ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶದಲ್ಲಿ ಕೇಸರಿ ರಂಗು, ಇದು ಮೋದಿ ಬ್ರ್ಯಾಂಡ್ ಮ್ಯಾಜಿಕ್

ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಂದ ಫಲಿತಾಂಶಕ್ಕೆ ತಕ್ಕಂತೆ ಮಾರ್ಚ್ 11 ರ ಶನಿವಾರದಂದು ಲೈವ್ ಟ್ರೆಂಡ್ ಕೂಡಾ ಬಹುತೇಕ ಬಿಜೆಪಿ ಪರ ವಾಲಿದೆ. 15 ವರ್ಷಗಳ ನಂತರ ಮತ್ತೊಮ್ಮೆ ಉತ್ತರಪ್ರದೇಶದಲ್ಲಿ ಕೇಸರಿ ರಂಗು ಎಲ್ಲೆಡೆ ಹರಡಿದೆ.

By Mahesh
|
Google Oneindia Kannada News

ಲಕ್ನೋ, ಮಾರ್ಚ್ 11: ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಂದ ಫಲಿತಾಂಶಕ್ಕೆ ತಕ್ಕಂತೆ ಮಾರ್ಚ್ 11 ರ ಶನಿವಾರದಂದು ಲೈವ್ ಟ್ರೆಂಡ್ ಕೂಡಾ ಬಹುತೇಕ ಬಿಜೆಪಿ ಪರ ವಾಲಿದೆ. 15 ವರ್ಷಗಳ ನಂತರ ಮತ್ತೊಮ್ಮೆ ಉತ್ತರಪ್ರದೇಶದಲ್ಲಿ ಕೇಸರಿ ರಂಗು ಎಲ್ಲೆಡೆ ಹರಡಿದೆ. ಹೋಳಿ ಹಬ್ಬ ಮೊದಲುಗೊಂಡಿದ್ದು, ಬ್ರ್ಯಾಂಡ್ ಮೋದಿಗೆ ಮತ್ತೆ ಬೆಲೆ ಸಿಕ್ಕಿದೆ.

 ಗೋವಾ</a> | <a title=ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್" title=" ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್" /> ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್

ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲ್ಲಲು ಕಾರಣವೇನು? ಎಂದರೆ ತಕ್ಷಣಕ್ಕೆ 'ಮೋದಿ ಬ್ರ್ಯಾಂಡ್' ಎಂಬ ಉತ್ತರ ಸಿಗುತ್ತದೆ. ಆದರೆ, ಈ ಬಾರಿ ಅಪನಗದೀಕರಣ, ಸರ್ಜಿಕಲ್ ಸ್ಟ್ರೈಕ್, ಮೀಸಲಾತಿ ಹೋರಾಟದ ನಡುವೆ ಮೋದಿ ಬ್ರ್ಯಾಂಡ್ ಮಂಕಾಗುವ ನಿರೀಕ್ಷೆಗಳಿತ್ತು. ಆದರೆ, ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕುವ್ ರೀತಿಯಲ್ಲಿ ಬಿಜೆಪಿ ಮುನ್ನುಗ್ಗುತ್ತಿದೆ. 300ರ ಗಡಿದಾಟಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಟ್ರೆಂಡ್ ಹೇಳುತ್ತಿದೆ.[ಉತ್ತರಪ್ರದೇಶದಲ್ಲಿ ಎಂಟದೆಯ ಭಂಟನಾಗಿ ಹೊರಹೊಮ್ಮಿದ ಪಿಎಂ ಮೋದಿ]

ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷ ಹಾಗೂ ಅಖಿಲೇಶ್ ಯಾದವ್ ಅವರ ಪರ ಇದ್ದ ಟ್ರೆಂಡ್ ನಂತರ ಬದಲಾಯ್ತು. ಆಂತರಿಕ ಕಚ್ಚಾಟ, ಶಿವಪಾಲ್ ಯಾದವ್ ಜತೆ ಅಖಿಲೇಶ್ ಹೊಂದಾಣಿಕೆ, ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಜಂಟಿ ಪ್ರಚಾರ ಯಾವುದೂ ಮತದಾರರದನ್ನು ಮೆಚ್ಚಿಸಲಿಲ್ಲ.

ಮುಸ್ಲಿಂ ಮತಗಳ ವಿಭಜನೆ

ಮುಸ್ಲಿಂ ಮತಗಳ ವಿಭಜನೆ

ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿ ಮೂಲಕ ಮುಸ್ಲಿಂ ಮತಗಳನ್ನು ಬಾಚಿಕೊಳ್ಳಲು ಅಖಿಲೇಶ್ ಯಾದವ್ ಯತ್ನಿಸಿದರು. ಎಕ್ಸಿಟ್ ಪೋಲ್ ಪ್ರಕಾರ ಶೇ 70ರಷ್ಟು ಮತಗಳನ್ನು ಗೆಲ್ಲುವ ನಿರೀಕ್ಷೆಯಿತ್ತು. 2012ರಲ್ಲಿ ಇದೇ ತಂತ್ರಗಾರಿಕೆಯನ್ನು ಕಾಂಗ್ರೆಸ್ ಮೈತ್ರಿ ಇಲ್ಲದೆಯೇ ಎಸ್ ಪಿ ಸಾಧಿಸಿತ್ತು. ಆದರೆ, ಈ ಬಾರಿ ಮತಗಳು ಸಂಪೂರ್ಣವಾಗಿ ವಿಭಜನೆಗೊಂಡಿದ್ದು, ಎಸ್ ಪಿಗೆ ಭಾರಿ ಹೊಡೆತ ಬಿದ್ದಿದೆ.

