ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್ಸಿ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಸಿಗುವುದೇ?

By Mahesh
|
Google Oneindia Kannada News

ನವದೆಹಲಿ, ನ.19: ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್ ಸಿ) ದ ಹುದ್ದೆಗಳ ಆಕಾಂಕ್ಷಿಗಳ ವಯೋಮಿತಿ ಇಳಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅದರೆ, ಇನ್ನೂ ಅಧಿಕೃತ ಆದೇಶ ಹೊರ ಬಂದಿಲ್ಲ. ಅದರೆ, ಕೇಂದ್ರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಈಗಾಗಲೇ ನೂತನ ಅಧಿಸೂಚನೆ ಹೊರಡಿಸಿದೆ.

ಕೇಂದ್ರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಹೊರಡಿಸಿರುವ ನೂತನ ಅಧಿಸೂಚನೆಯಂತೆ ಇನ್ನು ಮುಂದೆ ಕೇಂದ್ರೀಯ ಲೋಕಸೇವಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸಿನ ಮಿತಿಯನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಆದರೆ, ಮೋದಿ ಸರ್ಕಾರದ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದರಂತೆ 2015ರಲ್ಲಿ ಯುಪಿಎಸ್ ಸಿ ನಡೆಸುವ ಪರೀಕ್ಷೆಗಳಿಗೆ
* ಸಾಮಾನ್ಯ ವರ್ಗಕ್ಕೆ 30 ರಿಂದ 26,
* ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ 35 ರಿಂದ 29
* ಇತರೆ ಹಿಂದುಳಿದ ವರ್ಗಗಳಿಗೆ 33 ರಿಂದ 28ಕ್ಕಿಳಿಸಿದೆ.

ಎಲ್ಲಾ ವರ್ಗದ ವಿಕಲಚೇತನರಿಗೆ ಹೆಚ್ಚುವರಿಯಾಗಿ 2 ವರ್ಷ ನೀಡಲಾಗಿದೆ. ಕಳೆದ ತಡರಾತ್ರಿ ಕೇಂದ್ರ ಸರ್ಕಾರ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಈ ಅಧಿಸೂಚನೆ ಹೊರಡಿಸಿದ್ದು, 2015ರಿಂದ ಕೇಂದ್ರೀಯ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ನೂತನ ನಿಯಮ ಅನ್ವಯವಾಗಲಿದೆ.

Central Govt likely to reduce age limit for UPSC aspirants

ಎಷ್ಟು ಬಾರಿ ಪರೀಕ್ಷೆ ಯತ್ನಿಸಬಹುದು:
* ಸಾಮಾನ್ಯ ವರ್ಗ: 3 ಬಾರಿ
* ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ : 6
* ಇತರೆ ಹಿಂದುಳಿದ ವರ್ಗಗಳಿಗೆ : 5

ಈ ಹಿಂದೆ ಸಿಪಿಎಸ್ ಸಿ ಪರೀಕ್ಷೆಗಳಿಗೆ ವಯಸ್ಸಿನ ಮಿತಿಯನ್ನು ಇಳಿಕೆ ಮಾಡಬೇಕೆಂದು ಎರಡನೆ ಆಡಳಿತ ಸುಧಾರಣಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಇದನ್ನು ಅನುಷ್ಠಾನ ಮಾಡಲು ನಾನಾ ಕಾರಣಗಳನ್ನು ನೀಡಿ ಮುಂದೂಡಿತ್ತು. ಇದೀಗ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಸೂಚನೆ ಹೊರಡಿಸಿ ಹಲವಾರು ಆಕಾಂಕ್ಷಿಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಅದರೆ, ಈ ಬಗ್ಗೆ ಯಾವುದೇ ಸುತ್ತೋಲೆ ಬಂದಿಲ್ಲ ಎಂದು ಯುಪಿಎಸ್ ಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

English summary
The Central government is likely to relax the age limit and reduce the number of attempts for UPSC Civil Services Examination aspirants.As per the notification released by the Department of Administrative Reforms and Public Grievances, the upper age limit and number attempts has been reduced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X