ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ 2.5 ಸಾವಿರ ಕೋಟಿ ಹಣ ಹೂಡಿಕೆ ಮಾಡಿದ್ದೆಲ್ಲಿ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜು.08: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇಂಗ್ಲೆಂಡ್ ನ ಕೆಂಟ್ ನ ಹೋಟೆಲ್ ನಲ್ಲಿ ಸಾವಿರ ಕೋಟಿಗೂ ಅಧಿಕ ಮೊತ್ತದ ಹಣ ತೊಡಗಿಸಿದ್ದಾನೆ ಎಂಬ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ನೀಡಿದೆ. ಅಲ್ಲದೇ ತುರ್ಕಿ ಮತ್ತು ಮೊರೊಕ್ಕೋದ ಕೆಲವು ಕಡೆಯೂ ದಾವೂದ್ ಹಣ ಹೂಡಿದ್ದಾನೆ ಎಂದು ತಿಳಿದು ಬಂದಿದೆ.

ಜಾರಿ ನಿರ್ದೇಶನಾಲಯ ಎಲ್ಲ ದೇಶಗಳ ರಾಯಭಾರ ಕಚೇರಿಗೆ ಪತ್ರ ಬರೆದಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಕೋರಿದೆ. ದೇಶಗಳ ನಡುವಿನ ಬಾಂಧವ್ಯಕ್ಕೆ ಅಡ್ಡಿಯಾಗದಂತೆ ಈ ಪ್ರಕರಣವನ್ನು ಬಗೆಹರಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.[ದಾವೂದ್ ಶರಣಾಗತಿ ತಪ್ಪಿಸಿದ್ದು ಪವಾರ್: ಜೇಠ್ಮಲಾನಿ]

pakistan

ಜಾರಿ ನಿರ್ದೇಶನಾಲಯ ದಾವೂದ್ ಗೆ ಸಂಬಂಧಿಸಿದ ಎಲ್ಲ ಆಸ್ತಿಯನ್ನು ಜಪ್ತಿ ಮಾಡಲು ಯೋಜನೆ ರೂಪಿಸುತ್ತಿದೆ. ಈ ಹಿಂದೆ ಅಮೆರಿಕ ಮತ್ತು ಸಿಂಗಪುರ್ ನಲ್ಲಿ ತೆಗೆದುಕೊಂಡಂತ ಕ್ರಮಗಳನ್ನೇ ಇಲ್ಲಿ ಮತ್ತೆ ಪುನರಾವರ್ತಿಸಲಿದೆ. ದಾವೂದ್ ಹಣ ಹೂಡಿಕೆ ಹಿಂದೆ ಇಕ್ಬಾಲ್ ಮಿರ್ಚಿ ಎಂಬಾತ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬುದನ್ನು ನಿರ್ದೇಶನಾಲಯ ತಿಳಿಸಿದೆ. ಇಂಗ್ಲೆಂಡಿನ ವಿವಿಧೆಡೆ 2,500 ಕೋಟಿಗೂ ಅಧಿಕ ಹಣವನ್ನು ದಾವೂದ್ ಹೂಡಿಕೆ ಮಾಡಿದ್ದಾನೆ ಎಂಬ ಮಾಹಿತಿಯನ್ನು ಒನ್ ಇಂಡಿಯಾಕ್ಕೆ ನಿರ್ದೇಶನಾಲಯ ತಿಳಿಸಿದೆ.[ದಾವೂದ್ ಎಲ್ಲಿದ್ದಾನೋ ನಮಗೆ ಗೊತ್ತಿಲ್ಲ]

ಯುಕೆಗೆ ಭೇಟಿ ನೀಡಲಿರುವ ತಂಡ
ನಿರ್ದೇಶನಾಲಯದ ನಾಲ್ಕು ಜನರ ಸಮಿತಿ ಯುಕೆ, ತುರ್ಕಿ ಮತ್ತು ಮೊರಾಕ್ಕೋಗೆ ಭೇಟಿ ನೀಡಿ ಇನ್ನಷ್ಟು ಮಾಹಿತಿ ಕಲೆ ಹಾಕಲಿದೆ. ಈಗಾಗಲೇ ಕೆಲ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಿಖೆ ವಿವಿಧ ಹಂತಗಳಲ್ಲಿ ನಡೆಯಲಿದೆ. ಗುಪ್ತಚರ ದಳ, ಸ್ಥಳೀಯ ಪೊಲೀಸ್, ಸಿಬಿಐ ಅಧಿಕಾರಿಗಳು ಇದಕ್ಕೆ ಕೈ ಜೋಡಿಸಲಿದ್ದಾರೆ.

ದುಬೈ ಮಾರುಕಟ್ಟೆಯಲ್ಲಿ ದಾವೂದ್ ಹೂಡಿಕೆ ಚಲನವಲನಗಳನ್ನು ಮೊದಲು ಬಂದ್ ಮಾಡಲಾಗುವುದು. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾಕಷ್ಟು ಹಣ ಹಾಕಿದ್ದು ಎಲ್ಲ ಮಾಹಿತಿಯನ್ನು ಬಹಿರಂಗ ಮಾಡಿ ದಾವೂದ್ ಹಣ ಹರಿವಿಗೆ ತಡೆ ಒಡ್ಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
A hotel in Kent, United Kingdom is under the radar after the Enforcement Directorate found that the Dawood Company had parked Rs 1,000 crore. Investigations have revealed that the D company had parked this mammoth amount as an investment in this hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X