ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್ಇ: 12, 10ನೇ ತರಗತಿ ಫಲಿತಾಂಶ ನೋಡುವುದು ಹೇಗೆ?

ಪರೀಕ್ಷೆಗಳಲ್ಲಿ ಕ್ಲಿಷ್ಟ ಪ್ರಶ್ನೆಗಳು ಬಂದಾಗ ನೀಡಲಾಗುತ್ತಿದ್ದ ಗ್ರೇಸ್ ಮಾರ್ಕ್ ಗಳನ್ನು ಈ ವರ್ಷದಿಂದ ಹಿಂತೆಗೆದುಕೊಳ್ಳಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸರಾಸರಿ ಅಂಕಗಳು ಕುಸಿತವಾಗುವ ಸಾಧ್ಯತೆ ಇದೆ.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ 9: ಸಿಬಿಎಸ್ಇ 12 ಮತ್ತು 10 ನೇ ತರಗತಿಯ ಫಲಿತಾಂಶ ಕ್ರಮವಾಗಿ ಮೇ 24 ಮತ್ತು ಜೂನ್ 2ರಂದು ಹೊರ ಬೀಳಲಿದೆ. ಈ ದಿನದಂದು ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಕಳೆದ ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಈ ಪರೀಕ್ಷೆಗಳು ನಡೆದಿದ್ದವು.

ಈ ಬಾರಿಯ ಸಿಬಿಎಸ್ಇ ಪರೀಕ್ಷೆಯಲ್ಲಿ 'ಮಾಡರೇಷನ್ ಪಾಲಿಸಿ'ಗೆ ಬ್ರೇಕ್ ಹಾಕಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಸಿಗುವುದಿಲ್ಲ. ಕ್ಲಿಷ್ಟ ಹಾಗೂ ಸಿಲೆಬಸ್ ಹೊರಗಿನ ಪ್ರಶ್ನೆಗಳು ಬಂದರೂ ಗ್ರೇಸ್ ಮಾರ್ಕ್ ಪಡೆಯಲು ಅವಕಾಶ ಇಲ್ಲ.

ಇನ್ನು ಸದ್ಯದಲ್ಲೇ ಇದರ ಜತೆಗೆ ಯುಜಿಸಿ ನೆಟ್ ಪರೀಕ್ಷೆಯ ಫಲಿತಾಂಶವೂ ಹೊರ ಬೀಳಲಿದೆ. ಈ ಬಾರಿ ನೆಟ್ ಪರೀಕ್ಷೆಯನ್ನು ಸಿಬಿಎಸ್ಇ ನಡೆಸಿದ್ದು ಇದರ ಫಲಿತಾಂಶ ಕೂಡಾ ಇದೇ ಮೇ ಎರಡನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

10ನೇ ತರಗತಿ ಫಲಿತಾಂಶ ನೋಡುವುದು ಹೇಗೆ?

10ನೇ ತರಗತಿ ಫಲಿತಾಂಶ ನೋಡುವುದು ಹೇಗೆ?

*ಸಿಬಿಎಸ್ಇ ಅಧಿಕೃತ ವೆಬ್ಸೈಟ್ cbse.nic.in ಅಥವಾ cbseresults.nic.in ಭೇಟಿ ನೀಡಬೇಕು.

*ನಂತರ 'Exam Results' ಬಟನ್ ಮೇಲೆ ಕ್ಲಿಕ್ ಮಾಡಬೇಕು.

*ಇದಾದ ನಂತರ 'Class 10th supplementary exam results' ಮೇಲೆ ಕ್ಲಿಕ್ ಮಾಡಿ ರೋಲ್ ನಂಬರ್ ಹಾಕಿದರೆ ಫಲಿತಾಂಶ ಸಿಗುತ್ತದೆ

12ನೇ ತರಗತಿ ಫಲಿತಾಂಶ

12ನೇ ತರಗತಿ ಫಲಿತಾಂಶ

ಇನ್ನು 12ನೇ ತರಗತಿಯ ಫಲಿತಾಂಶವನ್ನು ಮೇ 24ನೇ ತಾರೀಕು ಪ್ರಕಟಿಸುವ ಸಾಧ್ಯತೆ ಇದೆ. ಪಂಚ ರಾಜ್ಯಗಳ ಚುನಾವಣೆಗಳ ಕಾರಣಕ್ಕೆ ಈ ಬಾರಿ ಪರೀಕ್ಷೆ ತಡವಾಗಿ ಆರಂಭಗೊಂಡಿತ್ತು. ಹೀಗಾಗಿ ಫಲಿತಾಂಶವೂ ತಡವಾಗಿ ಪ್ರಕಟವಾಗಲಿದೆ.

