ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು 'ಜಿಯೊ' ಮೂಲಕ ಕಾರು ನಿಯಂತ್ರಿಸಿ, ಮೆಟ್ರೊ ಟಿಕೆಟ್ ಬುಕ್ ಮಾಡಿ!

ಗ್ರಾಹಕರ ಬದುಕನ್ನು ಸಂಪೂರ್ಣ ಡಿಜಿಟಲ್ ಮಯವನ್ನಾಗಿಸುವ ಕನಸು ಹೊತ್ತಿರುವ ರಿಲಯನ್ಸ್ ಜಿಯೋ ನೆಟ್ ವರ್ಕ್ ಸಂಸ್ಥೆ ಮುಂಬರುವ ದಿನಗಳಲ್ಲಿ ಹೊಸ ಮಾದರಿಯ ಆ್ಯಪ್ ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

|
Google Oneindia Kannada News

ನವದೆಹಲಿ, ಜನವರಿ 18: ಭಾರತೀಯ ದೂರ ಸಂಪರ್ಕ ಕ್ಷೇತ್ರದಲ್ಲಿ ಈಗಾಗಲೇ ಹೊಸ ಕ್ರಾಂತಿ ಮಾಡಿರುವ ರಿಲಯನ್ಸ್ ಕಂಪನಿ, ತನ್ನ ಜಿಯೊ ನೆಟ್ ವರ್ಕ್ ಮೂಲಕ ಗ್ರಾಹಕರ ಕಾರನ್ನೂ ನಿಯಂತ್ರಿಸುವ, ಮೆಟ್ರೋ ಟಿಕೆಟ್ ಬುಕ್ ಮಾಡುವ, ಮನೆಯ ಟೆಲಿವಿಷನ್ ನಲ್ಲಿ ಹತ್ತಾರು ಸಿನಿಮಾಗಳನ್ನು ಸಂಗ್ರಹಿಸುವಂತೆ ಮಾಡುವಂಥ ಆ್ಯಪ್ ಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.[ಇತ್ತ ನೋಡಿ, ಸ್ಯಾಮ್ ಸಂಗ್ ಮನೆಗೇ ಇಂದು ಬೆಂಕಿ ಬಿದ್ದಿದೆ!]

'ಡಿಜಿಟಲ್ ಲೈಫ್ ಸ್ಟೈಲ್ ಮಿಷನ್' ಎಂಬ ಪರಿಕಲ್ಪನೆಯೊಂದಿಗೆ ಹೊಸ ಹೊಸ ಆವಿಷ್ಕಾರಗಳನ್ನು ತುಂಬಲು ಕಂಪನಿ ಆಲೋಚಿಸಿದೆ. ಹೌದು. ಇದೆಲ್ಲಾ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತಂತ್ರಗಾರಿಕೆ ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ, ಜಿಯೋ ಗ್ರಾಹಕರಿಗೆ ಮಾತ್ರ ಇದೊಂದು ಹೊಸ ಅನುಭವಗಳನ್ನು ನೀಡುವುದು ಗ್ಯಾರಂಟಿ.[ಬಂಧನದ ಭೀತಿಯಲ್ಲಿ ಸ್ಯಾಮ್ ಸಂಗ್ ಕಂಪನಿ ಬಾಸ್]

