ ಸರಕಾರ ತಿಳಿಸಿತ್ತು.

English summary
The cash withdrawal limit for savings bank accounts was relaxed to Rs 50,000 effective from Feb 20, Reserve Bank of India announcement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X