ನೋಟು ನಿಷೇಧ, ಸಮೀಕ್ಷೆ: ಮೋದಿಗೆ ಜೈ ಎನ್ನುವವರ ಸಂಖ್ಯೆ ಇಳಿಮುಖ

Subscribe to Oneindia Kannada

ನವದೆಹಲಿ, ಡಿ 1: ಐನೂರು ಮತ್ತು ಸಾವಿರ ಮುಖಬೆಲೆಯ ನೋಟನ್ನು ಹಿಂದಕ್ಕೆ ಪಡೆಯುವ ಮೋದಿ ಸರಕಾರದ ಘೋಷಣೆಯಾದ ಇಪ್ಪತ್ತು ದಿನಗಳ ನಂತರ ನಡೆದ ಸಮೀಕ್ಷೆಯೊಂದರಲ್ಲಿ ಪ್ರಧಾನಿ ಮೋದಿಗೆ ಜೈ ಎನ್ನುವವರ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ಗೋಚರಿಸಿದೆ.

ಈ ಹಿಂದೆ ನಡೆಸಲಾದ ಕೆಲವು ಸಮೀಕ್ಷೆಗಳಲ್ಲಿ, ನೋಟು ನಿಷೇಧದ ನಿರ್ಧಾರವನ್ನು ಸಾರ್ವಜನಿಕರು ಒಕ್ಕೂರಿಲಿನಿಂದ ಬೆಂಬಲಿಸಿ, ಪ್ರಧಾನಿ ಮೋದಿಗೆ ಜೈ ಎಂದಿದ್ದರು. ಮೋದಿ ಆಪ್ ನಲ್ಲಿ ನಡೆದ ಸಮೀಕ್ಷೆಯಲ್ಲೂ ಜನ ಪ್ರಧಾನಮಂತ್ರಿಗೆ ಅಭೂತಪೂರ್ವ ಬೆಂಬಲ ನೀಡಿದ್ದರು.

ನೋಟು ನಿಷೇಧದ ನಂತರ ಬಹುತೇಕ ಬಾಗಿಲು ತೆರೆಯದ ಎಟಿಎಂಗಳು, ಬ್ಯಾಂಕ್ ನಲ್ಲಿ ಮಾರುದ್ದ ಕ್ಯೂ, ಚಿಲ್ಲರೆ ಸಮಸ್ಯೆ ದಿನೇ ದಿನೇ ಸಾರ್ವಜನಿಕರನ್ನು ಕಾಡಲಾರಂಭಿಸಿತು. ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಮೋದಿ ಸರಕಾರದ ಪರವಾಗಿ ನಾವಿದ್ದೇವೆ ಎನ್ನುವವರ ಸಂಖ್ಯೆಯಲ್ಲಿ ಬದಲಾವಣೆ ಕಾಣಲಾರಂಭಿಸಿತು. (ಡಿಸೆಂಬರ್ ಮೊದಲವಾರ ಶುರುವಾಯ್ತು ಆರ್ಥಿಕ ಬರಗಾಲ)

ನೋಟು ನಿಷೇಧ ಕ್ರಮ ಸರಿ ಎಂದು ಒಲ್ಲದ ಮನಸ್ಸಿನಿಂದ ಹೇಳುತ್ತಿದ್ದ ವಿಪಕ್ಷಗಳು, ಮೋದಿ ಸರಕಾರ ಪೂರ್ವತಯಾರಿ ನಡೆಸದೇ ಇಂತಹ ಕ್ರಮಕ್ಕೆ ಮುಂದಾಗಬಾರದಿತ್ತು ಎಂದು ಆಕ್ರೋಶ ವ್ಯಕ್ತ ಪಡಿಸಲಾರಂಭಿಸಿದರು. ತೊಂಬತ್ತೂ ಹೆಚ್ಚು ಜನ ಸಾವನ್ನಪ್ಪಿದರು.

