ನೂತನ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಆಗಸ್ಟ್ 8: ಸುಪ್ರಿಂ ಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ದೀಪಕ್ ಮಿಶ್ರಾರನ್ನು ನೇಮಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಹಾಲಿ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನಿವೃತ್ತಿಯಾಗಲಿರುವುದರಿಂದ ಇದೇ ನವೆಂಬರ್ 27ರಂದು ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ದೀಪಕ್ ಮಿಶ್ರಾ ಅಧಿಕಾರ ಸ್ವೀಕರಿಸಲಿದ್ದಾರೆ.

Centre appoints Dipak Mishra as next Chief Justice of India

ನ್ಯಾ ದೀಪಕ್ ಮಿಶ್ರಾ ಅವರು, ನ್ಯಾ. ರಂಗನಾಥ್ ಮಿಶ್ರಾ ಮತ್ತು ನ್ಯಾ. ಜಿಬಿ ಪಟ್ನಾಯಕ್ ನಂತರ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರುತ್ತಿರುವ ಮೂರನೇ ಒಡಿಶಾದ ನ್ಯಾಯಮೂರ್ತಿಯಾಗಲಿದ್ದಾರೆ.

ಯಾಕೂಬ್ ಮೆಮೊನ್ ಗಲ್ಲು ಶಿಕ್ಷೆ ತೀರ್ಪು ಸೇರಿದಂತೆ ಹಲವು ಪ್ರಕರಣಗಳಲ್ಲಿ ದೀಪಕ್ ಮಿಶ್ರಾ ನೆನಪಿನಲ್ಲುಳಿಯುವಂತ ಆದೇಶಗಳನ್ನು ನೀಡಿದ್ದಾರೆ.

1953ರ ಅಕ್ಟೋಬರ್ 3ರಂದು ಜನಿಸಿದ ನ್ಯಾ. ಮಿಶ್ರಾ ದೆಹಲಿ ಮತ್ತು ಪಾಟ್ನಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಕೆಲಸ ನಿರ್ವಹಿಸಿದ್ದರು.

1977ರ ಫೆಬ್ರವರಿ 14ರಂದು ವಕೀಲಿ ವೃತ್ತಿ ಆರಂಭಿಸಿದ ಅವರು ಸಿವಿಲ್, ಕ್ರಿಮಿನಲ್, ರೆವೆನ್ಯೂ, ಸರ್ವಿಸ್ ಮತ್ತು ಸೇಲ್ಸ್ ಟಾಕ್ಸ್, ಸಂವಿಧಾನ ವಿಚಾರಗಳಲ್ಲಿ ಪರಿಣತಿ ಸಾಧಿಸಿದ್ದರು. 1996 ಜನವರಿ 17ರಂದು ಒಡಿಶಾ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನ್ಯಾ. ಮಿಶ್ರಾ ನೇಮಕವಾಗಿದ್ದರು. ಮುಂದೆ 1997ರಲ್ಲಿ ಮಧ್ಯಪ್ರದೇಶಕ್ಕೆ ವರ್ಗವಾಗಿದ್ದರು.

19 ಡಿಸೆಂಬರ್ 1997ರಂದು ಮಿಶ್ರಾ ಶಾಶ್ವತ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ಮುಂದೆ 23 ಡಿಸೆಂಬರ್ 23, 2009ರಲ್ಲಿ ಪಾಟ್ನಾ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ನ್ಯಾ. ಮಿಶ್ರಾ 2010 ಮೇ 24ರಂದು ದೆಹಲಿ ಹೈಕೋರ್ಟಿಗೆ ವರ್ಗವಾದರು.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ವೇಳೆ ಮಧ್ಯವರ್ತಿ ಕೇಂದ್ರ ಮತ್ತು ಲೋಕ ಅದಾಲತ್ ಮೂಲಕ 5000ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದರು. ಮುಂದೆ 10 ಅಕ್ಟೋಬರ್ 2011ರಲ್ಲಿ ಸುಪ್ರಿಂ ಕೋರ್ಟ್ ಮುಖ್ಯಮಂತ್ರಿಯಾಗಿ ನೇಮಕವಾದವರು ಸದ್ಯ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.

Supreme Court Says, No Ban For The Bars Within City Limits

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Justice Dipak Misra has been appointed as the next Chief Justice of India. The centre made the appointment. Justice Misra who takes over by Justice J S Khehar will be sworn in on November 27.
Please Wait while comments are loading...