ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂನಲ್ಲಿ ನಕಲಿ 2000 ನೋಟು ತುಂಬಿದ್ದ ಶಂಕಿತನ ಬಂಧನ

ದೆಹಲಿಯ ಸಂಗಮ್ ವಿಹಾರ್ ಪ್ರಾಂತ್ಯದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಎಟಿಎಂನಲ್ಲಿ ಬಂದಿದ್ದ ಖೋಟಾ ನೋಟು.

|
Google Oneindia Kannada News

ನವದೆಹಲಿ, ಫೆಬ್ರವರಿ 23: ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಅನುಮಾನಿಸುವಂತೆ ಮಾಡಿದ್ದ ದೆಹಲಿ ಎಸ್ ಬಿಐ ಎಟಿಎಂನಲ್ಲಿ ಖೋಟಾ ನೋಟು ಪ್ರಕರಣದ ಶಂಕಿತನೊಬ್ಬನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ದೆಹಲಿಯ ಸಂಗಮ್ ವಿಹಾರ್ ನಲ್ಲಿರುವ ಎಸ್.ಬಿ.ಐ ಎಟಿಎಂನಲ್ಲಿ ಫೆಬ್ರವರಿ 6ರಂದು ರೋಹಿತ್ ಎನ್ನುವ ಗ್ರಾಹಕರು ಹಣ ಡ್ರಾ ಮಾಡಲು ಹೋದಾಗ 'ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ' ಹೆಸರಿನಲ್ಲಿ ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ನಕಲಿ ನೋಟು ಎಟಿಎಂ ಯಂತ್ರದಿಂದ ಹೊರಬಂದಿತ್ತು.

'Children Bank of India' Note: Man Tasked With Refilling SBI ATM arrested

ಈ ಪ್ರಕರಣದಲ್ಲಿ ಬಂಧಿತನಾಗಿರುವವನ ಹೆಸರು ಮೊಹಮ್ಮದ್ ಇಶಾ ಎಂದು ಪೊಲೀಸರು ತಿಳಿಸಿದ್ದು, ಇಪ್ಪತ್ತೇಳು ವರ್ಷದವನಾದ ಈತ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಪದವಿ ಓದುತ್ತಿದ್ದಾನೆಂದು ಹೇಳಿದ್ದಾರೆ.

ಈತ ಎಸ್ ಬಿಐ ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದ್ದ ಬ್ರಿಂಕ್ಸ್ ಆರ್ಯ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದ. ಎಸ್ ಬಿಐ ಎಟಿಎಂನಲ್ಲಿ ಹಣ ಹಾಕಿದ ದಿನ ಈತನೇ ಆ ಎಟಿಎಂಗೆ ಹೋಗಿದ್ದ ಹಾಗೂ ಈತನ ಕೈಯ್ಯಿಂದಲೇ ಖೋಟಾ ನೋಟುಗಳು ದಿಲ್ಲಿಯ ಎಟಿಎಂನಲ್ಲಿ ಸೇರಿವೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹಾಗಾಗಿ, ಆತನನ್ನು ಬಂಧಿಸಿಲಾಗಿದ್ದು ಹೆಚ್ಚಿನ ವಿಚಾರಣೆಗೊಳಪಡಿಸಲಾಗುವುದು ಎಂದು ಅವರು ತಿಳಿಸಿದರು.

ಈ ಪ್ರಕರಣದಲ್ಲಿ ಈತನೊಬ್ಬನೇ ಅಲ್ಲದೆ ಇನ್ನೂ ಕೆಲವರು ಷಾಮೀಲಾಗಿರುವ ವಿಚಾರ ಮೇಲ್ನೋಟಕ್ಕೆ ತಿಳಿದುಬಂದಿರುವುದರಿಂದ ಹೆಚ್ಚಿನ ವಿಚಾರಣೆ ಅಗತ್ಯವೆಂದು ಹೇಳಲಾಗಿದೆ.

English summary
Delhi police arrested a suspected in connection to fake note with 'Children Bank of India' despensed by SBI ATM in Sangam Vihar area of Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X