ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲಿಯಂ ಬೇಹುಗಾರಿಕೆ: ಮಾಜಿ ಪತ್ರಕರ್ತ ಬಂಧನ

|
Google Oneindia Kannada News

ನವದೆಹಲಿ, ಫೆ. 20: ಪೆಟ್ರೋಲಿಯಂ ಸಚಿವಾಲಯದಲ್ಲಿ ನಡೆದ ಕಾರ್ಪೊರೇಟ್‌ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಮಾಜಿ ಪತ್ರಕರ್ತನನ್ನು ಬಂಧಿಸಿದ್ದಾರೆ.

ಮೆಟಿಸ್‌ ಬಿಸ್‌ನೆಸ್‌ ಸೊಲ್ಯುಶನ್ಸ್‌ ಪ್ರೈವೇಟ್‌ ಲಿಮಿಟೆಡ್‌ನ‌ ಸಿಇಓ ಪ್ರಯಾಸ್‌ ಜೈನ್‌ ಅವರನ್ನು ಬಂಧಿಸಿದ್ದ ಅಪರಾಧ ವಿಭಾಗದ ಪೊಲೀಸರು ಶುಕ್ರವಾರ ನಸುಕಿನ ವರೆಗೂ ವಿಚಾರಣೆ ನಡೆಸಿದ್ದರು. ಇದಾದ ನಂತರ ಮಾಜಿ ಪತ್ರಕರ್ತ ಶಂತನು ಸೈಕಿಯಾ ಅವರನ್ನು ವಶಕ್ಕೆ ತೆಗೆದಿಕೊಂಡಿದ್ದಾರೆ. ಇದರಿಂದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ 7 ಕ್ಕೆ ಏರಿದೆ.[ಅಧಿಕಾರಿಗಳಿಂದಲೇ ಬಿಬಿಎಂಪಿಗೆ 49 ಕೋಟಿ ನಾಮ!]

petrol

ಶಂತನು ಸೈಕಿಯ ಸದ್ಯ ಎನರ್ಜಿ ಪೋರ್ಟಲ್ ಎಂಬ ಸಂಸ್ಥೆ ನಡೆಸುತ್ತಿದ್ದು, ರಹಸ್ಯ ಕಡತಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ದೇಶದ ಮಹತ್ವದ ದಾಖಲೆಗಳನ್ನು ಕದ್ದು ಅನೇಕ ತೈಲ ಕಂಪೆನಿಗಳು ಹಾಗೂ ಖಾಸಗಿ ಸಲಹೆಗಾರರಿಗೆ ಮಾರಾಟ ಮಾಡಿ ಹಣಗಳಿಸುತ್ತಿದ್ದ ಎಂಬ ಮಾಹಿತಿ ಆಧಾರಲ್ಲಿ ಬಂಧನ ಮಾಡಲಾಗಿದೆ.

ನಕಲಿ ಕೀ ಬಳಸಿ ಕಡತಗಳನ್ನು ಸಚಿವಾಲಯದಿಂದ ಕದಿಯಲಾಗುತ್ತಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆಯಿದೆ.

English summary
Delhi Police crime branch has arrested former journalist Santnu Saikia and another energy consultant Prayas Jain on early Friday. Jain runs an oil and gas firm based in New Delhi and Melbourne. Saikia runs an energy portal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X