ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮ ಸಂಸತ್ತಿನಲ್ಲಿ ಬಾಬಾ vs ಶಂಕರ ಜಟಾಪಟಿ

By Mahesh
|
Google Oneindia Kannada News

ರಾಯಪುರ್, ಆ.25: ಹಿಂದೂ ಧರ್ಮ ಸಂಸತ್ತಿನ ಮೊದಲ ದಿನವೇ ದ್ವಾರಕಾಪೀಠ ಶಂಕರಾಚಾರ್ಯ್ ಸ್ವರೂಪಾನಂದ ಸರಸ್ವತಿ ಅನುಯಾಯಿಗಳು ಹಾಗೂ ಸಾಯಿಬಾಬಾ ಭಕ್ತರ ನಡುವೆ ಜಟಾಪಟಿ ನಡೆದಿದೆ. ಛತ್ತೀಸ್ ಗಢದ ಕಬಿರ್ ಧಾಮ್ ಜಿಲೆಯ ಕವರ್ಧ ನಗರದಲ್ಲಿ ಹಿಂದೂ ಧರ್ಮ ಸಂಸತ್ ಸಭೆ ನಡೆದಿದೆ.

ಈ ಸಂಸತ್ತಿನ ಶಂಕರಾಚಾರ್ಯರ ಭಕ್ತರು ಆಕ್ರೋಶಗೊಂಡು ಸಾಯಿಬಾಬಾ ಭಕ್ತರನ್ನ ವೇದಿಕೆಯಿಂದ ಹೊರ ನೂಕಿದ ಘಟನೆ ನಡೆದಿದೆ. ಸ್ವತಃ ಶಂಕರಾಚಾರ್ಯ ಸ್ವರೂಪಾನಂದಸ್ವಾಮಿಗಳು ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಪೊಲೀಸರು ಕೂಡ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿದ ಪರಿಸ್ಥಿತಿ ಹದ್ದುಮೀರದಂತೆ ಎಚ್ಚರವಹಿಸಿದರು ಎಂದು ತಿಳಿದು ಬಂದಿದೆ.

ಎರಡು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಸಮ್ಮೇಳನದಲ್ಲಿ 400 ಧಾರ್ಮಿಕ ಮುಖಂಡರು ಭಾಗವಹಿಸಿದ್ದಾರೆ. ಸ್ವರೂಪಾನಂದ ಸರಸ್ವತಿ ಸ್ವಾಮಿ ಸೇರಿದಂತೆ ಎಲ್ಲಾ 13 ಶಂಕರಾಚಾರ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

Chattisgarh: Sai Baba devotees clash with Shankaracharya's followers

ಸಾಯಿಬಾಬಾ ದೇವರಲ್ಲ: ಸಾಯಿಬಾಬಾ ದೇವರಲ್ಲ ಎಂದು ದ್ವಾರಕಾಪೀಠದ ಶಂಕರಾಚಾರ್ಯರು ಹೇಳಿದ್ದು, ಇದಕ್ಕೆ ಅನೇಕ ಹಿಂದೂ ಧಾರ್ಮಿಕ ಮುಖಂಡರು ದನಿಗೂಡಿಸಿದ್ದು ಸಹಜವಾಗೇ ಸಾಯಿಬಾಬಾ ಭಕ್ತರನ್ನು ಕೆರಳಿಸಿದೆ. ಧರ್ಮ ಸಂಸತ್ತಿನಲ್ಲಿ ಸಾಯಿಬಾಬಾ ವಿರುದ್ಧ ದನಿ ಎತ್ತಿದ ಮುಖಂಡರು ಎದುರಿಗೆ ಸಿಕ್ಕದ ತಕ್ಷಣ ಕೆರಳಿ ಅವರ ಮೇಲೆ ಮುಗಿ ಬಿದ್ದಿದ್ದಾರೆ.

ಸಾಯಿಬಾಬಾ ಅವರನ್ನು ದೇವರ ಬದಲು ಸಂತನಂತೆ ಕಾಣಲು ಕೆಲವರು ಯತ್ನಿಸಿದ್ದುಂಟು ಅದರೆ, ಶಂಕರಾಚಾರ್ಯರ ವಿಚಾರಧಾರೆ ಒಪ್ಪಿಕೊಳ್ಳಲು ಅಥವಾ ಇತರೆ ಧಾರ್ಮಿಕ ಮುಖಂಡರ ಮಾತುಗಳನ್ನು ಕೇಳಲು ಸಾಯಿಬಾಬಾ ಭಕ್ತರು ತಯಾರಿರಲಿಲ್ಲ, ಈ ಬಗ್ಗೆ ಪ್ರಶ್ನಿಸಲು ವೇದಿಕೆ ಏರಿದ ಸಾಯಿ ಭಕ್ತರನ್ನು ಸ್ವರೂಪಾನಂದ ಭಕ್ತರು ಕೆಳಗೆ ನೂಕಿದ್ದಾರೆ. ಅಲ್ಲಿಂದ ಮಾತಿನ ಚಕಮಕಿ, ಕೈಕೈ ಮಿಲಾಯಿಸುವ ಹಂತ ಮುಟ್ಟಿದೆ.

ಸಾಯಿಬಾಬಾ ದೇವರಲ್ಲ ಎಂಬ ವಿಷಯವಲ್ಲದೆ, ರಾಮ ಮಂತ್ರ ಜಪಿಸಬೇಡಿ, ಗಂಗೆಯಲ್ಲಿ ಸ್ನಾನ ಮಾಡಬೇಡಿ ಎಂಬ ವಿವಾದಿತ ಹೇಳಿಕೆಯನ್ನು 90 ವರ್ಷ ವಯಸ್ಸಿನ ಸ್ವರೂಪಾನಂದ ಸ್ವಾಮೀಜಿ ನೀಡಿದ್ದರು.

English summary
Sai Baba's devotees and Dwarkapeeth Shankaracharya Swaroopananda Saraswati's followers engaged in a scuffle on Monday during a Dharma Sansad programme in Kawardha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X