ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಗೌರವಗಳೊಂದಿಗೆ ಆರ್.ಕೆ.ಲಕ್ಷಣ್ ಅಂತ್ಯಕ್ರಿಯೆ

|
Google Oneindia Kannada News

ಮುಂಬೈ, ಜ. 27: ಅಂಗಾಂಗ ವೈಫಲ್ಯದಿಂದ ನಿಧನರಾದ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷಣ್ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳಿಂದ ನೆರವೇರಲಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಲಕ್ಷಣ್ ಅಂತಿಮ ದರ್ಶನ ಪಡೆಯಲಿದ್ದಾರೆ. ಪುಣೆಯಲ್ಲಿ ಜನವರಿ 27 ರಂದು ಮಧ್ಯಾಹ್ನ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. [ವ್ಯಂಗ್ಯಚಿತ್ರಕಾರ ಶ್ರೀಸಾಮಾನ್ಯ' ಆರ್.ಕೆ ಲಕ್ಷ್ಮಣ್ ವಿಧಿವಶ]

laxman

ಶ್ರೀ ಸಾಮಾನ್ಯ ಕಾರ್ಟೂನ್ ಮೂಲಕ ಜನಪಪ್ರಿಯರಾಗಿದ್ದ ಆರ್.ಕೆ.ಲಕ್ಷಣ್ ಅನಾರೋಗ್ಯದ ಕಾರಣ ಜನವರಿ 17 ರಂದು ಪುಣೆಯ ಆಸ್ಪತ್ರಗೆ ದಾಖಲಾಗಿದ್ದರು. ವಿವಿಧ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಲಾಗಿತ್ತು.

ಲಕ್ಷ್ಮಣ್' ಅವರು 56 ವರ್ಷ ಗಳಿಂದ 'ಟೈಮ್ಸ್ ಆಫ್ ಇಂಡಿಯ ದಿನ ಪತ್ರಿಕೆ'ಯಲ್ಲಿ ಬರೆಯುತ್ತಿದ್ದ 'ಕಾಮನ್ ಮ್ಯಾನ್' ('ಸಾಮಾನ್ಯ ಪ್ರಜೆ'), ಅಥವ 'ಜನಸಾಮಾನ್ಯ', 'ವ್ಯಂಗ್ಯ ಚಿತ್ರಾಂಕಣ' ವರ್ತಮಾನದ ಸಮಸ್ಯೆಗಳಿಗೆ, ರಾಜಕೀಯ ಸ್ಥಿತಿಗೆ ಹಿಡಿದ ಕನ್ನಡಿಯಂತಿರುತ್ತಿತ್ತು.

English summary
A state funeral will be accorded to eminent cartoonist R K Laxman, who died at the age of 94 after suffering multi-organ failure, Maharastra Government officials said. Chief minister Devendra Fadnavis will attend the last rites of Laxman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X