ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್ಇ 12 ನೇ ತರಗತಿ ಫಲಿತಾಂಶ ಮುಂದೂಡಿಕೆ?

ದೆಹಲಿ ಹೈಕೋರ್ಟ್ ನ ನಿರ್ದೇಶನದ ಮೇರೆಗೆ ಮೇ 24ರಂದು ಪ್ರಕಟಗೊಳ್ಳಬೇಕಿದ್ದ ಸಿಬಿಎಸ್ಇ 12ನೇ ತರಗತಿಯ ಫಲಿತಾಂಶವನ್ನು ತಡೆಹಿಡಿಯುವ ಸಾಧ್ಯತೆಗಳಿವೆ.

|
Google Oneindia Kannada News

ನವದೆಹಲಿ, ಮೇ 24: ಲಕ್ಷಾನುಗಟ್ಟಲೆ ವಿದ್ಯಾರ್ಥಿಗಳು ಕಾತುರದಿಂದ ಎದುರು ನೋಡುತ್ತಿರುವ ಸಿಬಿಎಸ್ಇ ಪಠ್ಯಕ್ರಮದ 12ನೇ ತರಗತಿಯ 2017ನೇ ಸಾಲಿನ ಪರೀಕ್ಷಾ ಫಲಿತಾಂಶ ಮೇ 24ರಂದು ಪ್ರಕಟಗೊಳ್ಳಲಿವೆ ಎಂದು ಹೇಳಲಾಗಿದ್ದು, ಇದು ಪೋಷಕರ ಹಾಗೂ ವಿದ್ಯಾರ್ಥಿಗಳ ಎದೆಬಡಿತವನ್ನು ಹೆಚ್ಚಿಸಿದೆ.

ಆದರೆ, ಮೂಲಗಳ ಪ್ರಕಾರ, 12ನೇ ತರಗತಿಯ ಫಲಿತಾಂಶ ಮೇ 24ರಂದು ಪ್ರಕಟಗೊಳ್ಳುವುದು ಅನುಮಾನವಾಗಿದೆ. ಇತ್ತೀಚೆಗಷ್ಟೇ, ಮೇ 24ರಂದೇ ಫಲಿತಾಂಶ ನೀಡುವುದಾಗಿ ಸಿಬಿಎಸ್ಇ ಹೇಳಿತ್ತು..[ಸುಪ್ರೀಂ ಮೆಟ್ಟಿಲೇರದಿರಲು ಸಿಬಿಎಸ್ ಇ ನಿರ್ಧಾರ?]

CBSE Board 12th Result 2017 unlikely on May 24?

ಆದರೆ, ಮೇ 23ರಂದು ಸಿಬಿಎಸ್ಇಗೆ ನಿರ್ದೇಶನ ನೀಡಿರುವ ದೆಹಲಿ ಹೈಕೋರ್ಟ್, ಸಿಬಿಎಸ್ ಸಿ ಸಂಸ್ಥೆಯು ಈ ಹಿಂದೆ ಅನುಸರಿಸುತ್ತಿದ್ದ ಅಂಕ ಮಿತಿ ನಿಯಮವನ್ನು ಪುನಃ ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಲಯದ ನಿರ್ದೇಶನದ ಮೇರೆಗೆ ಫಲಿತಾಂಶ ಪಟ್ಟಿಯನ್ನು ಪರಿಷ್ಕರಿಸಬೇಕಾಗಿರುವ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಮುಂದೂಡಲು ಸಿಬಿಎಸ್ಇ ಸಂಸ್ಥೆ ನಿರ್ಧರಿಸಿದೆ ಎಂದು ಹೇಳಲಾಗಿದೆ.[ನಿಗದಿತ ಅವಧಿಯಲ್ಲೇ ಸಿಬಿಎಸ್ ಇ ಫಲಿತಾಂಶ: ಜಾವಡೇಕರ್]

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಬಿಎಸ್ಇ ಅಧಿಕಾರಿಯೊಬ್ಬರು, ''ದೆಹಲಿ ನ್ಯಾಯಾಲಯದ ಪ್ರತಿ ಇನ್ನೂ ಸಿಬಿಎಸ್ ಸಿ ಕಚೇರಿ ತಲುಪಿಲ್ಲ. ಮೇ 24ರಂದು ಅದು ಕಚೇರಿಗೆ ತಲುಪುವ ನಿರೀಕ್ಷೆಯಿದೆ. ನ್ಯಾಯಾಲಯದ ಸೂಚನೆಯ ಪ್ರತಿ ತಲುಪಿದ ನಂತರ ಫಲಿತಾಂಶ ಪ್ರಕಟಣೆ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ತಿಳಿಸಿದರು.[ಏನಿದು 'CBSE ಅಂಕ ನಿಯಮ' ? ನೀವು ತಿಳಿಯಬೇಕಾದ 5 ವಿಚಾರ]

ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವವರು cbseresults.nic.in ಜಾಲತಾಣಕ್ಕೆ ಭೇಟಿ ನೀಡಬಹುದು.

English summary
Contrary to expectations, the Central Board of Secondary Education (CBSE) is unlikely to declare Class 12 results today. This is after the High Court passed a ruling yesterday asking the CBSE board to reinstate the 'marks moderation policy' it had scrapped. It may take some more time for the results .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X