ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್ ಗಢ ದುರಂತ, ದಿಗ್ವಿಜಯ್ ಸಿಂಗ್ ದಿಗ್ಭ್ರಮೆ

By Mahesh
|
Google Oneindia Kannada News

ಬಿಲಾಸ್ ಪುರ(ಛತ್ತೀಸ್ ಗಢ), ನ.11: ಛತ್ತೀಸ್ ಗಢ ಸರ್ಕಾರ ಆಯೋಜಿಸಿದ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಎಂಟು ಜನ ಮಹಿಳೆಯರು ಮೃತಪಟ್ಟಿದ್ದು, 24ಕ್ಕೂ ಅಧಿಕ ಮಂದಿ ಜೀವನ್ಮರಣ ಹೋರಾಟ ನಡೆಸಿದ್ದಾರೆ, ಕೂಡಲೇ ಆರೋಗ್ಯ ಸಚಿವ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.

ಆರೋಗ್ಯ ಸಚಿವ ಅಮರ್ ಅಗರವಾಲ್ ಅವರ ಸ್ವಕ್ಷೇತ್ರದಲ್ಲೇ ಶನಿವಾರ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು. ಮೂಲಗಳ ಪ್ರಕಾರ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಮಹಿಳೆಯರು ಸೋಮವಾರದ ವೇಳೆಗೆ ಜ್ವರದಿಂದ ನರಳಲು ಪ್ರಾರಂಭಿಸಿದರು. ಮಂಗಳವಾರ ಬೆಳಗ್ಗೆ 8 ಜನ ಸಾವನ್ನಪ್ಪಿದ್ದಾರೆ. 24ಕ್ಕೂ ಅಧಿಕ ಮಂದಿ ದೇಹಸ್ಥಿತಿ ವಿಷಮವಾಗಿದೆ.

Eight women die in sterilisation camp. Two Dozen critical in Chhattisgarh

ಆರೋಗ್ಯ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದ್ದರೂ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದಿಗ್ವಿಜಯ್ ಸಿಂಗ್ ಟೀಕಿಸಿದ್ದಾರೆ. ಸರ್ಕಾರಿ ನಿಯಮಗಳ ಪ್ರಕಾರ ಸಂತಾನಹರಣ ಚಿಕಿತ್ಸೆಗೆ ಒಳಪಡುವವರಿಗೆ 1,400 ರು ಹಾಗೂ ಮಹಿಳೆಯರನ್ನು ಕರೆ ತರುವವರಿಗೆ 200 ರು ಮೊತ್ತ ಸಿಗಲಿದೆ.

ಆದರೆ, ದಿಗ್ವಿಜಯ್ ಸಿಂಗ್ ಅವರ ಆರೋಪವನ್ನು ಅಲ್ಲಗೆಳೆದಿರುವ ರಮಣ್ ಸಿಂಗ್ ಅವರ ಬಿಜೆಪಿ ಸರ್ಕಾರ, ಈಗಾಗಲೇ ಘಟನೆ ಬಗ್ಗೆ ಮೂವರು ತಜ್ಞರಿರುವ ಸಮಿತಿ ರಚಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಮೃತಪಟ್ಟ ಮಹಿಳೆಯರ ಕುಟುಂಬಕ್ಕೆ 2 ಲಕ್ಷ ರು ಪರಿಹಾರ ಧನ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 50 ಸಾವಿರ ರುರೂ ಪರಿಹಾರ ನೀಡಲಾಗುತ್ತಿದೆ ಎಂದು ಘೋಷಿಸಿದೆ.

English summary
Congress demands Health Minister Amar Agarwal's resignation after Eight women on Tuesday died in sterilisation camp organised by the state government in Bilaspur in Chhattisgarh. According to reports, around 24 women are said to be in a critical condition. The sterilisation camp was held in the home district of Health Minister Amar Agarwal on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X