ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ನಿಯಮದಡಿ ನೋಟುಗಳನ್ನು ನಿಷೇಧಿಸಲಾಗಿದೆ?

ಈಗ ಪ್ರಶ್ನೆ ಉದ್ಭವವಾಗಿರುವುದು, ಯಾವ ನಿಯಮದ ಅಡಿ ಇಂಥ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದೇ ಪ್ರಶ್ನೆ ಕೇಳಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಹೂಡಲಾಗಿದೆ.

By Prasad
|
Google Oneindia Kannada News

ಬೆಂಗಳೂರು, ನವೆಂಬರ್ 12 : ಮಂಗಳವಾರ, ನವೆಂಬರ್ 8ರಂದು ಸಂಜೆ 8 ಗಂಟೆಯ ಸುಮಾರಿಗೆ 500 ಮತ್ತು 1000 ರುಪಾಯಿ ನೋಟುಗಳ ಚಲಾವಣೆಯನ್ನು ನಿರ್ಬಂಧಿಸಿ ನರೇಂದ್ರ ಮೋದಿ ಆದೇಶ ಹೊರಡಿಸುತ್ತಿದ್ದಂತೆ, ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟುಗಳಲ್ಲಿ ಒಂದರ ಹಿಂದೊಂದರಂತೆ ಅರ್ಜಿಗಳನ್ನು ಹೂಡಲಾಯಿತು.

ರುಪಾಯಿ ನೋಟುಗಳ ಮೇಲೆ ಹೇರಲಾಗಿರುವ ನಿಷೇಧವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಹೂಡಲಾಗಿರುವ ಅರ್ಜಿಗಳ ವಿಚಾರಣೆ ನವೆಂಬರ್ 15ರಂದು ಸರ್ವೋಚ್ಚ ನ್ಯಾಯಾಲಯದ ಮುಂದೆ ಬರಲಿದೆ. ಇದೇ ಬಗೆಯ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಈಗಾಗಲೆ ಇತ್ಯರ್ಥಪಡಿಸಿದ್ದರಿಂದ ಇಲ್ಲಿ ಹೂಡಲಾಗಿದ್ದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿಯನ್ನು ಕೇಂದ್ರ ಸರಕಾರ ಈಗಾಗಲೆ ಸಲ್ಲಿಸಿದ್ದರಿಂದ, ಕೇಂದ್ರದ ವಾದವನ್ನು ಆಲಿಸದೆ ಯಾವುದೇ ನಿರ್ದೇಶನವನ್ನು ಸರ್ವೋಚ್ಚ ನ್ಯಾಯಾಲಯ ತೆಗೆದುಕೊಳ್ಳುವಂತಿಲ್ಲ. ಈಗ ಪ್ರಶ್ನೆ ಉದ್ಭವವಾಗಿರುವುದು, ಯಾವ ನಿಯಮದ ಅಡಿ ಇಂಥ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. [ದೊಡ್ಡ ನೋಟಿಲ್ಲದ ದಿನಗಳಲ್ಲಿ ಸಾಮಾನ್ಯರ ಬದುಕಿನ ಚಿತ್ರಗಳು...]

Currency ban- Here are the provisions under which the decision was taken

ಆ ನಿಯಮಗಳು ಕೆಳಗಿನಂತಿವೆ

* ಕೇಂದ್ರದ ಹಣಕಾಸು ಸಚಿವಾಲಯ ನವೆಂಬರ್ 8ರಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು, 500 ರು ಮತ್ತು 1000 ರು.ಗಳ ಎಲ್ಲಾ ನೋಟುಗಳನ್ನು ನವೆಂಬರ್ 9, 2016ರಿಂದ ನಿಷೇಧಿಸಲ್ಪಟ್ಟಿವೆ ಎಂದು ತಿಳಿಸಿದೆ.

* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1934ರ ನಿಮಯ 26ರ ಉಪನಿಯಮ 2ರ ಅಡಿಯಲ್ಲಿ ಈ 500 ರು. ಮತ್ತು 1000 ರು. ನೋಟುಗಳ ಬಳಕೆ ಅಕ್ರಮ ಎಂದು ಘೋಷಿಸಲಾಗಿದೆ. ಈ ನಿಯಮದ ಪ್ರಕಾರ, ಈ ನೋಟುಗಳು ಯಾವುದೇ ಕಾನೂನಿನ ಮಾನ್ಯತೆ ಪಡೆದಿರುವುದಿಲ್ಲ.

* ಸೆಂಟ್ರಲ್ ಬೋರ್ಡ್‌ನ ಶಿಫಾರಸಿನಂತೆ, ಬೇರೆ ಇನ್ನಾವುದೇ ಮೊತ್ತದ ನೋಟುಗಳನ್ನು ಕೂಡ ಗೆಜೆಟ್ ನೋಟಿಫಿಕೇಷನ್ ಮುಖಾಂತರ ನಿಷೇಧಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದೆ. [ಓದುಗರೊಬ್ಬರು ಪ್ರಶ್ನೆ ಕೇಳಿದ್ದಾರೆ, ಪ್ರಧಾನಿಗಳೇ ಉತ್ತರಿಸಿ!]

English summary
Prime Minister Narendra Modi on Tuesday announced that the Rs 500 and 1,000 notes shall cease to be legal tender from November 9 2016 onwards. The question now is under what provisions was this ban on currency imposed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X