ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು, ಸಿಬಿಎಸ್ ಇ 10, 12ನೇ ತರಗತಿ ಪರೀಕ್ಷೆಗಳು ಒಂದೇ ಅವಧಿಯಲ್ಲಿ?

ಹಾಲಿ ಸಿಬಿಎಸ್ ಇ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ತರಲು ವಿವಿಧ ಶಾಲಾ- ಕಾಲೇಜುಗಳ ಒತ್ತಾಯ. 45 ದಿನಗಳವರೆಗ 10 ಹಾಗೂ 12ನೇ ತರಗತಿ ಪರೀಕ್ಷೆ ನಡೆಸುವ ಬದಲು ಕೆಲವೇ ದಿನಗಳಲ್ಲಿ ಮುಗಿಸಲು ಆಗ್ರಹ.

|
Google Oneindia Kannada News

ನವದೆಹಲಿ, ಜುಲೈ 17: ಕೇಂದ್ರೀಯ ಪ್ರೌಢಶಿಕ್ಷಣಾ ಮಂಡಳಿಯ (ಸಿಬಿಎಸ್ ಇ) 10ನೇ ಹಾಗೂ 12ನೇ ತರಗತಿಗಳ ಪರೀಕ್ಷಾ ವೇಳಾಪಟ್ಟಿಗಳಲ್ಲಿ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ. ಅದರಂತೆ, ಇನ್ನು ಮುಂದೆ ನಡೆಯುವ 10 ಹಾಗೂ 12ನೇ ತರಗತಿಗಳ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಒಂದೇ ಅವಧಿಯಲ್ಲಿ ನಡೆಸಲು ಆಲೋಚಿಸಲಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ 1ರಿಂದ ಸಿಬಿಎಸ್ ಸಿ 10ನೇ ತರಗತಿ ಪರೀಕ್ಷೆಗಳು ಆರಂಭವಾಗುತ್ತವೆ. ಆನಂತರ, 12ನೇ ತರಗತಿ ಪರೀಕ್ಷೆಗಳು ಆರಂಭವಾಗುತ್ತವೆ. ಹೀಗೆ, ಒಂದರ ನಂತರ ಮತ್ತೊಂದು ಪರೀಕ್ಷೆಯನ್ನು ನಡೆಸುವ ವೇಳೆ, ಸಿಬಿಎಸ್ ಇ ಶಾಲೆಗಳ ಶಿಕ್ಷಕರು ಸುಮಾರು 45 ದಿನಗಳ ಕಾಲ ಪರೀಕ್ಷೆಯಲ್ಲೇ ಮುಳುಗಬೇಕಾಗುತ್ತದೆ.

ಅಲ್ಲದೆ, ಪರೀಕ್ಷೆಗಳು ಮುಗಿದ ನಂತರ ಫಲಿತಾಂಶದ ದಿನಾಂಕವೂ ಮೊದಲೇ ನಿಗದಿಯಾಗಿರುತ್ತಾದ್ದರಿಂದ ಉತ್ತರ ಪತ್ರಿಕೆಗಳ ಮೌಲ್ಯ ಮಾಪನಕ್ಕೆ ಸರಿಯಾದ ಸಮಯವೂ ಸಿಗದಂತಾಗುತ್ತದೆ ಎಂಬ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಹೊಸ ಬಗೆಯ ವೇಳಾಪಟ್ಟಿಯನ್ನು ತಯಾರಿಸಲು ಮಂಡಳಿ ಚಿಂತನೆ ನಡೆಸಿದೆ.

ಸಭೆಯಲ್ಲಿ ಒಕ್ಕೊರಲ ಅಭಿಪ್ರಾಯ

ಸಭೆಯಲ್ಲಿ ಒಕ್ಕೊರಲ ಅಭಿಪ್ರಾಯ

ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಸಿಬಿಎಸ್ ಇ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಮಂಡಳಿಯ ಅಧೀನದಲ್ಲಿರುವ ಶಾಲೆಗಳ ಪ್ರಾಂಶುಪಾಲರ ಹಾಗೂ ಇತರ ಪ್ರತಿನಿಧಿಗಳ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ, 10ನೇ ಹಾಗೂ 12ನೇ ತರಗತಿಗಳ ಪರೀಕ್ಷೆಗಳನ್ನು ಒಂದೇ ಅವಧಿಯಲ್ಲಿ ನಡೆಸುವ ಒಮ್ಮತದ ಅಭಿಪ್ರಾಯಗಳು ಬಂದವು.

