ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನರಾ ಬ್ಯಾಂಕಿಗೆ ವಂಚನೆ, ಸಿಬಿಐ ವಶಕ್ಕೆ ಡೆಕ್ಕನ್ 'ಅಯ್ಯರ್'

By Mahesh
|
Google Oneindia Kannada News

ಭುವನೇಶ್ವರ್, ಜೂ.07: ಸಾಲದ ಸುಳಿಯಲ್ಲಿ ಸಿಲುಕಿರುವ ಡೆಕ್ಕನ್ ಕ್ರಾನಿಕಲ್ ನ ಮತ್ತೊಬ್ಬ ಹಿರಿಯ ಅಧಿಕಾರಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ. ಕೆನರಾ ಬ್ಯಾಂಕಿಗೆ ವಂಚಿಸಿದ ಆರೋಪದ ಮೇಲೆ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿ (ಡಿಸಿಎಚ್ಎಲ್) ಸಂಸ್ಥೆ ಮುಖ್ಯಸ್ಥ ಟಿ ವೆಂಕಟರಾಮ ರೆಡ್ಡಿ ಈ ಹಿಂದೆ ಬಂಧನವಾಗಿದ್ದರು, ಈಗ ಉಪಾಧ್ಯಕ್ಷ ಪಿಕೆ ಅಯ್ಯರ್ ಸರದಿ.

ಹೈದರಾಬಾದ್ ಮೂಲದ 'ಡೆಕ್ಕನ್ ಕ್ರಾನಿಕಲ್' ಪತ್ರಿಕಾ ಸಮೂಹದ ಉಪಾಧ್ಯಕ್ಷ ಪಿ.ಕೆ. ಅಯ್ಯರ್‌ರನ್ನು ಒಡಿಶಾ ಪೊಲೀಸರು ಶನಿವಾರ ಭುವನೇಶ್ವರದಲ್ಲಿ ಬಂಧಿಸಲಾಗಿದೆ. ಕಳೆದ ಕೆಲ ತಿಂಗಳುಗಳಿಂದ ಇಲ್ಲಿನ ಪಂಚತಾರಾ ಹೋಟೆಲಿನಲ್ಲಿ ನಕಲಿ ಹೆಸರಿನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಶನಿವಾರ ಬಲೆ ಬೀಸಿ ಹಿಡಿಯಲಾಯಿತು. ಹೆಚ್ಚಿನ ವಿಚಾರಣೆಗಾಗಿ ಸಿಬಿಐ ತಂಡದ ವಶಕ್ಕೆ ನೀಡಲಾಗಿದೆ ಎಂದು ಒಡಿಶಾದ ಉಪಪೊಲೀಸ್ ಆಯುಕ್ತ ಸತ್ಯೇಂದ್ರ ಭೋಯ್ ತಿಳಿಸಿದ್ದಾರೆ.

Deccan Chronicle vice chairman held for fraud

ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್‌ನ ಚೇರ್ಮನ್ ಟಿ. ವೆಂಕಟ್ರಾಮ್ ರೆಡ್ಡಿ ಹಾಗೂ ಆಡಳಿತ ನಿರ್ದೇಶಕ ಟಿ.ವಿನಾಯಕ್ ರವಿ ರೆಡ್ಡಿಯವರನ್ನು ಈ ಹಿಂದೆ ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ನಂತರ ಇಬ್ಬರಿಗೂ ಹೈದರಾಬಾದಿನ ಕೆಳನ್ಯಾಯಾಲಯದಿಂದ ಜಾಮೀನು ಸಿಕ್ಕಿತ್ತು.

ಕರ್ನಾಟಕ ಮೂಲದ ಕೆನರಾ ಬ್ಯಾಂಕಿನಿಂದ ಸುಮಾರು 357 ಕೋಟಿ ರು ಕಾರ್ಪೊರೇಟ್ ಸಾಲವನ್ನು ಪಡೆಯುವ ಉದ್ದೇಶದಿಂದ 2009-11ರ ಅವಧಿಯಲ್ಲಿ ನಕಲಿ ಹಣಕಾಸು ವಿವರಣೆ ದಾಖಲೆಗಳನ್ನು ಸಲ್ಲಿಸುವಲ್ಲಿ ಅಯ್ಯರ್ ಪಾತ್ರವಹಿಸಿದ್ದರು. ಒಂದೇ ಆಸ್ತಿಯನ್ನು ನಾಲ್ಕು ಬ್ಯಾಂಕ್‌ಗಳಲ್ಲಿ ಅಡವಿಟ್ಟು 1200 ಕೋಟಿ ರೂ. ಹಣ ಸಾಲ ಪಡೆದಿದ್ದರು ಎಂದು ಸಿಬಿಐ ಆರೋಪಿಸಿದೆ. [ಬೆಂಗಳೂರಿನ ಸಿಬಿಐನಿಂದ ಡೆಕ್ಕನ್ ಕ್ರಾನಿಕಲ್ ರೆಡ್ಡಿ ಬಂಧನ]

Deccan Chronicle vice chairman held for fraud

ಹೈದರಾಬಾದ್ ಮೂಲದ ಮಾಧ್ಯಮ ಸಂಸ್ಥೆ ಡೆಕ್ಕನ್ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ ಲಿ. (ಡಿಸಿಎಚ್ಎಲ್) ದಿವಾಳಿ ಅಂಚು ತಲುಪಿದ್ದು, ಕಂಪನಿಯ ಟ್ರೇಡ್ ಮಾರ್ಕ್ ಅನ್ನು ಐಡಿಬಿಐ ಬ್ಯಾಂಕ್ ಮತ್ತೊಮ್ಮೆ ಹರಾಜು ಹಾಕಲು ಸಿದ್ಧತೆ ನಡೆಸಿತ್ತು. ಡಿಸಿಎಚ್ ಎಲ್ ಪ್ರಕಟಣೆಯ ಡೆಕ್ಕನ್ ಕ್ರಾನಿಕಲ್, ದಿ ಏಷ್ಯನ್ ಏಜ್, ಆಂಧ್ರ ಭೂಮಿ ಹಾಗೂ ಫೈನಾನ್ಶಿಯಲ್ ಕ್ರಾನಿಕಲ್ ಟ್ರೇಡ್ ಮಾರ್ಕ್ ಗಳನ್ನು ಅಡಮಾನ ಇಟ್ಟಿದ್ದರು.

ಸಾಲದ ಕಾರಣ ಐಪಿಎಲ್ ನಲ್ಲಿ ಹೊಂದಿದ್ದ ತಂಡವನ್ನು ಮಾರಾಟ ಮಾಡಿದ್ದರು. ಡೆಕ್ಕನ್ ಚಾರ್ಜರ್ಸ್ ತಂಡ 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದು ಬಿಟ್ಟರೆ ಉಳಿದಂತೆ ಕಳಪೆ ಸಾಧನೆ ಮುಂದುವರೆಸಿತ್ತು. ನಂತರ ತಂಡವನ್ನು ಸನ್ ನೆಟ್ವರ್ಕ್ ಖರೀದಿಸಿ ಸನ್ ರೈಸರ್ಸ್ ಹೆಸರಿನಲ್ಲಿ ಐಪಿಎಲ್ ನಲ್ಲಿ ಕಣಕ್ಕಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
P.K. Iyer, vice chairman of the Deccan Chronicle Holdings Ltd. (DCHL), was arrested from a hotel here on Saturday in connection with an alleged loan fraud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X