ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟು ನಿಷೇಧ: ವಿಪಕ್ಷಗಳ ಲೆಕ್ಕಾಚಾರ ಉಲ್ಟಾ, ಬಿಜೆಪಿಗೆ ಜಯಭೇರಿ

ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಪರ ಜನಾದೇಶ ಹೊರಬಿದ್ದಿದ್ದು, ವಿಪಕ್ಷಗಳಿಗೆ ಪ್ರಮುಖವಾಗಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.

By Balaraj
|
Google Oneindia Kannada News

ನವದೆಹಲಿ, ನ 29: ಐನೂರು ಮತ್ತು ಸಾವಿರ ರೂಪಾಯಿ ನೋಟನ್ನು ನಿಷೇಧಿಸುವ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡ ಮೋದಿ ಸರಕಾರದ ಕ್ರಮ, ಬಿಜೆಪಿಗೆ ತಿರುಮಂತ್ರವಾಗಲಿದೆ ಎನ್ನುವ ವಿಪಕ್ಷಗಳ ಲೆಕ್ಕಾಚಾರ ಎರಡು ರಾಜ್ಯಗಳಲ್ಲಿ ಉಲ್ಟಾ ಹೊಡೆದಿದೆ.

ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಪರ ಜನಾದೇಶ ಹೊರಬಿದ್ದಿದ್ದು, ವಿಪಕ್ಷಗಳಿಗೆ ಪ್ರಮುಖವಾಗಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. (1ನೇ ತಾರೀಖು ಸಂಬಳಕ್ಕೆ ಮತ್ತೆ ಕ್ಯೂ ಶುರವಾಗುತ್ತಾ)

ಎರಡು ರಾಜ್ಯಗಳಲ್ಲಿನ ಜನಾದೇಶ ಪಕ್ಷದ ಪರವಾಗಿ ಬಂದಿದ್ದಕ್ಕೆ ಮತದಾರರಿಗೆ ಧನ್ಯವಾದ ಸಲ್ಲಿಸಿರುವ ಪ್ರಧಾನಿ ಮೋದಿ, ದೊಡ್ಡ ಮೊತ್ತದ ಕರೆನ್ಸಿಯನ್ನು ನಿಷೇಧಗೊಳಿಸಿರುವ ಸರಕಾರದ ಕ್ರಮದ ಪರ ಜನ ನಿಂತಿದ್ದಾರೆಂದು ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದ್ದು, ಪಕ್ಷ ಪ್ರಾಭಲ್ಯವಿರುವ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ, ನೋಟು ನಿಷೇಧದ ಪರಿಣಾಮ ಬಲವಾಗಿ ಬಿಜೆಪಿ ಪರ ಬೀಸಿದೆ.

ಇನ್ನು, ಗುಜರಾತಿನಲ್ಲಿ ಬಿಜೆಪಿ ತನ್ನ ಹಿಡಿತ ಮುಂದುವರಿಸಿದ್ದು, ಮುಂದಿನ ವರ್ಷದ ಅಂತ್ಯದಲ್ಲಿ ನಡೆಯುವ ಅಸೆಂಬ್ಲಿ ಚುನಾವಣೆಗೆ ಉತ್ತಮ ಬುನಾದಿ ಹಾಕಿಕೊಂಡಿದೆ ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ. ಮುಂದೆ ಓದಿ..

