ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 1ರಿಂದ ಆಗಲಿರುವ ತೆರಿಗೆ ಬದಲಾವಣೆ ಬಗ್ಗೆ ನಿಮಗೆಷ್ಟು ಗೊತ್ತು?

ಏಪ್ರಿಲ್ 1, 2017ರಿಂದ ತೆರಿಗೆ ವಿಚಾರದಲ್ಲಿ ಹಲವು ಬದಲಾವಣೆಗಳು ಆಗಲಿವೆ. ಆ ಬಗ್ಗೆ ನಿಮಗೆ ತಿಳಿದಿರಬೇಕಾದ ಪ್ರಮುಖ ಅಂಶಗಳನ್ನು ಇಲ್ಲಿ ಕೊಡಲಾಗಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 28: ಏಪ್ರಿಲ್ 1ರಿಂದ ತೆರಿಗೆಯಲ್ಲಿ ಆಗಿರುವ ಬದಲಾವಣೆಗಳು ಅನ್ವಯವಾಗಲಿವೆ. ಆ ಬಗ್ಗೆ ನಿಮಗೆ ತಿಳಿದಿರಬೇಕಾದ ಮಾಹಿತಿ ಇಲ್ಲಿದೆ. ಬಜೆಟ್ ನಲ್ಲಿ ಮಾಡಿದ್ದ ಬದಲಾವಣೆಯನ್ನು ಒಳಗೊಂಡ ಹಣಕಾಸು ಮಸೂದೆ ಈಚೆಗೆ ಲೋಕಸಭೆಯಲ್ಲಿ ಅಂಗೀಕಾರವಾಯಿತು. ಈ ಮಸೂದೆ ಪ್ರಕಾರ ತೆರಿಗೆ ಪಾವತಿಸಲು ಆಧಾರ್ ಕಡ್ಡಾಯವಾಗಿರಬೇಕು.

ಅಂದಹಾಗೆ, ತೆರಿಗೆಯಲ್ಲಿ ಅದ್ಯಾವ ಬದಲಾವಣೆಗಳು ಆಗಲಿವೆ ಎಂಬುದು ತಿಳಿದುಕೊಳ್ಳಬೇಕಲ್ಲವಾ?

Come April 1 and here is everything you should know about tax changes

* ಯಾರಿಗೆ ತೆರಿಗೆ ವ್ಯಾಪ್ತಿಗೆ ಬರುವ ಆದಾಯ 3.5 ಲಕ್ಷ ರುಪಾಯಿ ಇರುತ್ತದೋ ಅವರು 2,575 ರುಪಾಯಿ ತೆರಿಗೆ ಕಟ್ಟಬೇಕು. ಈ ಹಿಂದೆ ಇಷ್ಟೇ ಆದಾಯಕ್ಕೆ 5,150 ರುಪಾಯಿ ತೆರಿಗೆ ಕಟ್ಟಬೇಕಿತ್ತು.[ತಮಿಳುನಾಡಿನ ವ್ಯಾಪಾರಿಯಿಂದ PMGKYಗೆ 246 ಕೋಟಿ ಜಮೆ]

* 2.5 ಲಕ್ಷದಿಂದ 5 ಲಕ್ಷದವರೆಗೆ ಅದಾಯ ಇರುವವರು ಈ ಹಿಂದೆ ಶೇ 10ರಷ್ಟು ತೆರಿಗೆ ಪಾವತಿಸಬೇಕಿತ್ತು. ಅದೀಗ ಶೇ 5ಕ್ಕೆ ಇಳಿಸಲಾಗಿದೆ. ಇದರಿಂದ ತೆರಿಗೆದಾರರಿಗೆ ವರ್ಷಕ್ಕೆ 12,500 ರುಪಾಯಿ ವರ್ಷಕ್ಕೆ ಉಳಿತಾಯ ಆಗುತ್ತದೆ. ಒಂದು ಕೋಟಿ ರುಪಾಯಿಗಿಂತ ಹೆಚ್ಚು ಆದಾಯ ಇರುವವರಿಗೆ 14,806 ರುಪಾಯಿ ಉಳಿತಾಯವಾಗುತ್ತದೆ.

Come April 1 and here is everything you should know about tax changes

* 50 ಲಕ್ಷದಿಂದ 1 ಕೋಟಿ ರುಪಾಯಿವರೆಗೆ ಆದಾಯ ಇರುವವರಿಗೆ ತೆರಿಗೆಯ ಶೇ 10ರಷ್ಟು ಸರ್ ಚಾರ್ಜ್ ಹಾಕಲಾಗುತ್ತದೆ.

* ಸ್ಥಿರಾಸ್ತಿಯನ್ನು ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಇರಿಸಿಕೊಂಡಿದ್ದರೆ ಶೇ 20ರಷ್ಟು ತೆರಿಗೆ ಹಾಕಲಾಗುತ್ತದೆ. ಒಂದು ವೇಳೆ ಬಂದ ಮೊತ್ತವನ್ನು ಮತ್ತೆ ಹೂಡಿಕೆ ಮಾಡಿದರೆ ತೆರಿಗೆ ವಿನಾಯ್ತಿ ಇದೆ.[ಐಟಿ ರಿಟರ್ನ್ಸ್, ಪಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯ]

Come April 1 and here is everything you should know about tax changes

* 5 ಲಕ್ಷದೊಳಗೆ ಆದಾಯ ಇರುವವರಿಗೆ ಒಂದೇ ತೆರಿಗೆ ಪಾವತಿ ಅರ್ಜಿ ಪರಿಚಯಿಸಲಾಗುತ್ತಿದೆ. ಅದರಲ್ಲಿ ವ್ಯವಹಾರದ ಮೂಲಕ ಬಂದ ಆದಾಯ ಸೇರಿರುವುದಿಲ್ಲ. ಮತ್ತು ಮೊದಲ ಬಾರಿಗೆ ತೆರಿಗೆ ಪಾವತಿಸುವವರು ಈ ಅರ್ಜಿ ಸಲ್ಲಿಸಬಹುದು.

* ಬಂಡವಾಳ ಲಾಭದ (ಕ್ಯಾಪಿಟಲ್ ಗೇನ್ಸ್) ತೆರಿಗೆ ಉಳಿಸಲು ಎನ್ಎಚ್ಎಐ ಹಾಗೂ ಆರ್ ಇಸಿ ಬಾಂಡ್ ಗಳಲ್ಲಿ ಹಣ ಹೂಡುವ ಮತ್ತೊಂದು ಅವಕಾಶ ಇದೆ.[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]

Come April 1 and here is everything you should know about tax changes

* 2017-18ನೇ ಸಾಲಿನ ತೆರಿಗೆಯನ್ನು ಡಿಸೆಂಬರ್ 31ರ 2018ರೊಳಗೆ ಪಾವತಿಸಿದರೆ 5 ಸಾವಿರ ರುಪಾಯಿ ದಂಡ ವಿಧಿಸಲಾಗುತ್ತದೆ. ಆ ನಂತರ ಪಾವತಿಸಿದರೆ 10 ಸಾವಿರ ದಂಡ ಹಾಕಲಾಗುತ್ತದೆ. 5 ಲಕ್ಷದೊಳಗೆ ಆದಾಯ ಇರುವವರಿಗೆ ದಂಡ ಶುಲ್ಕವನ್ನು 1 ಸಾವಿರ ರುಪಾಯಿಗೆ ಮಿತಿಗೊಳಿಸಲಾಗಿದೆ.

English summary
Come April 1 and tax changes would be applicable. Here is all you should know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X