ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು 'CBSE ಅಂಕ ನಿಯಮ' ? ನೀವು ತಿಳಿಯಬೇಕಾದ 5 ವಿಚಾರ

ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳಲ್ಲಿ ತಪ್ಪಿದ್ದರೆ, ಪಠ್ಯೇತರ ಪ್ರಶ್ನೆಗಳು ಕಾಣಿಸಿಕೊಂಡಿದ್ದರೆ ಅಂಥ ಪ್ರಶ್ನೆಗಳಿಗೆ ನಿಗದಿಗೊಳಿಸಲಾಗಿದ್ದ ಅಂಕಗಳನ್ನು ಕೃಪಾಂಕ ಮಾದರಿಯಲ್ಲಿ ನೀಡುತ್ತಿದ್ದುದೇ ಸಿಬಿಎಸ್ ಇ ಅಂಕ ಮಿತಿ ನಿಯಮ.

|
Google Oneindia Kannada News

ನವದಹೆಲಿ, ಮೇ 25: ಕೇಂದ್ರೀಯ ಪ್ರೌಢ ಶಿಕ್ಷಣಾ ಮಂಡಳಿ (ಸಿಬಿಎಸ್ ಇ) ಹಾಗೂ ದೆಹಲಿ ಹೈಕೋರ್ಟ್ ಜಟಾಪಟಿಯಿಂದಾಗಿ ಸಿಬಿಎಸ್ ಇ 12ನೇ ತರಗತಿಯ ಫಲಿತಾಂಶಗಳು ಹೊರಬೀಳುವುದು ಸದ್ಯದ ಮಟ್ಟಿಗೆ ಮುಂದೂಡಲ್ಪಟ್ಟಿದೆ.

ಸಿಬಿಎಸ್ ಇ ಈವರೆಗೆ ತಾನು ಹೊಂದಿದ್ದ ಅಂಕ ಮಿತಿ ನಿಯಮಗಳನ್ನು ಕೈಬಿಟ್ಟಿರುವುದೇ ಈ ಎಲ್ಲಾ ಬೆಳವಣಿಗೆಗಳಿಗೆ ಮೂಲ ಕಾರಣ. ಕಳೆದ ವರ್ಷದ ಫಲಿತಾಂಶ ಪ್ರಕಟಗೊಳ್ಳುವಾಗುವವರೆಗೆ ಇದ್ದ ನಿಯಮವನ್ನು ಈ ಬಾರಿ ಕೈಬಿಟ್ಟಿರುವುದರಿಂದ ಕೆಲವು ಮಕ್ಕಳ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.[ಸುಪ್ರೀಂ ಮೆಟ್ಟಿಲೇರದಿರಲು ಸಿಬಿಎಸ್ ಇ ನಿರ್ಧಾರ?]

ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಮಂಗಳವಾರ ಆದೇಶ ನೀಡಿ, ಅಂಕ ಮಿತಿ ನಿಯಮವನ್ನು ಈ ಬಾರಿಯೂ ಮುಂದುವರಿಸಿಕೊಂಡು ಹೋಗುವಂತೆ ಸಿಬಿಎಸ್ ಇಗೆ ಸೂಚನೆ ನೀಡಿತು.

ಆದರೆ, ಇದಕ್ಕೆ ಸಮ್ಮತಿಸದ ಸಿಬಿಎಸ್ ಇ, ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.[ಸಿಬಿಎಸ್ ಇ ಫಲಿತಾಂಶ ಮತ್ತಷ್ಟು ತಡ: ಆತಂಕದಲ್ಲಿ ವಿದ್ಯಾರ್ಥಿಗಳು]

ಈ ಎಲ್ಲಾ ಗೊಂದಲಗಳಿಗೆ ಮೂಲ ಕಾರಣವಾಗಿರುವ ಆ ಅಂಕ ಮಿತಿ ನಿಯಮ ಏನು? ಅದನ್ನು ಸಿಬಿಎಸ್ ಇ ಕೈ ಬಿಟ್ಟಿದ್ದೇಕೆ ? ಆ ನಿಯಮವನ್ನು ಮುಂದುವರಿಸಿ ಎಂದು ಹೈಕೋರ್ಟ್ ಹೇಳಿದ್ದೇಕೆ? ಆ ನಿಯಮಗಳಿಂದ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಲಾಭವೇನು ? ಇವೇ ಮುಂತಾದ ವಿಚಾರಗಳಿಗೆ ಸಂಬಂಧಪಟ್ಟ ಐದು ಮಾಹಿತಿ ಇಲ್ಲಿ ಕೊಡಲಾಗಿದೆ.

