ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಮುಖ್ಯಸ್ಥರ ನೇಮಕಾತಿ: ದೆಹಲಿ ಕಮೀಷನರ್ ಹೆಸರು ಮಂಚೂಣಿಯಲ್ಲಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜನವರಿ 17: ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಮುಖ್ಯಸ್ಥರ ಸ್ಥಾನಕ್ಕಾಗಿ ಹಲವಾರು ಐಪಿಎಸ್ ಅಧಿಕಾರಿಗಳ ಹೆಸರುಗಳು ಕೇಳಿಬರುತ್ತಿದ್ದು ಅವರಲ್ಲಿ, ದೆಹಲಿ ಪೊಲೀಸ್ ಕಮೀಷನರ್ ಅಲೋಕ್ ವರ್ಮಾ ಅವರ ಹೆಸರು ಮಂಚೂಣಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಖೇಹರ್ ಅವರುಳ್ಳ ಆಯ್ಕೆ ಸಮಿತಿಯು ಸೋಮವಾರ ಸಂಜೆ ಸಭೆ ಸೇರಿ ಮಹತ್ವದ ಮಾತುಕತೆ ನಡೆಸಿದೆ.[ಸಿಬಿಐಗೆ ಬರಲಿದ್ದಾರೆಯೇ ನೂತನ ಮಹಿಳಾ ನಿರ್ದೇಶಕಿ?]

Delhi Police Commissioner Alok Verma's is front runner for the Chief of CBI post

ಅಲೋಕ್ ವರ್ಮಾ ಮಾತ್ರವಲ್ಲದೆ, ಹಿರಿಯ ಐಪಿಎಸ್ ಮಹಿಳಾ ಅಧಿಕಾರಿ ಅರ್ಚನಾ ರಾಮಸುಂದರಂ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಎಂ.ಸಿ. ಬೊರ್ವಾಂಕರ್, ಕೃಷ್ಣಾ ಚೌಧರಿ, ಆರ್.ಕೆ. ದತ್ತಾ, ಅರುಣಾ ಬಹುಗಣ ಹಾಗೂ ಸತೀಶ್ ಮಾಥುರ್ ಅವರ ಹೆಸರುಗಳೂ ಸಭೆಯಲ್ಲಿ ಚರ್ಚಿತವಾಗಿವೆ ಎನ್ನಲಾಗಿದೆ. ಇದಲ್ಲದೆ, 1979 ಹಾಗೂ 1982 ಬ್ಯಾಚ್ ಗಳ ಕೆಲ ಹಿರಿಯ ಐಪಿಎಸ್ ಅಧಿಕಾರಿಗಳ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಐಪಿಎಸ್ ಅಧಿಕಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಅವರ ಸೇವಾ ಕೌಶಲ್ಯಗಳನ್ನು ಆಧರಿಸಿಯೇ ಸಿಬಿಐ ಮುಖ್ಯಸ್ಥರ ಹುದ್ದೆಗೆ ಆರಿಸಬೇಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಸೂಚಿಸಿರುವುದರಿಂದ ಅತ್ಯಂತ ಕೂಲಂಕಷವಾಗಿ ಪ್ರತಿಯೊಬ್ಬರ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ, ಗುಜರಾತ್ ಮೂಲದ ಐಪಿಎಸ್ ಅಧಿಕಾರಿ ರಾಕೇಶ್ ಆಸ್ತಾನಾ ಅವರನ್ನು ಸಿಬಿಐಯ ಹಂಗಾಮಿ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಇದು ವಿವಾದಕ್ಕೆ ಕಾರಣವಾಗಿ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹಾಗಾಗಿ, ಎರಡು ತಿಂಗಳಿಂದ ಇಲ್ಲಿಯವರೆಗೂ ಸಿಬಿಐ ಮುಖ್ಯಸ್ಥರ ಹುದ್ದೆ ತೆರವಾಗಿದೆ.

English summary
Delhi Police Commissioner, Alok Verma is a front-runner for the post of the Chief of CBI.The collegium comprising the Prime Minister, leader of opposition and the Chief Justice of India which met on Monday discussed various names to head the prestigious post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X