ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ 'ಆಪ್ತ ರಾಷ್ಟ್ರ' ಸ್ಥಾನ, ಕಾವೇರಿ ತೀರ್ಮಾನ: ದೆಹಲಿ ಸಭೆ ಇಂದು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 29: ದೆಹಲಿಯಲ್ಲಿ ಗುರುವಾರ ಎರಡು ಮುಖ್ಯ ನಿರ್ಧಾರಗಳು ಆಗಲಿವೆ. ಪಾಕಿಸ್ತಾನಕ್ಕೆ ನೀಡಿದ 'ಆಪ್ತ ರಾಷ್ಟ್ರ' ಸ್ಥಾನ ವಾಪಸ್ ಪಡೆಯುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋಡಿ ಮತ್ತವರ ತಂಡ ಪರಿಶೀಲನೆ ನಡೆಸಲಿದೆ. ಇನ್ನು ಸಚಿವೆ ಉಮಾ ಭಾರತಿ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11.30ಕ್ಕೆ ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯೆ ಸಭೆ ನಡೆಯಲಿದೆ.

ಎರಡೂ ಸಭೆಗಳ ಬಗ್ಗೆ ಕುತೂಹಲದ ಕಣ್ಣುಗಳು ನೆಟ್ಟಿವೆ. ಮೋದಿ ಅಧ್ಯಕ್ಷತೆಯಲ್ಲಿ ಪಾಕಿಸ್ತಾನದ 'ಆಪ್ತ' ಸ್ಥಾನದ ನಿರ್ಧಾರದ ಬಗ್ಗೆ ಸಭೆ ನಡೆಯಲಿದೆ. ಉರಿ ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ ನಂತರ ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿ ಮಾಡುತ್ತೇವೆ ಎಂದು ಭಾರತ ಹೇಳಿತ್ತು. ಅದರಂತೆಯೇ ಇಸ್ಲಾಮಾಬಾದ್ ನಲ್ಲಿ ನಡೆಯಬೇಕಿದ್ದ ಸಾರ್ಕ್ ಸಮ್ಮೇಳನಕ್ಕೆ ಭಾರತವೂ ಸೇರಿದಂತೆ ಹಲವು ದೇಶಗಳು ಭಾಗವಹಿಸುತ್ತಿಲ್ಲ. ಆ ಕಾರಣಕ್ಕೆ ಸಮ್ಮೇಳನವೇ ರದ್ದಾಗಿದೆ.[ದೇವೇಗೌಡರ ಕಂಬನಿ: ಕಾವೇರಿ ವಿಷ್ಯದಲ್ಲಿ ಕರ್ನಾಟಕಕ್ಕೆ ಅನ್ಯಾಯ]

Uma Bharthi

ಇನ್ನು ಪಾಕಿಸ್ತಾನದೊಂದಿಗಿನ ಸಿಂಧು ನದಿ ಒಪ್ಪಂದವನ್ನು ಪುನರ್ ಪರಿಶೀಲಿಸುವುದಾಗಿ ಭಾರತ ಹೇಳಿದೆ. ಗುರುವಾರ ನಡೆಯುವ ಸಭೆಯಲ್ಲಿ 'ಆಪ್ತ ರಾಷ್ಟ್ರ' ಸ್ಥಾನ ವಾಪಸ್ ಪಡೆಯುವ ಬಗ್ಗೆಯೂ ಪರಿಶೀಲನೆ ನಡೆಯುತ್ತದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಮತ್ತು ವಾಣಿಜ್ಯ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೊದಲಿಗೆ ವಿಶ್ವ ವಾಣಿಜ್ಯ ಒಕ್ಕೂಟ (WTO)ಕ್ಕೆ ಮೊದಲಿಗೆ ಪಾಕಿಸ್ತಾನದ "ಆಪ್ತ ರಾಷ್ಟ್ರ'ದ ಸ್ಥಾನ ವಾಪಸ್ ಪಡೆದ ನಿರ್ಧಾರ ತಿಳಿಸುತ್ತದೆ. ಆ ನಂತರ ವಾಪಸ್ ಪಡೆಯಲಾಗುತ್ತದೆ. ಈ ಮಧ್ಯೆ ಸಚಿವೆ ಉಅಮಾಭಾರತಿ ತಮಿಳುನಾಡಿನ ಪ್ರತಿನಿಧಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಸಭೆ ನಡೆಸುತ್ತಾರೆ.[ನೀರು ಬಿಟ್ರೆ ಸಿಎಂ ಹಿಡ್ಕೊಂಡು ಹೊಡಿತೀವಿ : ಜಿಎಂ ಎಚ್ಚರಿಕೆ]

ಕರ್ನಾಟಕದಲ್ಲಿ ಬುಧವಾರ ಸುದೀರ್ಘ ಸಂಪುಟ ಸಭೆ ನಡೆದು, ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಏನು ತೀರ್ಮಾನವಾಗುವುದೋ ಆ ನಂತರ ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ನಿರ್ಧಾರ ಕೈಗೊಳ್ಳುವುದಕ್ಕೆ ತೀರ್ಮಾನಿಸಲಾಯಿತು. ಕೇಂದ್ರ ಸರಕಾರ ಕರೆದಿರುವ ಸಭೆಯ ನಂತರ ಮುಂದಿನ ಕ್ರಮದ ಬಗ್ಗೆ ಆಲೋಚಿಸುತ್ತೇವೆ ಎಂದು ಸಿದ್ದರಾಮಯ್ಯ ಬುಧವಾರ ತಿಳಿಸಿದ್ದರು.

English summary
The National Capital would today witness two major events. While Prime Minister Narendra Modi and his team would be reviewing the Most Favoured Nation status to Pakistan, senior minister Uma Bharti would hold talks on the Cauvery issue with Tamil Nadu and Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X