ಯುಜಿಸಿ ನೆಟ್ ಪರೀಕ್ಷೆ ಫಲಿತಾಂಶ

ಯುಜಿಸಿ ನೆಟ್ ಪರೀಕ್ಷೆ ಫಲಿತಾಂಶ

ಈ ಬಾರಿ ಸಿಬಿಎಸ್ಇ ನಡೆಸಿದ ಯುಜಿಸಿ ನೆಟ್ 2017 ರ ಫಲಿತಾಂಶ ಮೇ 2ನೇ ವಾರದಲ್ಲಿ ಹೊರ ಬೀಳುವ ಸಾಧ್ಯತೆ ಇದೆ. ಮೇ 10 ರಂದು ಫಲಿತಾಂಶ ಅಧಿಕೃತ ವೆಬ್ಸೈಟ್ cbsenet.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

ಜೂನ್ 22ರಂದು ನೆಟ್ ಪರೀಕ್ಷೆ ನಡೆಸಲಾಗಿತ್ತು. ಸಹಾಯಕ ಪ್ರಧ್ಯಾಪಕರು ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ ಗೆ ಈ ಪರೀಕ್ಷೆಗಳನ್ನು ದೇಶದಾದ್ಯಂತ ನಡೆಸಲಾಗಿತ್ತು.

'ಮಾಡರೇಷನ್ ಪಾಲಿಸಿ'ಗೆ ಬ್ರೇಕ್

'ಮಾಡರೇಷನ್ ಪಾಲಿಸಿ'ಗೆ ಬ್ರೇಕ್

ಪರೀಕ್ಷೆಗಳಲ್ಲಿ ಕ್ಲಿಷ್ಟ ಪ್ರಶ್ನೆಗಳು ಮತ್ತು ಸಿಲೆಬಸ್ ನಿಂದ ಹೊರಗಿನ ಪ್ರಶ್ನೆಗಳು ಬಂದಾಗ ನೀಡಲಾಗುತ್ತಿದ್ದ ಗ್ರೇಸ್ ಮಾರ್ಕ್ ಗಳನ್ನು ಈ ವರ್ಷದಿಂದ ಹಿಂತೆಗೆದುಕೊಳ್ಳಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸರಾಸರಿ ಅಂಕಗಳು ಕುಸಿತವಾಗುವ ಸಾಧ್ಯತೆ ಇದೆ. ಕೆಲವೇ ಅಂಕಗಳಿಂದ ಪಾಸ್ ಲಿಸ್ಟಿಗೆ ಸೇರುವವರಿಗೂ ಇದು ತೊಂದರೆಯಾಗಲಿದೆ.

ಯಾಕೆ ಹೀಗೆ?

ಯಾಕೆ ಹೀಗೆ?

2016 ರಲ್ಲಿ ಸಿಬಿಎಸ್ಇ ಮಾನವ ಸಂಪನ್ಮೂಲ ಇಲಾಖೆಗೆ ಈ ಮಾಡರೇಷನ್ ಪಾಲಿಸಿ ಜಾರಿಗೆ ತರುವಂತೆ ಕೇಳಿಕೊಂಡಿತ್ತು. ಅದರಂತೆ ಇದೀಗ ಈ ಪಾಲಿಸಿ ಜಾರಿಗೆ ತರಲಾಗಿದೆ.

ಕಳೆದ ವರ್ಷ ಸಿಬಿಎಸ್ಇ ಪರೀಕ್ಷೆಗಳಲ್ಲಿ ಈ ಗ್ರೇಸ್ ಮಾರ್ಕ್ ನಿಂದಾಗಿ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಹೀಗಾಗಿ ಈ ಬಾರಿ ಅನಿವಾರ್ಯವಾಗಿ ಈ ಗ್ರೇಸ್ ಮಾರ್ಕ್ ಸಂಪ್ರದಾಯಕ್ಕೆ ತಿಲಾಂಜಲಿ ನೀಡಲಾಗಿದೆ.

English summary
It is official that the CBSE results for classes 12th and 10th will be declared on May 24 and June 2 respectively. The CBSE results will be announced at 12 pm on the above mentioned dates. The examinations had taken place in the month of March and April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X