ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ ತಪ್ಪು ಒಪ್ಪಿಕೊಂಡ್ರೆ ನಾನು ಕ್ಷಮೆ ಕೇಳುತ್ತೇನೆ'

|
Google Oneindia Kannada News

ನವದೆಹಲಿ, ಡಿಸೆಂಬರ್, 15: ಭ್ರಷ್ಟಾಚಾರದ ಆರೋಪದಡಿ ಸಿಬಿಐ ಮಂಗಳವಾರ ದೆಹಲಿ ಸರ್ಕಾರದ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಚೇರಿ ಮೇಲೆ ಮಾಡಿದ ದಾಳಿ ವಿವಾದ ಎಬ್ಬಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಮೇಲೆ ತೀವ್ರ ವಾಗ್ದಾಳಿ ಮಾಡಿದ್ದಾರೆ. ಬಿಜೆಪಿ ಮತ್ತು ಸಿಬಿಐ ಅನ್ನು ಸಹ ತರಾಟೆಗೆ ತೆಗೆದುಕೊಂಡು ಆರೋಪಗಳ ಸುರಿಮಳೆ ಸುರಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್ ದ್ವೇಷದ ರಾಜಕಾರಣಕ್ಕೆ ಬಿಜೆಪಿ ಸರಿಯಾದ ಉದಾಹರಣೆ ಎಂದು ಹೇಳಿದರು. ಕೇಜ್ರಿವಾಲ್ ಮಾತಿನ ಹೈಲೈಟ್ಸ್ ಇಲ್ಲಿದೆ.['ಪ್ರಧಾನಿಯನ್ನು ಹೇಡಿ ಅಂದ ಕೇಜ್ರಿವಾಲ್ ಕ್ಷಮೆ ಕೇಳಲಿ']

new delhi

* ಸಿಬಿಐ ದಾಳಿ ಮಾಡಿದ್ದು ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಚೇರಿ ಮೇಲಲ್ಲ, ನನ್ನ ಕಚೇರಿ ಮೇಲೆ.
* 2007ರ ಪ್ರಕರಣದ ದಾಖಲೆಗಳು ಮುಖ್ಯಮಂತ್ರಿ ಕಚೇರಿಯಲ್ಲ ಇರುವುದಿಲ್ಲ. ಇದು ಸಿಬಿಐಗೆ ಗೊತ್ತಿಲ್ಲವೆ?
* ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ಕಡತಗಳಿಗಾಗಿ ಪ್ರಾಮಾಣಿಕ ಸರ್ಕಾರದ ಮೇಲೆ ಸಿಬಿಐ ದಾಳಿ ನಡೆಸಿದೆ.
* ಯಾವುದೇ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಮಾತ್ರ ಇರುವುದಿಲ್ಲ. ಹೀಗಾಗಿ ಇತರೆ ಅಧಿಕಾರಿಗಳ ಮೇಲೆ ಏಕೆ ದಾಳಿ ನಡೆಸಲಿಲ್ಲ?[ಸಾಮಾಜಿಕ ತಾಣದಲ್ಲಿ ಚರ್ಚೆಯ ಕಿಚ್ಚು ಹಚ್ಚಿದ ಸಿಬಿಐ ದಾಳಿ]
* ದೇಶದಲ್ಲಿ ನನ್ನ ಪಕ್ಷದ ಪ್ರಮಾಣಿಕತೆ ಬಗ್ಗೆ ಜನರಲ್ಲಿ ಯಾವುದೇ ಅನುಮಾನ ಇಲ್ಲ. ಆದರೂ ನನ್ನ ಕಚೇರಿ ಮೇಲೆ ದಾಳಿ ಮಾಡಿದ್ದು ಏಕೆ?
* ನನ್ನ ಮಗ ತಪ್ಪು ಮಾಡಿದರೂ ನಾನು ಸಹಿಸುವುದಿಲ್ಲ. ಸಿಬಿಐ ಬಿಟ್ಟು ಬೇರೆ ಯಾರಾನ್ನಾದರೂ ಹೆದರಿಸಬಹುದು. ಆದರೆ ನನ್ನನ್ನು ಹೆದರಿಸುವುದು ಸಾಧ್ಯವಿಲ್ಲ.
* ಮೋದಿ ಮೊದಲು ಅವರು ಮಾಡಿದ ತಪ್ಪಿಗೆ ಕ್ಷಮೆ ಕೇಳಲಿ. ನಂತರ ನಾವು ಬಳಸಿದ ಪದಕ್ಕೆ ಕ್ಷಮೆ ಕೇಳುತ್ತೇನೆ.
* ಶೀಲಾ ದೀಕ್ಷಿತ್ ಸರ್ಕಾರದ ಅಧಿಕಾರಿಗಳ ಮೇಲೆ ಸಿಬಿಐ ಏಕೆ ದಾಳಿ ಮಾಡುತ್ತಿಲ್ಲ.
* ಮುಖ್ಯಮಂತ್ರಿ ಕಚೇರಿಯಲ್ಲಿ ಯಾವುದೇ ಕಡತ 15 ದಿನಕ್ಕಿಂತ ಜಾಸ್ತಿ ಇರುವುದಿಲ್ಲ. ಇದು ಸಿಬಿಐಗೆ ಗೊತ್ತಿಲ್ಲವೇ?
* ರಾಜೇಂದ್ರ ಕುಮಾರ್ ಕೇವಲ ನೆಪ ಮಾತ್ರ, ಸಿಬಿಐ ಉದ್ದೇಶ ಬೇರೆ ಏನೋ ಇದೆ.

English summary
A furious BJP on Tuesday, Dec 15 lashed out at Arvind Kejriwal for his "disgraceful" remarks against Prime Minister Narendra Modi, and said it was shameful that the CM who came from the "womb of" anti-graft stir was protecting an officer involved in a "textbook case of corruption".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X