Car app will be the next from Jio

ಕಾರು ನಿಯಂತ್ರಣ ಹೇಗೆ?
ಜಿಯೋ ಸಿಮ್ ಉಳ್ಳ ಡಾಂಗಲ್ ಕನೆಕ್ಷನ್ ನಿಂದ ಸಾಮಾನ್ಯ ಕಾರೊಂದನ್ನು ಡಿಜಟಲೀಕರಣಗೊಳಿಸುವಂಥ ವ್ಯವಸ್ಥೆ ಇದು. ಇತ್ತೀಚಿನ ವರ್ಷಗಳಲ್ಲಿ ಬಂದಿರುವ ಕಾರುಗಳಲ್ಲಿ ಅಳವಡಿಸಲಾದ ಯುಎಸ್ ಬಿ ಪೋರ್ಟ್ ಗೆ ಜಿಯೋ ಸಿಮ್ ಇರುವ ಡೋಂಗಲ್ ಪರಿಕರವನ್ನು ಅಳವಡಿದರೆ ಸಾಕು, ಕಾರಿನ ಎಲ್ಲಾ ತಾಂತ್ರಿಕ ಮಾಹಿತಿಯು ಗ್ರಾಹಕರ ಮೊಬೈಲ್ ಆ್ಯಪ್ ಗೆ ರವಾನೆಯಾಗುವ ವ್ಯವಸ್ಥೆ ಇದಾಗಿದ್ದು, ಕಾರಿನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದ್ದರೂ ಕಾರಿನ ಸಂಪೂರ್ಣ ಮಾಹಿತಿಗಳು ಜಿಯೋ ಆ್ಯಪ್ ನಲ್ಲಿ ಲಭ್ಯವಾಗಲಿವೆ. ಇದರಿಂದ, ಕಾರಿನ ಬ್ಯಾಟರಿ ಡಿಸ್ಚಾರ್ಜ್ ಆಗಿದೆಯೇ, ಇಂಧನ ಪ್ರಮಾಣ ಎಷ್ಟಿದೆ ಮುಂತಾದ ಮಾಹಿತಿಗಳನ್ನು ತಿಳಿಯಬಹುದಾಗಿದೆ ಎಂದು ಮೂಲಗಳು ಹೇಳಿವೆ.[ಜಿಯೋಗೆ ಸೆಡ್ಡು ಹೊಡೆಯಲು ಏರ್ ಟೆಲ್ ನಿಂದ ಉಚಿತ ಆಫರ್]

ಮುಂಬರಲಿವೆ ಮತ್ತಷ್ಟು ಆ್ಯಪ್ ಗಳು
ಇದೊಂದೇ ಅಲ್ಲ, ಇಂಥ ಹಲವಾರು ಆ್ಯಪ್ ಗಳನ್ನು ರಚಿಸಲು ನಿರ್ಧರಿಸಲಾಗಿದೆ ಎಂಬುದು ಕಂಪನಿಯ ಹಿರಿಯ ಅಧಿಕಾರಿಗಳ ಅಂಬೋಣ. "ಜಿಯೋ ಗ್ರಾಹಕರಿಗೆ ಡಿಜಿಟಲ್ ಲೈಫ್ ನೀಡಲು ಕಂಪನಿ ಉತ್ಸುಕವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಹಲವಾರು ಆ್ಯಪ್ ಗಳನ್ನು ನೀಡಲು ನಿರ್ಧರಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ. ಈಗಾಗಲೇ, ಥಾಣೆ-ಬೇಲಾಪುರದಲ್ಲಿರುವ ಧೀರೂಭಾಯ್ ಅಂಬಾನಿ ನಾಲೆಡ್ಜ್ ಸಿಟಿಯಲ್ಲಿ ಈ ಬಗ್ಗೆ ನಿರಂತರ ಪ್ರಯತ್ನಗಳು ಸಾಗಿರುವುದಾಗಿ ಅವರು ಹೇಳಿದ್ದಾರೆ.

ಮೂಲಗಳ ಪ್ರಕಾರ, ಮುಂಬರುವ ದಿನಗಳಲ್ಲಿ ನೇರವಾಗಿ ಜಿಯೊ ಆ್ಯಪ್ ಮೂಲಕ ಮೆಟ್ರೊ ಟಿಕೆಟ್ ಗಳನ್ನು ಬುಕ್ ಮಾಡುವ, ವೈಫೈ ಮೂಲಕ ಒಂದೇ ಬಾರಿಗೆ 30 ಎಲೆಕ್ಟ್ರಾನಿಕ್ ಪರಿಕರಗಳೊಂದಿಗೆ ಸಂಪರ್ಕ ಸಾಧಿಸುವ ವ್ಯವಸ್ಥೆ ಸೇರಿದಂತೆ ಮುಂತಾದ ಹಲವಾರು ವೈಶಿಷ್ಟ್ಯಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

English summary
Reliance company planning to deliver an unique app which could be used to control car. It also aims to provide the fecilities such as booking of metro tickets directly, connecting upto 30 devices via Wi-Fi network
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X