ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್ ಇ 12ನೇ ತರಗತಿ ರಿಸಲ್ಟ್ ಅಧ್ವಾನ, 90 ಬಂದವರಿಗೆ 42 ಅಂಕ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜೂನ್ 19: ಈ ವರ್ಷದ ಸಿಬಿಎಸ್ ಇ ಹನ್ನೆರಡನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಅದು ಯಾವ ಪರಿ ಗೊಂದಲ ಆಗಿದೆಯೆಂದರೆ, ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಮರು ಪರಿಶೀಲನೆಗೆ ಹಾಕಿದ್ದಾರೆ. ನಮಗೆ ಕಡಿಮೆ ಅಂಕ ಬಂದಿದೆ ಎಂಬುದು ಎಲ್ಲರಿಂದಲೂ ಬರುತ್ತಿರುವ ಒಂದೇ ಉತ್ತರ.

ವಿದ್ಯಾರ್ಥಿಗಳು, ಅದೂ ಇಷ್ಟೊಂದು ವಿದ್ಯಾರ್ಥಿಗಳು ಒಂದೇ ರೀತಿ ದೂರು ಹೇಳಿಕೊಳ್ಳುತ್ತಿರುವುದಷ್ಟೇ ಅಲ್ಲ, ಉತ್ತರ ಪತ್ರಿಕೆಗಳ ಮರು ಪರಿಶೀಲನೆ ಬಳಿಕ ಸಿಕ್ಕಾಪಟ್ಟೆ ಅಂಕಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸದ್ಯದಲ್ಲೇ ಸಿಬಿಎಸ್ ಇಯಿಂದ ಸ್ಪಷ್ಟನೆ ಕೂಡ ನೀಡುವ ಸಾಧ್ಯತೆ ಇದೆ.

CBSE Class 12 results 2017: Fate of 10,98,420 students hangs in balance, clarification soon

ಉದಾಹರಣೆ ಕೇಳಿ. ಒಬ್ಬ ವಿದ್ಯಾರ್ಥಿಗೆ 68 ಅಂಕ ಬಂದಿತ್ತು. ಮರು ಪರಿಶೀಲನೆ ಅಂತ ಹಾಕಿದ ಮೇಲೆ 95 ಅಂಕ ಬಂದಿದೆ. ಇನ್ನೂ ವಿಪರೀತ ಅಂದರೆ 42 ಅಂಕ ಬಂದಿದ್ದ ವಿದ್ಯಾರ್ಥಿಗೆ ಆ ನಂತರ 90 ಅಂಕವಾಗಿದೆ. ನ್ಯೂಸ್ 18 ಮಾಧ್ಯಮ ಸಂಸ್ಥೆ ಸಿಬಿಎಸ್ ಇಯ ಮಾಜಿ ಅಧ್ಯಕ್ಷ ಅಶೋಕ್ ಗಂಗೂಲಿ ಹೇಳಿಕೆಯನ್ನು ಉದಾಹರಿಸಿದೆ.

ನೀಟ್ ಫಲಿತಾಂಶ ಪ್ರಕಟಿಸಲು ಸಿಬಿಎಸ್ ಇಗೆ ಸುಪ್ರೀಂ ಅನುಮತಿನೀಟ್ ಫಲಿತಾಂಶ ಪ್ರಕಟಿಸಲು ಸಿಬಿಎಸ್ ಇಗೆ ಸುಪ್ರೀಂ ಅನುಮತಿ

"ಸಾಂಪ್ರದಾಯಿಕ ಅಥವಾ ಹಳೆ ವ್ಯವಸ್ಥೆಯನ್ನು ಅನುಸರಿಸಿದ್ದರೆ ಇಂಥ ಅವಮಾನ ಅಥವಾ ಮುಜುಗರ ಆಗುತ್ತಿರಲಿಲ್ಲ" ಎಂದಿದ್ದಾರೆ. ಔಟ್ ಲಿಯರ್ ವ್ಯವಸ್ಥೆಯನ್ನು ಕಳೆದ ಇಪ್ಪತ್ತು ವರ್ಷದಿಂದ ಅನುಸರಿಸಲಾಗುತ್ತಿದೆ. ನಾಲ್ಕೈದು ವಿಷಯಗಳಲ್ಲಿ ಒಳ್ಳೆ ಅಂಕ ಬಂದು, ಒಂದು ಅಥವಾ ಎರಡು ವಿಷಯದಲ್ಲಿ ತೀರಾ ಕಡಿಮೆ ಅಂಕ ಬಂದಿದೆ ಎಂದರೆ ಏನೋ ತಪ್ಪಾಗಿದೆ ಎಂಬ ಅನುಮಾನ ಬರುತ್ತದೆ ಅಲ್ಲವೆ?

