ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಹತ್ಯೆ ನಿಷೇಧಕ್ಕೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ

|
Google Oneindia Kannada News

ಬೆಂಗಳೂರು, ಮೇ 26 : ಜಾನುವಾರುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುವುದಕ್ಕೆ ಕೇಂದ್ರ ಸರಕಾರ ನಿಷೇಧ ಹೇರಿದೆ. ಹೊಸ ನಿಯಮಾವಳಿ ಪ್ರಕಾರ, ಕೃಷಿ ಭೂಮಿ ಮಾಲೀಕರು ಜಾನುವಾರುಗಳನ್ನು ಮಾರುವುದಕ್ಕೆ ಯಾವುದೇ ನಿಷೇಧ ಹಾಕಿಲ್ಲ್. ಗೋ ಸಂರಕ್ಷಣೆಗಾಗಿ ಕೇಂದ್ರ ಸರಕಾರ ಪ್ರಾಣಿ ಹಿತರಕ್ಷಣೆ ಹೆಸರಿನಲ್ಲಿ ಅಧಿಸೂಚನೆ ಹೊರಡಿಸಿದೆ.

ಗೋ ಮಾರಾಟಗಾರರ ವಿರುದ್ಧ ನಡೆಯುತ್ತಿರುವ ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಈ ನಿಯಮಾವಳಿ ಮಹತ್ವದ ಪಾತ್ರ ವಹಿಸಲಿದೆ. ಈಶಾನ್ಯ ರಾಜ್ಯಗಳು ಹಾಗೂ ಕೇರಳ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧಿಸಲಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ನಿಷೇಧ ತಡೆ ಕಾಯ್ದೆ 1960ಕ್ಕೆ ವಿಶೇಷ ಸೆಕ್ಷನ್ ತರಲಾಗಿದೆ.

ಈ ಸೆಕ್ಷನ್ ನ ಅಡಿಯಲ್ಲಿ ಹೇಳಿರುವ ಪ್ರಕಾರ, ರಾಸುಗಳನ್ನು ಕೃಷಿ ಉದ್ದೇಶಕ್ಕೆ ಬಳಸಬಹುದು ವಿನಾ ಕಸಾಯಿ ಖಾನೆಗೆ ಮಾರುವಂತಿಲ್ಲ. ಇನ್ನು ಹಸು ಖರೀದಿಸಿದ ನಂತರ ಆರು ತಿಂಗಳೊಳಗೆ ಹಸು ಮಾರಾಟಗಾರರಿಗೆ ಮತ್ತೊಮ್ಮೆ ಮಾರುವಂತಿಲ್ಲ. ಕೃಷಿಕ ಎಂಬ ದಾಖಲೆ ಹೊಂದಿರುವ ವ್ಯಕ್ತಿಗಷ್ಟೇ ರಾಸುಗಳ ಮಾರಾಟ ಮಾಡಬೇಕು.

Centre bans cow-slaughter across India: Read what the tough new law states

ಚಿಕ್ಕವಯಸ್ಸಿನ ಹಾಗೂ ಉಪಯೋಗಕ್ಕೆ ಬಾರದ ರಾಸುಗಳನ್ನು ಸಹ ಮಾರಲು ಸಾಧ್ಯವಿಲ್ಲ. ಅಂದಹಾಗೆ ಈ ನಿಯಮ ಇನ್ನು ಏನೇನು ಹೇಳುತ್ತದೆ ಎಂಬುದರ ಮುಖ್ಯಾಂಶಗಳು ಹೀಗಿವೆ.

* ಅಂತರರಾಷ್ಟ್ರೀಯ ಗಡಿಗಳ ಐವತ್ತು ಕಿಲೋಮೀಟರ್ ಹಾಗೂ ರಾಜ್ಯಗಡಿಗಳ ಇಪ್ಪತ್ತೈದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿಗಳ ಮಾರುಕಟ್ಟೆಗೆ ನಿಷೇಧ ಹೇರಲಾಗಿದೆ.

* ರಾಜ್ಯದಿಂದ ಹೊರಗೆ ಪ್ರಾಣಿಗಳನ್ನು ತೆಗೆದುಕೊಂಡು ಹೋಗುವಾಗ ವಿಶೇಷ ಅನುಮತಿ ಪಡೆಯಬೇಕು.

* ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ರಾಜ್ಯ ಸರಕಾರದ ಅನುಮತಿ ಪಡೆದ ಪ್ರಾಣಿ ರಕ್ಷಣಾ ಸದಸ್ಯರನ್ನು ಒಳಗೊಂಡ ಪ್ರಾಣಿ ಮಾರುಕಟ್ಟೆ ಸಮಿತಿ ರಚನೆ ಮಾಡಲಾಗುತ್ತದೆ. ಅದರ ಅನುಮತಿ ಇಲ್ಲದೆ ಯಾವುದೇ ಪ್ರಾಣಿಗಳ ಮಾರುಕಟ್ಟೆ ನಡೆಸುವಂತಿಲ್ಲ.

* ಈ ನಿಯಮಗಳು ಜಾರಿಗೆ ಬರುವುದಕ್ಕೆ ಕನಿಷ್ಠ ಮೂರು ತಿಂಗಳು ಬೇಕು.

Centre bans cow-slaughter across India: Read what the tough new law states

* ಇನ್ನು ಈ ವಿಚಾರದಲ್ಲಿ ಕಾಗದ-ಪತ್ರಗಳು ಸಿದ್ಧವಾಗಬೇಕು. ದೇಶದಾದ್ಯಂತ ಇರುವ ಗೋವು ವ್ಯಾಪಾರಿಗಳಿಗೆ ಅರಿವು ಮೂಡಿಸಬೇಕು.

* ಗೋವು ಮಾರಾಟದ ವೇಳೆ ವ್ಯಾಪರಿಯೂ ಐದು ಪ್ರತಿ ಸಿದ್ಧಪಡಿಸಬೇಕು.

* ಸ್ಥಳೀಯ ಕಂದಾಯಾಧಿಕಾರಿ, ಪಶು ವೈದ್ಯಾಧಿಕಾರಿ, ಪಶು ಮಾರುಕಟ್ತೆ ಸಮಿತಿ, ಮಾರಾಟಗಾರ ಹಾಗೂ ಖರೀದಿದಾರರಿಗೆ ಪ್ರತಿಗಳನ್ನು ನೀಡಬೇಕು.

Centre bans cow-slaughter across India: Read what the tough new law states

* ಪಶು ನಿರೀಕ್ಷಕರು ಪ್ರಾಣಿಗಳ ಸಾಗಣೆ ಸಮರ್ಪಕವಾಗಿ ಮಾಡಲಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಬೇಕು.

* ನಿರೀಕ್ಷಕರು ಯಾವುದೇ ಪಶುವನ್ನು ಮಾರಾಟಕ್ಕೆ ಯೋಗ್ಯವಾದದ್ದಲ್ಲ ಎಂದು ಗುರುತು ಮಾಡಬಹುದು.

* ಅಂಥ ಸಂದರ್ಭದಲ್ಲಿ ಮಾಲೀಕರು ಅದಕ್ಕಾಗಿ ಕೊಟ್ಟಿಗೆ ನಿರ್ಮಿಸುವುದಕ್ಕೆ ತಗುಲುವ ವೆಚ್ಚ ಭರಿಸಬೇಕು.

* ಒಂದು ವೇಳೆ ಮಾಲೀಕರು ಅದನ್ನು ಭರಿಸಲು ಶಕ್ತರಿಲ್ಲದಿದ್ದಲ್ಲಿ ಅದನ್ನು ಭೂ ಕಂದಾಯದ ಬಾಕಿ ಎಂಬಂತೆ ಪರಿಗಣಿಸಲಾಗುತ್ತದೆ.

* ಇದರ ವೆಚ್ಚವನ್ನು ಪ್ರತಿ ವರ್ಷದ ಏಪ್ರಿಲ್ ಒಂದನೇ ತಾರೀಕು ರಾಜ್ಯ ಸರಕಾರ ನಿರ್ಧರಿಸುತ್ತದೆ.

English summary
The sale of cattle for slaughter has been banned by the central government. As per the new regulation, sale of cattle is allowed among farm land owners across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X