ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ನರೇಂದ್ರ ಮೋದಿಗೆ ಹೊಸ ಬಿರುದು ನೀಡಿದ ಕಾಂಗ್ರೆಸ್!

ಯುಪಿಎ ಸರಕಾರ ಜಾರಿಗೆ ತಂದ ಸ್ಕೀಂಗಳಿಗೆ ಹೊಸ ರೂಪವನ್ನು ಕೊಟ್ಟು ಅಧಿಕಾರ ನಡೆಸುತ್ತಿದ್ದಾರೆ. ಮೋದಿಯನ್ನು ಪ್ರಧಾನಿ ಎನ್ನುವ ಬದಲು 'ರಿಪ್ಯಾಕೇಜಿಂಗ್ ಮಿನಿಸ್ಟರ್'ಎನ್ನುವುದು ಸೂಕ್ತ ಎಂದು ಕಾಂಗ್ರೆಸ್ ಜರಿದಿದೆ.

By Balaraj
|
Google Oneindia Kannada News

ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯವೈಖರಿ ಟೀಕಿಸುವ ಯಾವ ಅವಕಾಶವನ್ನೂ ಕೈಚೆಲ್ಲದ ಕಾಂಗ್ರೆಸ್, ಕೇಂದ್ರದಲ್ಲಿ ಬಿಜೆಪಿಯ ಎರಡುವರೆ ವರ್ಷದ ಆಡಳಿತಕ್ಕೆ ಪಿಎಂಗೆ ಹೊಸ ಬಿರುದು ನೀಡುವ ಮೂಲಕ ವ್ಯಂಗ್ಯವಾಡಿದೆ.

ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ ಮೂವತ್ತು ತಿಂಗಳಾಗುತ್ತಾ ಬಂತು, ಇನ್ನೂ ಮೋದಿ ಸರಕಾರ ಯಾವುದೇ ಸ್ವಂತದ ಯೋಜನೆ ಅಥವಾ ಪಾಲಿಸಿಯನ್ನು ಜಾರಿಗೆ ತಂದಿಲ್ಲ.

ಯುಪಿಎ ಸರಕಾರ ಜಾರಿಗೆ ತಂದ ಸ್ಕೀಂಗಳಿಗೆ ಹೊಸ ರೂಪವನ್ನು ಕೊಟ್ಟು ಅಧಿಕಾರ ನಡೆಸುತ್ತಿದ್ದಾರೆ. ಮೋದಿಯನ್ನು ಪ್ರಧಾನಿ ಎನ್ನುವ ಬದಲು 'ರಿಪ್ಯಾಕೇಜಿಂಗ್ ಮಿನಿಸ್ಟರ್' ಎನ್ನುವುದು ಸೂಕ್ತ ಎಂದು ಕಾಂಗ್ರೆಸ್ ಜರಿದಿದೆ. (ಮೋದಿಗೆ ಹೊಸ ಬಿರುದು)

ಪ್ರಧಾನಿ ದೇಶ ಸುತ್ತುತ್ತಾ ಭಾಷಣ ಮಾಡುತ್ತಿರುತ್ತಾರೆ, ಆದರೆ ಇವರ ಭಾಷಣವನ್ನು ಯಾರಾದರೂ ಆಲಿಸುವರೇ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಗಂಭೀರವಾಗಿ ಇನ್ನಾದರೂ ಕೆಲಸ ಮಾಡಿ ಎಂದು ಮೋದಿಗೆ ಕಿವಿಮಾತು ಹೇಳಿದೆ.

ವಿರೋಧಿಗಳನ್ನು ಟೀಕಿಸಲು ಸಾಮಾಜಿಕ ತಾಣವನ್ನು ಬಳಸಿಕೊಳ್ಳುತ್ತಿರುವ ಮೋದಿ ಸರಕಾರ, ಇದಕ್ಕಾಗಿ 1400 ಜನರನ್ನು ಬಳಸಿಕೊಳ್ಳುತ್ತಿದೆ. ಇದರಲ್ಲಿ ಬಹಳಷ್ಟು ಜನ ದಲಿತ, ಮುಸ್ಲಿಂ ವಿರೋಧಿಗಳು ಎಂದು ಕಾಂಗ್ರೆಸ್ ಮುಖಂಡ ಅಜಯ್ ಮೇಕನ್ ಹೇಳಿದ್ದಾರೆ.

ಮೋದಿ ವಿರುದ್ದ ಟ್ವೀಟ್ ಪ್ರವಾಹವನ್ನೇ ಕಾಂಗ್ರೆಸ್ ಹರಿಸಿದೆ. ಕೆಲವೊಂದು ಮುಂದೆ ಓದಿ..

ಜನರು ಮೋದಿ ಮಾತಿಗೆ ಬೆಲೆ ಕೊಡುವುದಿಲ್ಲ

ಸರ್ವಿಸ್ ಚಾರ್ಜ್ ಕಡ್ಡಾಯವಲ್ಲ ಎಂದು ಪ್ರಧಾನಿ ಹೇಳುತ್ತಾರೆ, ಆದರೆ ಅವರ ಮಾತನ್ನು ಯಾರೂ ಕೇಳುತ್ತಿಲ್ಲ.

ಸಾಮಾಜಿಕ ತಾಣ

ಇವರು ವಿಶ್ವದ ಏಕೈಕ ಪ್ರಧಾನಿ ಇವರು 1400 ಜನರನ್ನು ಹಿಂಬಾಲಿಸುತ್ತಾರೆ. ಇವರಲ್ಲಿ 150 ಜನ ದಲಿತ, ಮುಸ್ಲಿಂ ವಿರೋಧಿಗಳು. ಇಂತವರ ಬಾಯಿಯಿಂದ ಬೇಟಿ ಬಚಾವೋ ಘೋಷಣೆ ಹೊರಬೀಳುತ್ತದೆ.

ದೇಶವನ್ನು ಉದ್ದೇಶಿಸಿ ಭಾಷಣ

ಮೋದಿ ಇದೇ ಮೊದಲ ಬಾರಿಗೆ 'ಮಿತ್ರೋಂ'ಎನ್ನುವ ಪದವನ್ನು ಬಳಸಿಲ್ಲ. ಯಾಕೆಂದರೆ ಇದರ ವಿರುದ್ದ ಸಾಮಾಜಿಕ ತಾಣದಲ್ಲಿ ವ್ಯಂಗ್ಯವಾಡಲಾಗುತ್ತಿದೆ.

ದಿನಾಂಕ ಬದಲು

ದಶಕಗಳಿಂದ ಆಯವ್ಯಯ ಪತ್ರವನ್ನು ಫೆ28ಕ್ಕೆ ಮಂಡಿಸಲಾಗುತ್ತಿತ್ತು. ಮೋದಿ ಅದನ್ನು ಚುನಾವಣೆಗಾಗಿ ಫೆಬ್ರವರಿ ಒಂದನೇ ತಾರೀಕಿಗೆ ಬದಲಾಯಿಸಿದ್ದಾರೆ.

ಅಪನಗದೀಕರಣ

ಅಪನಗದೀಕರಣದ ಲಾಭ ಯಾರಿಗೆ, ಕಷ್ಟಪಟ್ಟು ದುಡಿಯುವವರಿಗೆ ದುಡ್ಡು ಸಿಗುತ್ತಿಲ್ಲ.

English summary
Its been 30 months and we are still waiting for some original policies by the Modi Govt. Congress blamed PM Narendra Modi for repackaging UPA schemes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X