ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಂದು 11, ಇಂದು 300ಪ್ಲಸ್

ದೇಶದ ಪುರಾತನ ಪಕ್ಷ ಕಾಂಗ್ರೆಸ್ಸಿಗೆ ಬಿಜೆಪಿ ರಾಜಕೀಯ ಪಾಠವನ್ನು ಪ್ರತಿ ಚುನಾವಣೆಯಲ್ಲೂ ಹೇಳಿಕೊಡುತ್ತಿದೆ. 1980ರಲ್ಲಿ ಉತ್ತರಪ್ರದೇಶದಲ್ಲಿ ಕೇವಲ 11 ಸೀಟು ಗೆದ್ದಿದ್ದ ಬಿಜೆಪಿ ಈಗ 300ಪ್ಲಸ್ ಸ್ಥಾನಗಳಿಸಿದೆ. ಕಾಂಗ್ರೆಸ್ ಕಥೆ ಏನು

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 11: ಪ್ರಧಾನಿ ಮೋದಿ ಅವರು ಸೆಹ್ವಾಗ್ ರಂತೆ ತ್ರಿಶತಕ ಬಾರಿಸಿದರು ಎಂಬ ಹುಬ್ಬೇರಿಸುವಂತೆ ಮಾಡುತ್ತದೆ ನಿಜ. ಸಮೀಕ್ಷೆಗಳ ನಿರೀಕ್ಷೆಯನ್ನು ಮೀರಿ 300 ಪ್ಲಸ್ ಸ್ಥಾನಗಳನ್ನು ಬಿಜೆಪಿ ಬಾಚಿಕೊಂಡಿದೆ. ಇದರ ಜತೆಗೆ ಅಂದಿನಿಂದ ಇಂದಿನವರೆಗೂ ನಡೆದಿರುವ ಬಿಜೆಪಿ vs ಕಾಂಗ್ರೆಸ್ ನ ಜಟಾಪಟಿಯ ವಿವರ ನಿಮ್ಮ ಮುಂದಿದೆ.

ಉತ್ತರಪ್ರದೇಶ ರಾಜ್ಯ ಅತ್ಯಂತ ಸಂಕೀರ್ಣವಾದ ಚುನಾವಣಾ ಕ್ಷೇತ್ರ. ಸಾಮಾನ್ಯವಾಗಿ ಪ್ರಾದೇಶಿಕ ಪಕ್ಷಗಳಿಗೆ ಜಾತಿ ನಂಬಿಕೊಂಡವರ ಮತ ಬೀಳುತ್ತಾ ಬಂದಿದೆ. ಆರ್ ಎಲ್ ಡಿಗೆ ಜಾಟ್ ಗಳ ಮತ, ಬಿಎಸ್ ಪಿಗೆ ಜಾತವ್, ಭಾರತೀಯ ಸಮಾಜ್ ಪಾರ್ಟಿಗೆ ರಾಜ್ ಭರ್ ಸಮುದಾಯ ಬೆಂಬಲಕ್ಕೆ ನಿಲ್ಲುವುದು ಮಾಮೂಲಿ. ಆದರೆ, ಈ ಬಾರಿ ಬಿ ಎಸ್ ಪಿಯಿಂದ ಜಾತವ್ ಮತಗಳನ್ನು ಬಿಜೆಪಿ ಕಸಿದುಕೊಂಡಿದೆ. ಶೇ 43ರಷ್ಟು ಬಿಜೆಪಿಯತ್ತ ವಾಲಿದ್ದು, ಬಿಜೆಪಿ ಎಲ್ಲೆಡೆ ಭಾರಿ ಮುನ್ನಡೆ ಗಳಿಸಲು ಸಾಧ್ಯವಾಗಿದೆ.

