ಮಕ್ಕಳ ಮಾರಣಹೋಮ ನಡೆದಿದ್ದ ಗೋರಖಪುರ್ ಆಸ್ಪತ್ರೆಗೆ ಯೋಗಿ ಭೇಟಿ

Subscribe to Oneindia Kannada

ಗೋರಖಪುರ್, ಆಗಸ್ಟ್ 13: ಕಳೆದ 7 ದಿನಗಳಲ್ಲಿ 64 ಮಕ್ಕಳು ಸಾವನ್ನಪ್ಪಿದ ಗೋರಖಪುರ್ ನ ಬಾಬ ರಾಘವ್ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೊನೆಗೂ ಭೇಟಿ ನೀಡಿದ್ದಾರೆ. ಅವರ ಜತೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಕೂಡ ಭೇಟಿ ನೀಡಿದ್ದಾರೆ.

ಗೋರಖ್ ಪುರ ದುರಂತ: ಶನಿವಾರ ಸಂಜೆ ನಂತರದ ಪ್ರಮುಖ 5 ಬೆಳವಣಿಗೆ

ಆಕ್ಸಿಜನ್ ಕೊರತೆಯಿಂದ ಗೋರಖಪುರ್ ಆಸ್ಪತ್ರೆಯಲ್ಲಿ ಎನ್ಸೆಫಾಲಿಟಿಸ್ (encephalitis) ಎಂಬ ಮೆದುಳು ಸಂಬಂಧಿ ರೋಗಕ್ಕೆ ಗುರುವಾರ ಮತ್ತು ಶುಕ್ರವಾರ ಬರೋಬ್ಬರಿ 30 ಮಕ್ಕಳು ಸಾವನ್ನಪ್ಪುವುದರೊಂದಿಗೆ ಈ ವಿಷಯ ಅಂತರಾಷ್ಟ್ರೀಯ ಸುದ್ದಿ ಕೇಂದ್ರಕ್ಕೆ ಬಂದಿತ್ತು.

CM Yogi Adityanath and Union Health Minister JP Nadda reach BRD Hospital in Gorakhpur

ಅಂತರಾಷ್ಟ್ರೀಯವಾಗಿ ಈ ಸುದ್ದಿ ಚರ್ಚೆಯಾಗಿದ್ದರೂ ತಮ್ಮ ಸ್ವ ಕ್ಷೇತ್ರಕ್ಕೆ ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಯನ್ನೂ ನೀಡಿರಲಿಲ್ಲ. ಘಟನೆ ಬಗ್ಗೆ ಸ್ವತಃ ಪ್ರಧಾನಿ ಕನಿಷ್ಠ ಸಂತಾಪವನ್ನೂ ಸೂಚಿಸಿರಲಿಲ್ಲ.

CM Yogi Adityanath and Union Health Minister JP Nadda reach BRD Hospital in Gorakhpur

ಕೊನೆಗೆ ಶನಿವಾರ ರಾತ್ರಿ, "ಪ್ರಧಾನಿ ಗೋರಖಪುರ್ ಪರಿಸ್ಥಿತಿಯ ಬಗ್ಗೆ ನಿಗಾ ಇಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ," ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿತ್ತು.

"ಕೇಂದ್ರ ರಾಜ್ಯ ದರ್ಜೆ ಆರೋಗ್ಯ ಸಚಿವೆ ಅನುಪ್ರಿಯ ಪಟೇಲ್ ಮತ್ತು ಕಾರ್ಯದರ್ಶಿ ಪರಿಸ್ಥಿತಿಯ ಪೂರ್ಣ ಅವಲೋಕನ ನಡೆಸುತ್ತಿದ್ದಾರೆ," ಎಂದು ಸೌಜನ್ಯಕ್ಕೆ ಪ್ರಧಾನಿ ಟ್ವೀಟ್ ಮಾಡಿ ಸತ್ತವರಿಗೆ ಕನಿಷ್ಠ ಸಂತಾಪವನ್ನೂ ಸೂಚಿಸದೆ ಕೈತೊಳೆದುಕೊಂಡಿದ್ದರು.

Aadhar Registration For All school Children Within The Year 31st of August

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Uttar Pradesh chief minister Yogi Adityanath and union health minister JP Nadda reach Baba Raghav Das Hospital in Gorakhpur where 64 children died in last 7 days due to lack of oxygen supply and encephalitis.
Please Wait while comments are loading...