ಸಿಬಿಐಗೆ ಬರಲಿದ್ದಾರೆಯೇ ನೂತನ ಮಹಿಳಾ ನಿರ್ದೇಶಕಿ?

Posted By:
Subscribe to Oneindia Kannada

ನವದೆಹಲಿ, ಜನವರಿ 16: ಹಿರಿಯ ಐಪಿಎಸ್ ಮಹಿಳಾ ಅಧಿಕಾರಿಯಾದ ಕು. ಅರ್ಚನಾ ರಾಮಸುಂದರಂ ಅವರು, ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕರಾಗಿ ನೇಮಕಗೊಳ್ಳುವುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ನಿಯಮಗಳನುಸಾರ, ಸಿಬಿಐ ನಿರ್ದೇಶಕರನ್ನು ನೇಮಿಸುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ನ್ಯಾ. ಖೇಹರ್ ಸಿಂಗ್ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಇಂದು ಸಂಜೆ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ.ಈ ಬಗ್ಗೆ ಶೀಘ್ರ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.

CBI may get First Woman Chief

ಕೆಲ ದಿನಗಳ ಹಿಂದೆ, ಈ ಪ್ರತಿಷ್ಠಿತ ಹುದ್ದೆಗೆ ಗುಜರಾತ್ ನ ಪೊಲೀಸ್ ಅಧಿಕಾರಿಯಾದ ಆರ್.ಕೆ. ಆಸ್ತಾನಾ ಅವರನ್ನು ನೇಮಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಹಾಗಾಗಿ, ಈ ನಿರ್ಧಾರದಿಂದ ಹಿಂದೆ ಸರಿದಿರುವ ಕೇಂದ್ರ ಸರ್ಕಾರ, ಇದೀಗ ಮತ್ತೊಮ್ಮೆ ಆ ನಿಟ್ಟಿನಲ್ಲಿ ಕಸರತ್ತು ನಡೆಸಿದೆ.

ಮಂಗಳವಾರ ಸಂಜೆ ವೇಳೆಗೆ, ಸ್ಪಷ್ಟ ಮಾಹಿತಿ ಲಭ್ಯವಾಗಬಹುದೆಂದು ನಿರೀಕ್ಷಿಸಲಾಗಿದೆ.

ಒನ್ ಇಂಡಿಯಾ ಕನ್ನಡಕ್ಕೆ ಅಭಿಪ್ರಾಯ ತಿಳಿಸಿ: ಸಿಬಿಐಗೆ ಮಹಿಳಾ ನಿರ್ದೇಶಕರೊಬ್ಬರ ನೇಮಕವಾಗಬೇಕು ಎಂದು ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ಅದು ಈಗ ಕಾರ್ಯಗತವಾಗುವ ಹಂತಕ್ಕೆ ಬಂದಿದೆ. ಹೀಗೆ, ಹಲವಾರು ವರ್ಷಗಳಿಂದ ಮಹಿಳೆಯರ ನೇತೃತ್ವ ಕಾಣದ ಇಲಾಖೆಗಳಾವುದಾದರೂ ಇದ್ದರೆ ನಮಗೆ ಕೆಳಗಿನ ಕಮೆಂಟ್ ಜಾಗದಲ್ಲಿ ಬರೆದು ತಿಳಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Archana Ramasundaram, a woman IPS officer is among those in the running for Central Bureau of Investigation or CBI chief.
Please Wait while comments are loading...