ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರಕಾರಕ್ಕೆ 3 ವರ್ಷ, 900 ನಗರಗಳಲ್ಲಿ 'ಮೋದಿ ಫೆಸ್ಟ್'

ಈ ಮೋದಿ ಫೆಸ್ಟ್ ನಲ್ಲಿ MODI ಎಂದರೆ 'Making of Developed India (MODI) ಎಂದು ಬಣ್ಣಿಸಲಾಗಿದೆ. ಈ 900 ಕಾರ್ಯಕ್ರಮಗಳಲ್ಲಿ ಬಿಜೆಪಿಯ 450 ನಾಯಕರು ಭಾಷಣ ಮಾಡಲಿದ್ದಾರೆ.ಮೇ 26 ರಿಂದ ಜೂನ್ 15 ರವರೆಗೆ ಈ ಕಾರ್ಯಕ್ರಮಗಳು ನಡೆಯಲಿವೆ.

By Sachhidananda Acharya
|
Google Oneindia Kannada News

ನವದೆಹಲಿ, ಮೇ 22: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನಲೆಯಲ್ಲಿ ದೇಶದ 900 ನಗರಗಳಲ್ಲಿ 'ಮೋದಿ ಫೆಸ್ಟ್' ನಡೆಸಲು ತೀರ್ಮಾನಿಸಲಾಗಿದೆ. ಮೇ 26 ರಿಂದ ಜೂನ್ 15 ರವರೆಗೆ ಈ ಸಂಭ್ರಮಾಚರಣೆ ಕಾರ್ಯಕ್ರಮಗಳು ನಡೆಯಲಿವೆ.

ಈ ಮೋದಿ ಫೆಸ್ಟ್ ನಲ್ಲಿ MODI ಎಂದರೆ 'Making of Developed India (MODI) ಎಂದು ಬಣ್ಣಿಸಲಾಗಿದೆ. ಈ 900 ಕಾರ್ಯಕ್ರಮಗಳಲ್ಲಿ ಬಿಜೆಪಿಯ 450 ನಾಯಕರು ಭಾಷಣ ಮಾಡಲಿದ್ದಾರೆ. ಈ ಮಾಹಿತಿಯನ್ನು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ನೀಡಿದ್ದಾರೆ.

 Central Government to organize ‘Modi Fest’ at 900 places from May 26

ಕೇಂದ್ರ ಸಚಿವರು, ಸಂಸದರು, ಮುಖ್ಯಮಂತ್ರಿಗಳ ನೇತೃತ್ವದಲ್ಲೇ ಹೆಚ್ಚಿನ 'ಮೋದಿ ಫೆಸ್ಟ್' ನಡೆಯಲಿದೆ. ಇನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೇರಳ, ಅಂಡಮಾನ್ ನಿಕೋಬಾರ್, ಛತ್ತೀಸ್ ಗಢ, ಅರುಣಾಚಲ ಪ್ರದೇಶಗಳಲ್ಲಿ ನಡೆಯುವ ಫೆಸ್ಟ್ ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಗುವಾಹಟಿಯಿಂದ ಚಾಲನೆ

ಸಂಭ್ರಮಾಚರಣೆ ಕಾರ್ಯಕ್ರಮಗಳಿಗೆ ಗುವಾಹಟಿಯಲ್ಲಿ ಚಾಲನೆ ನೀಡಲಾಗುತ್ತದೆ. ಮೇ. 26ರಂದು ಗುವಾಹಟಿಯ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಮಾಡಿದ ಸಾಧನೆಗಳು, ಕೈಗೊಂಡ ಜನಪರ ಯೋಜನೆಗಳನ್ನು ಸಾರ್ವಜನಿಕರ ಮುಂದಿಡುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

English summary
Ruling Bharatiya Janata Party will be organising ‘Modi Fest’, a publicity campaign to highlight the achievements of the Narendra Modi led central government’s three year rule; Here MODI name has been linked with 'Making of Developed India’ - MODI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X