ಕೇಂದ್ರ ಸರಕಾರದ ಐತಿಹಾಸಿಕ ನಿರ್ಧಾರದ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನವೆಂಬರ್ ನಾಲ್ಕನೇ ವಾರದಲ್ಲಿ, ಅಂದರೆ ನೋಟು ನಿಷೇಧಿಸಿದ ಎರಡು ವಾರದ ನಂತರ ದಕ್ಷಿಣ ಭಾರತ ಮತ್ತು ಒರಿಸ್ಸಾದಲ್ಲಿ ಸಮೀಕ್ಷೆಯೊಂದನ್ನು ನಡೆಸಿದೆ.

ಒರಿಸ್ಸಾ, ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯದ, ನಗರ ಮತ್ತು ಗ್ರಾಮೀಣ ಪ್ರದೇಶದ ಐದು ವರ್ಗದ ಒಟ್ಟು 2,791 ಜನರ ಅಭಿಪ್ರಾಯ ಪಡೆದು ಈ ಸಮೀಕ್ಷೆ ಸಿದ್ದಪಡಿಸಲಾಗಿದೆ. ಸಮೀಕ್ಷೆಯ ಮುಖ್ಯಾಂಶಗಳು ಇಂತಿದೆ..

ಐನೂರು, ಸಾವಿರ ನೋಟಿನಿಂದ ನಿಮಗೆ, ನಿಮ್ಮ ಕುಟುಂಬಕ್ಕೆ ತೊಂದರೆಯಾಗಿದೆಯೇ?

ಇಲ್ಲವೇ ಇಲ್ಲ - ಶೇ. 27.9
ಸ್ವಲ್ಪ ಮಟ್ಟಿಗೆ - ಶೇ. 42.4
ತುಂಬಾ ತೊಂದರೆಯಾಗಿದೆ - ಶೇ. 29.5

ನೋಟು ನಿಷೇಧದಿಂದ ಕಪ್ಪುಹಣ ನಿಯಂತ್ರಣಕ್ಕೆ ತರಲು ಸಾಧ್ಯವೇ?

ಹೌದು - ಶೇ. 54.3
ಇಲ್ಲ - ಶೇ. 25.9
ಹೇಳೋಕ್ಕಾಗಲ್ಲಾ - ಶೇ. 19.7

ನೋಟು ನಿಷೇಧದಿಂದ ಹೆಚ್ಚು ತೊಂದರೆಗೊಳಗಾದವರು ಯಾರು?

ಶ್ರೀಮಂತರು - ಶೇ. 22.7
ಮಧ್ಯಮವರ್ಗ - ಶೇ. 47.9
ಬಡವರು - ಶೇ. 29.2

ನೋಟು ನಿಷೇಧದಿಂದ ದೇಶದಲ್ಲಿನ ಭ್ರಷ್ಟಾಚಾರ ತೊಲಗುತ್ತದೆಯೇ?

ಹೌದು - ಶೇ. 46.2
ಇಲ್ಲ - ಶೇ. 35.4
ಹೇಳೋಕ್ಕಾಗಲ್ಲಾ - ಶೇ. 18.3

ನೋಟು ನಿಷೇಧ ಪ್ರಕ್ರಿಯೆಯನ್ನು ಸರಕಾರ ಸರಿಯಾಗಿ ನಿಭಾಯಿಸಿದೆಯೇ?

ಹೌದು - ಶೇ. 40.1
ಇಲ್ಲ - ಶೇ. 41.6
ಹೇಳೋಕ್ಕಾಗಲ್ಲಾ - ಶೇ. 18.3

ನೋಟು ನಿಷೇಧದಿಂದ ಉಗ್ರ ಚಟುವಟಿಕೆಗೆ ಕಡಿವಾಣ ಹಾಕಲು ಸಾಧ್ಯವೇ

ಹೌದು - ಶೇ. 47.7
ಇಲ್ಲ - ಶೇ. 27.5
ಹೇಳೋಕ್ಕಾಗಲ್ಲಾ - ಶೇ. 24.7

English summary
Demonetisation : Prime Minister Narendra Modi’s demonetisation policy is delicately poised in the balance of public opinion. 41% feel Modi government not planned well, Survey by The New Indian Express.
Please Wait while comments are loading...