ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶ : 105 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಅಂತಿಮ

By Sachhidananda Acharya
|
Google Oneindia Kannada News

ಲಕ್ನೊ, ಜನವರಿ 22: ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಕೊನೆಗೂ ಸೀಟು ಹಂಚಿಕೆ ಮುಗಿದಿದೆ. ಕಾಂಗ್ರೆಸ್ ಪಕ್ಷಕ್ಕೆ105 ಸೀಟುಗಳನ್ನು ಸಮಾಜವಾದಿ ಪಕ್ಷ ಬಿಟ್ಟುಕೊಟ್ಟಿದ್ದು ಉಳಿದ 298 ಸ್ಥಾನಗಳಿಗೆ ತಾನೇ ಸ್ಪರ್ಧಿಸಲಿದೆ.

ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಜನವರಿ 24 ಕೊನೆಯ ದಿನವಾಗಿದ್ದು, ಇನ್ನೆರಡು ದಿನಗಳಷ್ಟೆ ಬಾಕಿ ಉಳಿದಿವೆ. ಈ ಹಂತದಲ್ಲಿ ಸತತ ಮಾತುಕತೆಗಳ ನಂತರ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಕ್ಕೆ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿದೆ.[ಉತ್ತರಪ್ರದೇಶ ಚುನಾವಣಾ ಪ್ರಚಾರ: ಅಡ್ವಾಣಿ, ಜೋಷಿಗೆ ಹಿನ್ನಡೆ]

 Congress gets 105 seats as alliance with SP

ಶನಿವಾರ ಒಂದು ಹಂತದಲ್ಲಿ ಸೀಟು ಹಂಚಿಕೆ ಸಾಧ್ಯವಾಗದೆ ಮೈತ್ರಿ ಮುರಿದುಕೊಳ್ಳುವ ಹಂತ ತಲುಪಿತ್ತು. ಕಾಂಗ್ರೆಸ್ ಪಕ್ಷ ತನಗೆ 120 ಸೀಟುಗಳು ಬೇಕು ಎಂದು ಪಟ್ಟು ಹಿಡಿದು ಕೂತಿತ್ತು. ಆದರೆ ಎಸ್ಪಿ ಕೇವಲ 99 ಸೀಟುಗಳನ್ನು ಬಿಟ್ಟುಕೊಡಲಷ್ಟೇ ಸಿದ್ದವಾಗಿತ್ತು. ಇದೀಗ ಕೊನೆಗೂ ಒಂದು ಅಂತಿಮ ನಿರ್ಧಾರಕ್ಕೆ ಎರಡೂ ಪಕ್ಷಗಳು ಬಂದಿವೆ.[ಉತ್ತರಪ್ರದೇಶ: ಶಿವಪಾಲ್ ಸೇರಿದಂತೆ 191 ಅಭ್ಯರ್ಥಿಗಳ ಪಟ್ಟಿ ಪ್ರಕಟ]

ಇನ್ನು ಸೋಮವಾರ ಅಖಿಲೇಶ್ ಯಾದವ್ ತಮ್ಮ ಪಕ್ಷದ ಚುನಾವಣಾ ಪ್ರನಾಳಿಕೆ ಘೋಷಿಸುವ ಸಾಧ್ಯತೆ ಇದೆ. ತನ್ನ ಮತ ಬ್ಯಾಂಕ್ ಗಟ್ಟಿಗೊಳಿಸಲು, ಅಲ್ಪಸಂಖ್ಯಾತರು ಯುವಕರು ಮತ್ತು ಹಿಂದುಳಿದವರಿಗೆ ಹೆಚ್ಚಿನ ಘೋಷಣೆಗಳನ್ನು ಪ್ರನಾಳಿಕೆಯಲ್ಲಿ ನೀಡಲಿದ್ದಾರೆ ಎನ್ನಲಾಗಿದೆ.

English summary
Congress gets 105 seats as alliance with SP ahead of first face nomination ends on 24 January.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X