ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಪ್ರಹಾರ್: ಛತ್ತೀಸ್ ಗಢದಲ್ಲಿ 12 ನಕ್ಸಲರ ಹತ್ಯೆ

By Sachhidananda Acharya
|
Google Oneindia Kannada News

ಸುಕ್ಮಾ (ಛತ್ತೀಸ್ ಗಢ), ಜೂನ್ 25: ಕಳೆದೆರಡು ದಿನಗಳಲ್ಲಿ ಇಲ್ಲಿನ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ನಡೆದ ಭಾರೀ ನಕ್ಸಲ್ ನಿಗ್ರಹ ಕಾರ್ಯಾಚರಣೆ ಅಂತ್ಯವಾಗಿದೆ. ಕಾರ್ಯಾಚರಣೆಯಲ್ಲಿ ಒಟ್ಟು 12ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದು ಮೂವರು ಡಿಆರ್'ಜಿ ಯೋಧರು ಹುತಾತ್ಮರಾಗಿದ್ದಾರೆ.

"ಮೂವರು ಡಿಆರ್'ಜಿ ಯೋಧರು ಸಾವನ್ನಪ್ಪಿದ್ದಾರೆ. ಐವರು ಗಾಯಗೊಂಡಿದ್ದಾರೆ. 12 ಕ್ಕೂ ಹೆಚ್ಚು ನಕ್ಸಲರನ್ನು ಕೊಲ್ಲಲಾಗಿದೆ. 8-10 ನಕ್ಸಲರು ಗಾಯಗೊಂಡಿದ್ದಾರೆ," ಎಂದು ಆಪರೇಷನ್ ಪ್ರಹಾರ್ ನಿರ್ದೇಶಕ ಡಿಎಂ ಅವಸ್ಥಿ ಹೇಳಿದ್ದಾರೆ.

Chhattisgarh: 3 security personnel and 12 Naxals dead in gunbattles at Sukma

ಇವರಲ್ಲಿ ಇಬ್ಬರು ಯೋಧರು ಕಾರ್ಯಾಚರಣೆ ಮುಗಿಸಿ ವಾಪಸ್ ಬರುವಾಗ ಬಿಜಾಪುರ್ ನಲ್ಲಿ ಸುಧಾರಿತ ಸ್ಪೋಟಕ ವಸ್ತುವಿನ ಸ್ಪೋಟದಿಂದ ಗಾಯಗೊಂಡಿದ್ದಾರೆ.

ಶನಿವಾರ ಛತ್ತೀಸ್ ಗಢ ಪೊಲೀಸರು, ಸಿಆರ್ ಪಿಎಫ್ ಜವಾನರು, ನಕ್ಸಲ್ ನಿಗ್ರಹ ಪಡೆಗಳು ಭಾರತೀಯ ವಾಯು ಸೇನೆಯ ಸಹಕಾರದೊಂದಿದೆ ಈ ಬೃಹತ್ ನಕ್ಸಲ್ ನಿಗ್ರಹ ಕಾರ್ಯಾಚರಣೆ ಆಪರೇಷನ್ ಪ್ರಹಾರ್ ಆರಂಭಿಸಿದ್ದವು.

Chhattisgarh: 3 security personnel and 12 Naxals dead in gunbattles at Sukma

ಕಾರ್ಯಾಚರಣೆ ವೇಳೆ ಗಾಯಗೊಂಡ ಹಲವು ಸಿಬ್ಬಂದಿಗಳನ್ನು ಹೆಲಿಕಾಫ್ಟರ್ ಗಳ ಮೂಲಕ ತುರ್ತಾಗಿ ಆಸ್ಪತ್ರೆಗಳಿಗೆ ಸೇರಿಸಲಾಯಿತು. ಇನ್ನು ಕಾರ್ಯಾಚರಣೆಯ ಅಂತ್ಯಕ್ಕೆ ಕಚ್ಛಾ ಬಾಂಬ್, ಗ್ರೆನೇಡ್, ಶಸ್ತ್ರಾಸ್ತ್ರಗಳು ಸೇರಿ ನಕ್ಸಲರಿಂದ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Chhattisgarh: 3 security personnel and 12 Naxals dead in gunbattles at Sukma

ಶನಿವಾರ ಚಿಂತಗುಫಾದಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇಂದೂ ಕಾರ್ಯಾಚರಣೆ ಮುಂದುವರಿದು ದಾಂತೇವಾಡದ ನಕ್ಸಲರ ಕ್ಯಾಂಪ್ ಮೇಲೆ ಭದ್ರತಾ ಪಡೆಗಳು ಮುಗಿ ಬಿದ್ದಿದ್ದವು.

English summary
Chhattisgarh: 3 DRG jawans martyred, 5 injured. Over 1 dozen Naxals dead, 8-10 injured in a major Naxal operations called 'Operation Prahaar' in Sukma district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X