ದಿನಕ್ಕೆರಡು ಎಕ್ಸಾಂ

ದಿನಕ್ಕೆರಡು ಎಕ್ಸಾಂ

ಉದಾಹರಣೆಗೆ, ಮಾರ್ಚ್ 1ರಿಂದ ಪರೀಕ್ಷಾ ಸಮಯ ಶುರುವಾದರೆ, ಬೆಳಗ್ಗೆ 12ನೇ ತರಗತಿ ಹಾಗೂ ಮಧ್ಯಾಹ್ನ 10ನೇ ತರಗತಿ ಅಥವಾ ಬೆಳಗ್ಗೆ 10ನೇ ತರಗತಿ ಅಥವಾ ಮಧ್ಯಾಹ್ನ 12ನೇ ತರಗತಿ ಪರೀಕ್ಷೆಗಳನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದು ಸಾಧ್ಯವಾದರೆ, ದೇಶದಲ್ಲಿ ಸಿಬಿಎಸ್ ಇ ಅಡಿಯಲ್ಲಿ ಬರುವ ಸುಮಾರು 18 ಸಾವಿರ ವಿದ್ಯಾ ಸಂಸ್ಥೆಗಳಲ್ಲಿ 10ನೇ, 12ನೇ ತರಗತಿ ಪರೀಕ್ಷೆಗಳು ಏಕಕಾಲದಲ್ಲೇ ನಡೆಯುವ ಹೊಸ ಪದ್ಧತಿ ಜಾರಿಗೊಳ್ಳಲಿದೆ.

ಮೌಲ್ಯಮಾಪನಕ್ಕೆ ಹೆಚ್ಚು ಒತ್ತು

ಮೌಲ್ಯಮಾಪನಕ್ಕೆ ಹೆಚ್ಚು ಒತ್ತು

ಒಟ್ಟಿನಲ್ಲಿ ಒಂದೇ ಅವಧಿಯಲ್ಲಿ 10 ಹಾಗೂ 12ನೇ ತರಗತಿ ಪರೀಕ್ಷೆಗಳು ಮುಗಿದರೆ, ಶಿಕ್ಷಕರಿಗೆ ಹೆಚ್ಚು ಅನುಕೂಲವಾಗಿ, ಉತ್ತರ ಪತ್ರಿಕೆಗಳನ್ನು ತದೇಕಚಿತ್ತದಿಂದ ತಿದ್ದಲು ಹೆಚ್ಚು ಸಮಯ ಸಿಗುತ್ತದೆ ಎಂದು ಹೇಳಲಾಗಿದೆ.

ಆಡಳಿತ ಮಂಡಳಿ ಒಪ್ಪಿದರೆ ಜಾರಿ

ಆಡಳಿತ ಮಂಡಳಿ ಒಪ್ಪಿದರೆ ಜಾರಿ

ಸಭೆಯಲ್ಲಿ ಬಂದ ಅಭಿಪ್ರಾಯಕ್ಕೆ ಪ್ರಾಶಸ್ತ್ಯ ನೀಡಲಾಗಿದ್ದರೂ ಇನ್ನೂ ಆ ಬಗ್ಗೆ ನಿರ್ಧಾರ ಕೈಗೊಂಡಿಲ್ಲವೆಂದು ಮಂಡಳಿಯ ಕೆಲ ಉನ್ನತ ಮೂಲಗಳು ತಿಳಿಸಿವೆ. ಸಿಬಿಎಸ್ ಇ ಆಡಳಿತ ಮಂಡಳಿಯಲ್ಲಿ ಈ ವಿಚಾರ ಪ್ರಸ್ತಾಪವಾಗಿ, ಮಂಡಳಿ ಒಪ್ಪಿದರೆ ಮಾತ್ರ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

English summary
The Central Board of Secondary Education (CBSE) proposes to hold the finals for classes 10 and 12 on same dates in two shifts, a move that will reduce the examination period and give teachers extra time to check answer-scripts more thoroughly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X