ಜತೆಗೆ ಕುರ್ಮಿ, ಲೋಧ್ ಜನಾಂಗ, ಮುಸ್ಲಿಂ ಮತಗಳು, ಮೇಲ್ವರ್ಗದ ಬ್ರಾಹ್ಮಣ ಮತಗಳು ಕೂಡಾ ಎಂದಿಗೂ ನಿರ್ಣಾಯಕ. ಕಾಂಗ್ರೆಸ್ ಪಕ್ಷ 1980ರಿಂದ ಅಲ್ಪಸಂಖ್ಯಾತರ ಬೆಂಬಲದಿಂದಲೆ ಗೆದ್ದುಕೊಂಡು ಬಂದಿತ್ತು. ಬಿಎಸ್ಪಿ ಅಧಿಕಾರಕ್ಕೆ ಬಂದಾಗ ಮಾಯಾವತಿ ಅವರು ಬ್ರಾಹ್ಮಣರಿಗೂ ಮೀಸಲಾತಿ ಘೋಷಿಸಿದ್ದರು. ಆದರೆ, ಈ ಬಾರಿ ಬಿಜೆಪಿ ಗೆಲ್ಲಿಸಿದ್ದು ಒಬಿಸಿ ಮತಗಳು.. ಗೆಲುವಿನ ಕಾರಣ ಏನೇ ಇರಲಿ.. 1980ರಲ್ಲಿ 11 ಸ್ಥಾನ ಗೆದ್ದಿದ್ದ ಬಿಜೆಪಿ ಈಗ 300ಪ್ಲಸ್ ಸ್ಥಾನಗಳಿಸಿದೆ.. ಮಿಕ್ಕ ಅಂಕಿ ಅಂಶ ಮುಂದೆ ನೋಡಿ

 ಜಾತಿ ನಂಬಿ ಗೆದ್ದ ಬಿಜೆಪಿ

ಜಾತಿ ನಂಬಿ ಗೆದ್ದ ಬಿಜೆಪಿ

ಯಾದವೇತರ ಮತಗಳತ್ತ ಗಮನ ಹರಿಸುವ ಮೂಲಕ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ. ಒಬಿಸಿ ಮತಗಳು, ಅಖಿಲೇಶ್ ಸರ್ಕಾರ ಮರೆತ ಬುಡಕಟ್ಟು ಜನಾಂಗ, ಜಾತಿ, ಮತ ಪಂಥಗಳ ಓಲೈಕೆ ಮೂಲಕ ಬಿಜೆಪಿ ಶೇ 57ರಷ್ಟು ಕುರ್ಮಿ, ಶೇ 63ರಷ್ಟು ಲೋಧ್, ಶೇ 60 ರಷ್ಟು ಇತತೆ ಒಬಿಸಿ ಮತಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. 2012ರಲ್ಲಿ ಎಸ್ ಪಿಯನ್ನು ಗೆಲ್ಲಿಸಿದ್ದ ಇದೇ ಸಮುದಾಯಗಳು ಈಗ ಮೋದಿ ಮುಖ ನೋಡಿಕೊಂಡು ಬಿಜೆಪಿಗೆ ಮಣೆ ಹಾಕಿವೆ.

1980-2017- ಬಿಜೆಪಿ

ವರ್ಷ: ಗಳಿಸಿದ ಸ್ಥಾನಗಳು
1980-11 ಸ್ಥಾನ

1985-16
1989-57

1991-221
1993-177
1996-174
2002-88
2007-51
2012-47

2017-300+

1980-2017- ಕಾಂಗ್ರೆಸ್

ವರ್ಷ -ಸ್ಥಾನಗಳು
1980-309

1985-269

1989-94

1991-46

1993-28

1996-33

2002-25

2007-22

2012-28

2017--??

ಅತಿ ಹೆಚ್ಚು ಮತ ಪಡೆದವರು

1951: INC 388 ಗಳಿಸಿದ್ದು ಅತಿ ಹೆಚ್ಚು ಗಳಿಸಿತ್ತು. ಮಿಕ್ಕಂತೆ ಯಾವ ಪಕ್ಷ ಎಷ್ಟು ಗಳಿಸಿತ್ತು ನೋಡಿ

ಉತ್ತರಪ್ರದೇಶ ಚುನಾವಣೆ

ಉತ್ತರಪ್ರದೇಶ ಚುನಾವಣೆಯ ಕುತೂಹಲಕಾರಿ ಅಂಕಿ ಅಂಶಗಳು

English summary
Congress vs BJP Statistics from 1980 till 2017 Uttar Pradesh assembly Election is here by statistician Mohandas Menon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X