ಟ್ವಿಟ್ಟರ್ ಸಂದೇಶ

ಮುಂದಿನ ವರ್ಷಾಂತ್ಯದಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿಯ ಈ ಗೆಲುವು ಪಕ್ಷಕ್ಕೆ ಭಾರೀ ಬಲ ತಂದಿದೆ. ಬಿಜೆಪಿ ಮೇಲೆ ನಂಬಿಕೆ ಇಟ್ಟು ಪಕ್ಷವನ್ನು ಗೆಲ್ಲಿಸಿದ್ದಕ್ಕೆ ಜನತೆಗೆ ಮತ್ತು ಚುನಾವಣೆಯಲ್ಲಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಮೋದಿ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ. ಜೊತೆಗೆ ಭ್ರಷ್ಟಾಚಾರವನ್ನು ಜನ ಸಹಿಸುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ

ಸ್ಥಳೀಯ ಸಂಸ್ಥೆ ಚುನಾವಣೆ

ರಾಜ್ಯದ 16 ಜಿಲ್ಲೆಗಳ 126 ಪುರಸಭೆ ಮತ್ತು ಜಿಲ್ಲಾ ಪಂಚಾಯತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಬಿಜೆಪಿ 107 ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್ 17 ಸ್ಥಾನಗಳನ್ನು ಮಾತ್ರ ಗೆಲ್ಲುವ ಮೂಲಕ ಮುಖಭಂಗ ಅನುಭವಿಸಿದೆ. 2 ಕ್ಷೇತ್ರದ ಫಲಿತಾಂಶ ಇನ್ನು ಬರಬೇಕಷ್ಟೇ.

ನಲವತ್ತು ಕ್ಷೇತ್ರ

ಈ ಚುನಾವಣೆಯಲ್ಲಿ ಗಮನಿಸಬೇಕಾದ ವಿಚಾರವೇನಂದರೆ, ಗುಜರಾತ್ ಬಿಜೆಪಿ ಘಟಕದಲ್ಲಿನ ಶೀತಲ ಸಮರದ ನಡುವೆ ಪಕ್ಷ ಭರ್ಜರಿ ಸಾಧನೆ ಮಾಡಿದೆ. ಕಾಂಗ್ರೆಸ್ ಹಿಡಿತದಲ್ಲಿದ್ದ 40 ಕ್ಷೇತ್ರಗಳು ಬಿಜೆಪಿಗೆ ಒಲಿದಿದೆ. ಮೋದಿ ಗುಜರಾತ್ ಜನತೆಯನ್ನು ಅಭಿನಂದಿಸಿದ್ದಾರೆ.

ಬಿಜೆಪಿ ಮುನ್ನಡೆ

ಬಿಜೆಪಿ ಮುನ್ನಡೆ

ಮೊದಲ ಹಂತದಲ್ಲಿ ನಡೆದ ಚುನಾವಣೆ
147 ಮುನ್ಸಿಪಲ್ ಕೌನ್ಸಿಲ್ ನಲ್ಲಿ 3,705 ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ 851 ಸೀಟಲ್ಲಿ ಗೆದ್ದಿದೆ. ಜೊತೆಗೆ 17 ಪಂಚಾಯತ್, 52 ಕೌನ್ಸಿಲ್ ನಲ್ಲಿ ಬಿಜೆಪಿ ಗೆದ್ದಿದೆ.
ಬಿಜೆಪಿ - 52
ಶಿವಸೇನೆ - 23
ಕಾಂಗ್ರೆಸ್ - 19
ಎನ್ಸಿಪಿ - 16
ಇತರರು - 28

ಮುನ್ಸಿಪಲ್ ಕೌನ್ಸಿಲ್ (3,705 ಕ್ಷೇತ್ರ)

ಮುನ್ಸಿಪಲ್ ಕೌನ್ಸಿಲ್ (3,705 ಕ್ಷೇತ್ರ)

ಬಿಜೆಪಿ - 851
ಶಿವಸೇನೆ - 514
ಎನ್ಸಿಪಿ - 638
ಕಾಂಗ್ರೆಸ್ - 643
ಎಂಎನ್ಎಸ್ - 16
ಬಿಎಸ್ಪಿ - 9
ಸಿಪಿಎಂ - 12
ಸ್ಥಳೀಯ ಹೊಂದಾಣಿಕೆ - 384
ಇತರರು - 638

English summary
Demonetisation: The BJP has followed up its success in the Maharashtra civic elections with a sweep of local bodies elections in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X