ಜಾತಿ ನಂಬಿ ಗೆದ್ದ ಬಿಜೆಪಿ

ಜಾತಿ ನಂಬಿ ಗೆದ್ದ ಬಿಜೆಪಿ

ಯಾದವೇತರ ಮತಗಳತ್ತ ಗಮನ ಹರಿಸುವ ಮೂಲಕ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ. ಒಬಿಸಿ ಮತಗಳು, ಅಖಿಲೇಶ್ ಸರ್ಕಾರ ಮರೆತ ಬುಡಕಟ್ಟು ಜನಾಂಗ, ಜಾತಿ, ಮತ ಪಂಥಗಳ ಓಲೈಕೆ ಮೂಲಕ ಬಿಜೆಪಿ ಶೇ 57ರಷ್ಟು ಕುರ್ಮಿ, ಶೇ 63ರಷ್ಟು ಲೋಧ್, ಶೇ 60 ರಷ್ಟು ಇತತೆ ಒಬಿಸಿ ಮತಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. 2012ರಲ್ಲಿ ಎಸ್ ಪಿಯನ್ನು ಗೆಲ್ಲಿಸಿದ್ದ ಇದೇ ಸಮುದಾಯಗಳು ಈಗ ಮೋದಿ ಮುಖ ನೋಡಿಕೊಂಡು ಬಿಜೆಪಿಗೆ ಮಣೆ ಹಾಕಿವೆ.

ಮೇಲ್ವರ್ಗದ ಜನತೆಗೂ ಮೆಚ್ಚುಗೆ

ಮೇಲ್ವರ್ಗದ ಜನತೆಗೂ ಮೆಚ್ಚುಗೆ

ಕೇಶವ್ ಪ್ರಸಾದ್ ಮೌರ್ಯರನ್ನು ಯುಪಿ ಬಿಜೆಪಿ ಮುಖ್ಯಸ್ಥರನ್ನಾಗಿ ಘೋಷಿಸಿದ ಬಳಿಕ ಒಬಿಸಿ ಮತಗಳ ಸೆಳೆತ ಸುಲಭವಾಯಿತು, ಇದರ ಜತೆಗೆ ಮೇಲ್ವರ್ಗದ ಜನತೆಯನ್ನು ಮೆಚ್ಚಿಸಲು ಬಿಜೆಪಿ ಮುಂದಾಯಿತು.

ಆಕ್ಸಿಸ್ ಸಮೀಕ್ಷೆಯಂತೆ ಬಿಜೆಪಿಗೆ ಶೇ 64ರಷ್ತು ಬನಿಯಾ,ಶೇ 55ರಷ್ಟು ಕಾಯಸ್ತಾ ಹಾಗೂ ಶೇ 62ರಷ್ಟು ಠಾಕೂರ್, ಶೇ 62ರಷ್ಟು ಬ್ರಾಹ್ಮಣರ ಮತಗಳು ಬರಲಿವೆ.
ಬುಡಕಟ್ಟು ವೋಟ್ ಗಳು ನಿರ್ಣಾಯಕ

ಬುಡಕಟ್ಟು ವೋಟ್ ಗಳು ನಿರ್ಣಾಯಕ

ಸಾಮಾನ್ಯವಾಗಿ ಪ್ರಾದೇಶಿಕ ಪಕ್ಷಗಳಿಗೆ ಜಾತಿ ನಂಬಿಕೊಂಡವರ ಮತ ಬೀಳುತ್ತಾ ಬಂದಿದೆ. ಆರ್ ಎಲ್ ಡಿಗೆ ಜಾಟ್ ಗಳ ಮತ, ಬಿಎಸ್ ಪಿಗೆ ಜಾತವ್, ಭಾರತೀಯ ಸಮಾಜ್ ಪಾರ್ಟಿಗೆ ರಾಜ್ ಭರ್ ಸಮುದಾಯ ಬೆಂಬಲಕ್ಕೆ ನಿಲ್ಲುವುದು ನಿರೀಕ್ಷಿತವಾಗಿತ್ತು. ಆದರೆ, ಬಿ ಎಸ್ ಪಿಯಿಂದ ಜಾತವ್ ಮತಗಳನ್ನು ಬಿಜೆಪಿ ಕಸಿದುಕೊಂಡಿದೆ. ಶೇ 43ರಷ್ಟು ಬಿಜೆಪಿಯತ್ತ ವಾಲಿದ್ದು, ಬಿಜೆಪಿ ಎಲ್ಲೆಡೆ ಭಾರಿ ಮುನ್ನಡೆ ಗಳಿಸಲು ಸಾಧ್ಯವಾಗಿದೆ.

English summary
The pollsters have said that it would be a BJP sweep in Uttar Pradesh. There was a momentum in favour of Akhilesh Yadav prior to the elections but in the post-poll scenario, all that has changed if exit polls turn out right.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X