ಕೃಪಾಂಕಗಳ ನೀಡುವ ನಿಯಮವಿದು

ಕೃಪಾಂಕಗಳ ನೀಡುವ ನಿಯಮವಿದು

ಸಾಮಾನ್ಯವಾಗಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವಾಗ ಕೆಲವಾರು ತಪ್ಪುಗಳು ಆಗುತ್ತವೆ. ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಕೆಲವೊಮ್ಮೆ ಇಂಥ ಪ್ರಶ್ನೆಗಳು ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ತಲೆ ತಿನ್ನುವುದು ಸಹಜ. ಸಿಬಿಎಸ್ ಇ ಸಿದ್ಧಪಡಿಸುವ ಪ್ರಶ್ನೆ ಪತ್ರಿಕೆಗಳಲ್ಲಿ ಆಗಾಗ ಇಂಥ ತಪ್ಪುಗಳು ಕಾಣಿಸಿಕೊಳ್ಳುತ್ತಿದ್ದವು. ಅಂದರೆ, ಪಠ್ಯೇತರ ಪ್ರಶ್ನೆಗಳು ಕಾಣಿಸಿಕೊಳ್ಳುವುದು ಅಥವಾ ತಾಂತ್ರಿಕವಾಗಿ ಪ್ರಶ್ನೆಗಳಲ್ಲಿ ತಪ್ಪು ಇಣುಕುವುದು ಆಗಾಗ ಮರುಕಳಿಸುತ್ತಿದ್ದವು. ಇದರಿಂದಾಗುವ ತೊಂದರೆಗಳನ್ನು ಮನಗಂಡ ಮಂಡಳಿ, ಇಂಥ ಪ್ರಶ್ನೆಗಳು ಬಂದರೆ ಆ ಪ್ರಶ್ನೆಗಳಿಗೆ ನಿಗದಿಪಡಿಸಿರುವ ಅಂಕಗಳನ್ನು ಕೃಪಾಂಕ ಮಾದರಿಯಲ್ಲಿ ನೀಡುವ ನಿಯಮವನ್ನು ಜಾರಿಗೆ ತಂದಿತ್ತು. ಇದೇ ಅಂಕ ಮಿತಿ ನಿಯಮ.

ಹೆಚ್ಚುವರಿ ಅಂಕಗಳ ಲಾಭ

ಹೆಚ್ಚುವರಿ ಅಂಕಗಳ ಲಾಭ

ಪಠ್ಯೇತರ ಪ್ರಶ್ನೆಗಳಿದ್ದರೆ ಮಾತ್ರ ಕೃಪಾಂಕ ಸಿಗುವುದಲ್ಲ. ಬದಲಿಗೆ, ಪ್ರಶ್ನೆಗಳಲ್ಲೇ
ತಪ್ಪಿದ್ದರೂ ಅವುಗಳಿಗೂ ಕೃಪಾಂಕ ನೀಡುವ ನಿಯಮವನ್ನು ಅಳವಡಿಸಿಕೊಳ್ಳಲಾಯಿತು. ಅಂದರೆ,
ನಿರ್ದಿಷ್ಟ ವಿಷಯದ ಪ್ರಶ್ನೆ ಪತ್ರಿಕೆಗಳಲ್ಲಿ ಒಂದೆರಡು ಇಂಥ ಪ್ರಶ್ನೆಗಳು ಬಂದರೂ, ಆ
ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆಯಲಿ, ಬಿಡಲಿ, ಆ ಪ್ರಶ್ನೆಗಳಿಗೆ
ನಿಗದಿಪಡಿಸಿದ್ದ ಅಂಕಗಳನ್ನು ವಿದ್ಯಾರ್ಥಿಯು ಆ ವಿಷಯದಲ್ಲಿ ಗಳಿಸುವ ಅಂಕಗಳಿಗೆ
ಹೆಚ್ಚುವರಿಯಾಗಿ ಸೇರಿಸಿ ಪ್ರಕಟಿಸಲಾಗುತ್ತಿತ್ತು.

ಕೃಪಾಂಕದಿಂದ ಫಲಿತಾಂಶದ ಮೇಲೆ ಪರಿಣಾಮ

ಕೃಪಾಂಕದಿಂದ ಫಲಿತಾಂಶದ ಮೇಲೆ ಪರಿಣಾಮ

ಶೇ. 90ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ಶೇ. 95ರ ಗಡಿ ದಾಟಿಬಿಡುತ್ತಿದ್ದರು. ಇನ್ನು, ಉತ್ತಮವಾಗಿ
ಪರೀಕ್ಷೆ ಬರೆಯದೇ ಫೇಲ್ ಆಗುವ ಭೀತಿ ಎದುರಿಸುತ್ತಿದ್ದ ವಿದ್ಯಾರ್ಥಿಗಳು
ತೇರ್ಗಡೆಯಾಗಿಬಿಡುತ್ತಿದ್ದರು. ಇದನ್ನು ತಪ್ಪಿಸಲು ಮಂಡಳಿ ಈ ಕ್ರಮ ಕೈಗೊಂಡಿದೆ.

