ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ದಿಗ್ವಿಜಯ್ ಕಿತ್ತಾಕಿ-ರೇಣುಕಾ ಚೌಧರಿ ಗರಂ

ಪಂಚ ರಾಜ್ಯಗಳ ಚುನಾವಣೆ ನಂತರ ಕಾಂಗ್ರೆಸ್ ಪಕ್ಷದೊಳಗಿನ ಕಾದಾಟ ನಿಲ್ಲವಂತೆ ಕಾಣುತ್ತಿಲ್ಲ. ಗೋವಾದಲ್ಲಿ ಕಾಂಗ್ರೆಸ್ ಸೋಲು 'ಮೂರ್ಖ'ತನದ್ದು ಎಂದಿರುವ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ, ದಿಗ್ವಿಜಯ್ ಸಿಂಗ್ ಮೇಲೆ ಹರಿಹಾಯ್ದಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 14: ಪಂಚ ರಾಜ್ಯಗಳ ಚುನಾವಣೆ ನಂತರ ಕಾಂಗ್ರೆಸ್ ಪಕ್ಷದೊಳಗಿನ ಕಾದಾಟ ನಿಲ್ಲವಂತೆ ಕಾಣುತ್ತಿಲ್ಲ. ಗೋವಾದಲ್ಲಿ ಕಾಂಗ್ರೆಸ್ ಸೋಲು 'ಮೂರ್ಖ'ತನದ್ದು ಎಂದಿರುವ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ, ದಿಗ್ವಿಜಯ್ ಸಿಂಗ್ ಮೇಲೆ ಹರಿಹಾಯ್ದಿದ್ದಾರೆ.

ಗೋವಾ ಸೋಲಿಗೆ ದಿಗ್ವಿಜಯ್ ಸಿಂಗ್ ಅವರೇ ಹೊಣೆ ಹೊರಬೇಕು. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅವರನ್ನು ಕಿತ್ತೊಗೆಯುವಂತೆ ರೇಣುಕಾ ಚೌಧರಿ ಒತ್ತಾಯಿಸಿದ್ದಾರೆ.[ಅಂತಿಮ ಫಲಿತಾಂಶ: ಗೋವಾ ಅತಂತ್ರ, ಮುಂದೇನಾಗಬಹುದು?]

Congress rebellion: Goa loss stupid, sack Digvijaya demands Renuka Chowdhary

ಸಂಕಷ್ಟದ ಪರಿಸ್ಥಿತಿಯಲ್ಲಿ ಪಕ್ಷ ಕಟ್ಟಲು ಪ್ರಾದೇಶಿಕ ನಾಯಕರಿಗೆ ಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಗೋವಾ ಚುನಾವಣಾ ಫಲಿತಾಂಶದ ನಂತರ ನಿಧಾನವಾಗಿ ಗೋವಾದತ್ತ ಧಾವಿಸಿದ್ದಕ್ಕೆ ಟೀಕೆಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ರೇಣುಕಾ ಬಾಯಿಯಿಂದ ಈ ಮಾತು ಹೊರ ಬಂದಿದೆ.

ಈ ಹಿಂದೆ ಕಾಂಗ್ರೆಸ್ ಪಕ್ಷದ ಶಾಸಕ ವಿಶ್ವಜಿತ್ ರಾಣೆ ಕಾಂಗ್ರೆಸ್ ಗೋವಾದಲ್ಲಿ ತುಂಬಾ ನಿಧಾನವಾಗಿ ನಿರ್ಧಾರಗಳನ್ನು ತೆಗೆದುಕೊಂಡಿತು. ಇದರಿಂದ ಬಿಜೆಪಿ ಪರಿಸ್ಥಿತಿಯ ಲಾಭ ಪಡೆದುಕೊಂಡಿತು. ಗೋವಾದಲ್ಲಿ 17 ಸ್ಥಾನಗಳನ್ನು ಗೆದ್ದೂ ಸರಕಾರ ರಚಿಸಲಾಗದೆ ಇರುವುದು ಕಾಂಗ್ರೆಸ್ ಪಕ್ಷದ ಸೋಲು. ನಾನು ಒಬ್ಬೊಬ್ಬರ ಹೆಸರನ್ನು ಉಲ್ಲೇಖಿಸಲು ಇಷ್ಟಪಡುವುದಿಲ್ಲ. ಆದರೆ ಇದು ಕಾಂಗ್ರೆಸ್ ನಾಯಕತ್ವದ ಸೋಲು ಎಂದು ಹೇಳಿದ್ದರು.[LIVE: ಗೋವಾ : ಬಹುಮತ ಸಾಬೀತುಪಡಿಸಲು ಸುಪ್ರೀಂ ಸೂಚನೆ]

ಇನ್ನು ಕಾಂಗ್ರೆಸ್ ಇನ್ನೊಬ್ಬ ನಾಯಕ ಸತ್ಯಜಿತ್ ಚತುರ್ವೇದಿ ಕೂಡಾ ಸರಕಾರ ರಚಿಸದೆ ಪಕ್ಷ ಸೋತಿದ್ದಕ್ಕೆ ಪಕ್ಷದ ನಾಯಕತ್ವವೆ ಕಾರಣ ಎಂದಿದ್ದರು.

English summary
The worries for the Congress seem to be never ending. Renuka Chowdhary has gone on to slam Digvijaya Singh by calling the Goa loss, 'stupid.' The former Union Minister has also sought for the removal of Singh from the post of Congress General Secretary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X