ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರಿಗುಂಟು ಯಾರಿಗಿಲ್ಲ, ಒಂದು ರುಪಾಯಿಗೆ ಒಂದು ಸೀರೆ ಎಂದಿದ್ದೇ ತಡ!

ಯಾರಿಗುಂಟು ಯಾರಿಗಿಲ್ಲ, ಈಗಲೇ ಪಡೆದುಕೊಳ್ಳಿ 'ಒಂದು ರುಪಾಯಿಗೆ ಒಂದು ಚೆಂದದ ಸೀರೆ' ಎಂಬ ಕ್ಲಿಯೆರೆನ್ಸ್ ಸೇಲ್ ಆಫರ್ ಕೇಳಿಸಿಕೊಂಡಿದ್ದೇ ತಡಾ, ಗಲ್ಲಿ ಗಲ್ಲಿಗಳಿಂದ ಓಡೋಡಿ ಬಂದ ಮಹಿಳಯರು ಆ ಅಂಗಡಿಯ ಮುಂದೆ ಜಮಾಯಿಸಿಬಿಟ್ಟರು. ಮುಂದೇನಾಯ್ತು

By Mahesh
|
Google Oneindia Kannada News

ವಾರಣಾಸಿ, ಫೆಬ್ರವರಿ 17: ಯಾರಿಗುಂಟು ಯಾರಿಗಿಲ್ಲ, ಈಗಲೇ ಪಡೆದುಕೊಳ್ಳಿ 'ಒಂದು ರುಪಾಯಿಗೆ ಒಂದು ಚೆಂದದ ಸೀರೆ' ಎಂಬ ಕ್ಲಿಯೆರೆನ್ಸ್ ಸೇಲ್ ಆಫರ್ ಕೇಳಿಸಿಕೊಂಡಿದ್ದೇ ತಡಾ, ಗಲ್ಲಿ ಗಲ್ಲಿಗಳಿಂದ ಓಡೋಡಿ ಬಂದ ಮಹಿಳಯರು ಆ ಅಂಗಡಿಯ ಮುಂದೆ ಜಮಾಯಿಸಿಬಿಟ್ಟರು. ವಾರಣಾಸಿಯಲ್ಲಿ ಯಾವುದೋ ಸಿನಿಮಾ ದೃಶ್ಯ ನೋಡಿದಂತೆ ಇತ್ತು ಸೀರೆ ಪ್ರಸಂಗ.

ವಾರಾಣಾಸಿಯ ಮೆಹಮೂರ್ಗಂಜ್ ಪ್ರದೇಶದ ಅಂಗಡಿಯೊಂದರ ಮಾಲೀಕ ನೀಡಿದ ಕ್ಲಿಯೆರೆನ್ಸ್ ಸೇಲ್ ಆಫರ್ ಭಾರಿ ಗೊಂದಲ, ಟ್ರಾಫಿಕ್ ಜಾಮ್ ಗೆ ಕಾರಣವಾಯಿತು.

Chaos prevails at Varanasi shop that offered 'a saree for Re 1'

ಹಳೆ ಸ್ಟಾಕ್ ಕ್ಲಿಯರ್ ಮಾಡುವ ಸಲುವಾಗಿ 1 ರೂಪಾಯಿಗೆ ಒಂದು ಸೀರೆ ಎಂಬ ಘೋಷಣೆ ಮಾಡಿದ ಸುದ್ದಿ ಕೇಳಿದ ನೂರಾರು ಮಹಿಳೆಯರು ಅಂಗಡಿ ಎದುರು ಜಮಾಯಿಸಿದ್ದರು. ಇಡೀ ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು ತಿಳಿದು ಏನಾಗಿದೆ ನೋಡೋಣ ಎಂದು ಬಂದ ಪೊಲೀಸರು ಅವಾಕ್ಕಾದರು.

ಕೂಡಲೇ ನೆರೆದಿದ್ದ ಮಹಿಳೆಯರನ್ನು ಚದುರಿಸಿದ್ದಾರೆ. ನಿರೀಕ್ಷೆಗೂ ಮೀರಿ ಮಹಿಳೆಯರು ಅಂಗಡಿಗೆ ಬಂದಿದ್ದು ಕಂಡ ಮಾಲೀಕ ಆಫರ್ ಹಿಂಪಡೆದಿದ್ದಾನೆ. 1 ರೂ. ಗೆ ಸೀರೆ ಎಂಬ ಆಫರ್ ನೀಡಿದ್ದು ನಿಜವಾದರೂ ಅದರ ಹಿಂದೆ ಒಂದು ಟ್ರಿಕ್ ಇತ್ತು. ಸೀರೆ ಖರೀದಿಸುವುದಕ್ಕೂ ಮುನ್ನ 500 ರೂ. ಬೆಲೆ ಬಾಳುವ ಯಾವುದಾದರೂ ವಸ್ತು ಖರೀದಿಸುವ ನಿಬಂಧನೆಯನ್ನು ಹಾಕಲಾಗಿತ್ತು. ಮಹಿಳೆಯರಿಗೆ ನಿಬಂಧನೆಗಿಂತ ಒಂದು ರುಪಾಯಿಗೆ ಬನಾರಸಿ ಸೀರೆ ಸಿಗುತ್ತದೆ ಎಂಬುದು ಕಣ್ಣರಳುವಂತೆ ಮಾಡಿತ್ತು.

English summary
Police had to intervene to clear the traffic on roads after crowd thronged outside a cloth shop in Mahmoorganj here in Varanasi that offered 'a saree for a rupee note'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X