ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದರ್ ತೆರೇಸಾ ಭಾರತಕ್ಕೆ ಯಾಕೆ ಬಂದಿದ್ರು? ಆಸ್ಕ್ ಆರೆಸ್ಸೆಸ್

|
Google Oneindia Kannada News

ಕೇಂದ್ರದಲ್ಲಿ ಬಿಜೆಪಿ ಸರಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಹಿಂದೂ ಪರ ಸಂಘಟನೆಗಳ ಮುಖಂಡರ ಹೇಳಿಕೆಗಳು ಪುಂಖಾನುಪುಂಖವಾಗಿ ಹರಿದು ಬರುತ್ತಲೇ ಇದೆ.

ಇದಕ್ಕೆ ಲೇಟೆಸ್ಟ್ ಆಗಿ ಇನ್ನೊಂದು ಸೇರ್ಪಡೆಯಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಸೋಮವಾರ (ಫೆ 23) ನೀಡಿದ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಖಂಡನೆ/ ಸಮರ್ಥನೆ ವ್ಯಕ್ತವಾಗುತ್ತಿದೆ. (ಸಂತರ ಸಮ್ಮೇಳನದಲ್ಲಿ ಮರು ಮತಾಂತರಕ್ಕೆ ಚಾಲನೆ)

ಸಂಸತ್ತಿನ ಬಜೆಟ್ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ RSS ಮುಖಂಡ ಮೋಹನ್ ಭಾಗವತ್ ಹೇಳಿಕೆ ಬಿಜೆಪಿಗೆ ತೀವ್ರ ಮುಜುಗರವನ್ನು ತಂದೊಡ್ಡದೇ ಇರಲಾರದು.

ಪ್ರಮುಖ ವಿಷಯದ ಚರ್ಚೆಯ ಬದಲು ವಿಪಕ್ಷಗಳು ಈ ವಿಚಾರವನ್ನೇ ಪ್ರಮುಖವಾಗಿ ಅಸ್ತ್ರವಾಗಿ ಬಳಸಿಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ.

ನೊಬೆಲ್ ಪ್ರಶಸ್ತಿ ವಿಜೇತೆ ದಿವಂಗತ ಮದರ್ ತೆರೆಸಾ ಅವರ ಸಾಮಾಜಿಕ ಕಾಳಜಿಯನ್ನು ಮೋಹನ್ ಭಾಗವತ್ ಪ್ರಶ್ನಿಸಿದ್ದಾರೆ.

ಇವರ ಸಾಮಾಜಿಕ ಕಳಕಳಿಯ ಹಿಂದೆ ಮತಾಂತರದ ಉದ್ದೇಶ ಯಾಕಿರಬಾರದು ಎನ್ನುವ ಗಂಭೀರ ಪ್ರಶ್ನೆಯನ್ನು ಭಾಗವತ್ ಎತ್ತಿದ್ದಾರೆ. ಮುಂದೆ ಓದಿ..

ಭಾಗವತ್ ವಿವಾದಾತ್ಮಕ ಹೇಳಿಕೆ

ಭಾಗವತ್ ವಿವಾದಾತ್ಮಕ ಹೇಳಿಕೆ

ರಾಜಸ್ಥಾನದ ಭರತ್ ಪುರದಲ್ಲಿ ಸೋಮವಾರ (ಫೆ 24) ಮಾತನಾಡುತ್ತಿದ್ದ ಭಾಗವತ್ , ಮದರ್ ತೆರೆಸಾ ಅವರ ಬಡವರ ಸೇವೆ ನಿಸ್ವಾರ್ಥವಾಗಿದ್ದಿರಬಹುದು. ಆದರೆ ಅವರ ಸೇವೆಯ ಹಿಂದೆ ಕ್ರೈಸ್ತ ಧರ್ಮದ ಮತಾಂತರದ ಉದ್ದೇಶವಿತ್ತು ಎಂದು ಹೇಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವತ್

ನಮ್ಮ ದೇಶದಲ್ಲಿ ಯಾವುದೇ ಸಾಮಾಜಿಕ ಕಳಕಳಿಯ ಚಟುವಟಿಕೆಗಳ ಹಿಂದೆ ಒಂದು ಉದ್ದೇಶ ಇದ್ದೇ ಇರುತ್ತದೆ. ನಿಸ್ವಾರ್ಥವಾಗಿ ಸಾಮಾಜಿಕ ಚಟುವಟಿಕೆಗಳು ನಡೆಯುವ ಉದಾಹರಣೆಗಳು ನಮ್ಮಲ್ಲಿ ವಿರಳ ಎಂದು ಭಾಗವತರ್ ಭರತ್ ಪುರದಲ್ಲಿ ಅನಾಥಶ್ರಮವೊಂದನ್ನು ಉದ್ಘಾಟಿಸಿ, ಸಭೆಯನ್ನು ಉದ್ದೇಶಿಸಿ ಈ ರೀತಿಯ ಹೇಳೀಕೆಯನ್ನು ನೀಡಿದ್ದಾರೆ.

ಒಂದು ವಾರದ ಹಿಂದೆ ಮೋದಿ ಹೇಳಿದ್ದೇನು

ಒಂದು ವಾರದ ಹಿಂದೆ ಮೋದಿ ಹೇಳಿದ್ದೇನು

ಒಂದು ವಾರದ ಹಿಂದೆ ಪ್ರಧಾನಿ ಮೋದಿ, ದೇಶದಲ್ಲಿ ಎಲ್ಲಾ ಜಾತಿ, ಕೋಮಿನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಭಾರತೀಯರು ಯಾವುದೇ ಜಾತಿಯವರ ಜೊತೆ ತಮ್ಮನ್ನು ಗುರುತಿಸಿಕೊಳ್ಳಲು ಯಾವುದೇ ಅಡೆತಡೆ ಇಲ್ಲ ಎಂದು ಹೇಳಿದ್ದರು.

ಅರವಿಂದ್ ಕೇಜ್ರಿವಾಲ್ ಹೇಳಿಕೆ

ದಯವಿಟ್ಟು ಮದರ್ ತೆರೆಸಾ ಅವರನ್ನು ಬಿಟ್ಟುಬಿಡಿ. ನಾನು ಈ ಹಿಂದೆ ಮದರ್ ತೆರೆಸಾ ಜೊತೆ ಕೊಲ್ಕತ್ತಾದ ನಿರ್ಮಲ್ ಹೃದಯ್ ಆಶ್ರಮದಲ್ಲಿ ಕೆಲಸ ಮಾಡಿದ್ದೇನೆ. ಅವರು ಉದಾತ್ತ ಧ್ಯೇಯ ಹೊಂದಿರುವ ಚೈತನ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ವಿಪಕ್ಷಗಳ ಟೀಕೆ

ವಿಪಕ್ಷಗಳ ಟೀಕೆ

ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಭಾಗವತ್ ಹೇಳಿಕೆಯನ್ನು ಖಂಡಿಸಿವೆ. ಈ ವಿಷಯವನ್ನು ನಾವು ಸದನದಲ್ಲಿ ಪ್ರಸ್ತಾಪಿಸುತ್ತೇವೆ. ಮದರ್ ತೆರೆಸಾ ಅವರನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ. ಬಿಜೆಪಿ ಕೂಡಲೇ ಕ್ಷಮೆಯಾಚಿಸ ಬೇಕೆಂದು ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಆಗ್ರಹಿಸಿದ್ದಾರೆ.

English summary
RSS chief Mohan Bhagwat on Monday (Feb 23) said there was a motive behind the service Mother Teresa provided to the poor — to convert them to Christianity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X