ವಿವಾದಕ್ಕೆ ಕಾರಣವಾಯ್ತು

ವಿವಾದಕ್ಕೆ ಕಾರಣವಾಯ್ತು

ಮಂಡಳಿಯು ಆ ಕೃಪಾಂಕ ನಿಯಮವನ್ನು ಕೈಬಿಟ್ಟಿದೆ. ಆದರೆ, ಮಂಡಳಿಯಿಂದ ಇಲ್ಲೊಂದು ತಾಂತ್ರಿಕ ತಪ್ಪು ಆಗಿದೆ. 2017ನೇ ಸಾಲಿನ 12ನೇ ತರಗತಿಯ ಪರೀಕ್ಷೆಗಳು ಮುಗಿದ ನಂತರ ಅಂಕ ಮಿತಿ ನಿಯಮ ಕೈಬಿಟ್ಟಿರುವುದಾಗಿ ಮಂಡಳಿ ಘೋಷಿಸಿದೆ. ಇದೇ ವಿವಾದಕ್ಕೆ ಮೂಲ ಕಾರಣ. ಹೀಗೆ, ಏಕಾಏಕಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂಬುದು ಪೋಷಕರ ವಾದ. ಇದೇ ಕಾರಣಕ್ಕಾಗಿ,
ಕೆಲವು ಪೋಷಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ವರ್ಷದ ಫಲಿತಾಂಶ ಕೊಟ್ಟುಬಿಡಿ ಎಂದಿದೆ ಹೈಕೋರ್ಟ್

ಈ ವರ್ಷದ ಫಲಿತಾಂಶ ಕೊಟ್ಟುಬಿಡಿ ಎಂದಿದೆ ಹೈಕೋರ್ಟ್

ಮೇಲ್ಮನವಿಯ ವಿಚಾರ ನಡೆಸಿರುವ ದೆಹಲಿ ಹೈಕೋರ್ಟ್, ನಿಯಮಗಳನ್ನು ನಿಮಗಿಷ್ಟ (ಸಿಬಿಎಸ್ ಇ) ಬಂದಂತೆ ಕೈಬಿಡುವುದು ಅಥವಾ ಮಾರ್ಪಾಟು ಮಾಡುವುದು ಸಲ್ಲದು. ವಿದ್ಯಾರ್ಥಿಗಳು 2017ನೇ ವರ್ಷದ ಪರೀಕ್ಷೆಗಳಿಗೆ ಅರ್ಜಿಗಳನ್ನು ತುಂಬುವಾಗ ಅಂಕ ಮಿತಿ ನಿಯಮ ಜಾರಿಯಲ್ಲಿತ್ತು.
ಆದರೆ, ಫಲಿತಾಂಶ ಬರುವಾಗ ಆ ನಿಯಮವನ್ನು ಕೈಬಿಟ್ಟರೆ ಹೇಗೆ? ಎಂದು ಪ್ರಶ್ನೆ ಮಾಡಿದೆ.
ನೀವು (ಸಿಬಿಎಸ್ ಇ) ಏನೇ ನಿಯಮ ಬದಲಾಯಿಸಿಕೊಳ್ಳಿ. ಆದರೆ, ಹೀಗೆ ಏಕಾಏಕಿ ಬದಲಾವಣೆ
ತರಬೇಡಿ. ಹಾಗಾಗಿ, ಅಂಕ ಮಿತಿ ನಿಯಮದ ಆಧಾರದಲ್ಲೇ ಈ ವರ್ಷದ ಫಲಿತಾಂಶ ಕೊಟ್ಟುಬಿಡಿ
ಎಂದು ಹೇಳಿದೆ. ಈಗಾಗಲೇ ಅಂಕ ಮಿತಿ ನಿಯಮ ರದ್ದುಗೊಳಿಸಿದ ಆಧಾರದ ಮೇಲೆ ಫಲಿತಾಂಶ
ಸಿದ್ಧಪಡಿಸಿರುವ ಮಂಡಳಿಯು ದೆಹಲಿ ಹೈಕೋರ್ಟ್ ಆದೇಶದಿಂದಾಗಿ ಇಕ್ಕಟ್ಟಿಗೆ ಸಿಲುಕಿದೆ.
ಆದರೆ, ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಸುಪ್ರೀಂ ಕೋರ್ಟ್ ನಲ್ಲಿ ದೆಹಲಿ
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು ಮುಂದಾಗಿದೆ.

English summary
Central Board of Secondary Education (CBSE) is all over the news for its marks moderation policy. CBSE removed the Marks Moderation Policy this year has created huge storm. Here are the five things you need to know about this policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X