ಅದೇ ರೀತಿ ನಾಲ್ಕೈದು ವಿಷಯದಲ್ಲಿ ಕಡಿಮೆ ಅಂಕ ಬಂದು ಒಂದು ಅಥವಾ ಎರಡು ವಿಷಯದಲ್ಲಿ ಹೆಚ್ಚು ಅಂಕ ಬಂದರೆ ಆಗ ಕೂಡ ಪರಿಶೀಲನೆ ನಡೆಸಬೇಕಾಗುತ್ತದೆ. ಆ ಪದ್ಧತಿಗೆ ಔಟ್ ಲಿಯರ್ ವ್ಯವಸ್ಥೆ ಎನ್ನಲಾಗುತ್ತದೆ.

ಸಿಬಿಎಸ್ಇ ಫಲಿತಾಂಶ ಪ್ರಕಟ: ನೋಯ್ಡಾ ವಿದ್ಯಾರ್ಥಿನಿ ದೇಶಕ್ಕೆ ಪ್ರಥಮಸಿಬಿಎಸ್ಇ ಫಲಿತಾಂಶ ಪ್ರಕಟ: ನೋಯ್ಡಾ ವಿದ್ಯಾರ್ಥಿನಿ ದೇಶಕ್ಕೆ ಪ್ರಥಮ

ಈಗಿನ ಪ್ರಕರಣದಲ್ಲಿ ಸಿಬಿಎಸ್ ಇ ಫಲಿತಾಂಶ ಘೋಷಿಸುವುದರಲ್ಲಿ ನ್ಯಾಯ ಒದಗಿಸಿಲ್ಲ ಎಂಬುದು ತೋರಿಸುತ್ತದೆ. ಮೇಲಧಿಕಾರಿಗಳ ಒತ್ತಡಕ್ಕೆ ಆತುರಾತುರವಾಗಿ ಫಲಿತಾಂಶ ಘೋಷಣೆ ಮಾಡಿದಂತಿದೆ. ಇತ್ತೀಚೆಗೆ ಸಿಬಿಎಸ್ ಇ ಪರೀಕ್ಷೆ ಅಂಕಗಳಿಂದ ದೇಶದಾದ್ಯಂತ ಇರುವ ವಿದ್ಯಾರ್ಥಿಗಳು ನಿರಾಶೆಗೊಳಗಾಗಿದ್ದರು.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಉದಾಹರಣೆಗೆ ಎಂಬಂತೆ ಇಬ್ಬರು ವಿದ್ಯಾರ್ಥಿಗಳು ಮೊದಲಿಗೆ ಪಡೆದದ್ದು ಹಾಗೂ ಆ ನಂತರ ಬದಲಾದ ಅಂಕದ ಬಗ್ಗೆ ವರದಿ ಮಾಡಿದೆ. ಬಹಳ ತಪ್ಪುಗಳು ಗಣಿತ ಹಾಗೂ ಅರ್ಥಶಾಸ್ತ್ರ ವಿಷಯದಲ್ಲೇ ಆಗಿವೆ.

ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ, ಅಂಕಗಳ ಮರು ಎಣಿಕೆಗೆ ಅರ್ಜಿ ಹಾಕಿದ್ದಾರೆ. ಒಟ್ಟು 10,98,420 ವಿದ್ಯಾರ್ಥಿಗಳು ಇಡೀ ದೇಶದಾದ್ಯಂತ ಪರೀಕ್ಷೆ ಬರೆದಿದ್ದರು.

English summary
The CBSE Class 12 results 2017 were declared and it has been nothing but a mess. There has been an unprecedented number of students applying for re verification of their papers. It began with students complaining of low marks. After it was rectified, there was an incredible increase in the margin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X