ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಪಾಲಿನ 100 ಕೋಟಿ ದಂಡ ವಸೂಲಿಯಲ್ಲೇನಿದು ಗೊಂದಲ?

ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಆದೇಶದಲ್ಲಿ ಸುಪ್ರೀಂ ಕೋರ್ಟ್ ದಿವಂಗತ ಜಯಲಲಿತಾರನ್ನು ಪೂರ್ತಿಯಾಗಿ ಹೊರಗಿಟ್ಟಿದೆ. ಅದರರ್ಥ ಏನೆಂದರೆ ಈಗ ಜಯಲಲಿತಾರಿಂದ ವಸೂಲಿ ಮಾಡಬೇಕಾಗಿದ್ದ 100 ಕೋಟಿ ರೂಪಾಯಿಯನ್ನು ವಸೂಲಿ ಮಾಡುವಂತಿಲ್ಲ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆಬ್ರವರಿ 3: ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಆದೇಶದಲ್ಲಿ ಸುಪ್ರೀಂ ಕೋರ್ಟ್ ದಿವಂಗತ ಜಯಲಲಿತಾರನ್ನು ಪೂರ್ತಿಯಾಗಿ ಹೊರಗಿಟ್ಟಿದೆ. ಜಯಲಲಿತಾ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾಗಲೇ ಈ ರೀತಿ ಅವರನ್ನು ಹೊರಗಿಡಲಾಗಿತ್ತು. ಅದರರ್ಥ ಏನೆಂದರೆ ಈಗ ಜಯಲಲಿತಾರಿಂದ ವಸೂಲಿ ಮಾಡಬೇಕಾಗಿದ್ದ 100 ಕೋಟಿ ರೂಪಾಯಿಯನ್ನು ವಸೂಲಿ ಮಾಡುವಂತಿಲ್ಲ.

ಈ ಸಂಬಂಧ ಕರ್ನಾಟಕ ಸುಪ್ರೀಂ ಕೋರ್ಟ್ ನಿಂದ ವಿವರಣೆ ಕೇಳುವ ಸಾಧ್ಯತೆ ಇದೆ. ಸದ್ಯ ಈ ಒಂದು ಅಂಶದಲ್ಲಿ ಸರಕಾರಕ್ಕೆ ಗೊಂದಲ ಇದೆ.[ಜಯಲಲಿತಾ ಸಾವಿನ ರಹಸ್ಯ, ಪಾಂಡಿಯನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ]

Can Rs 100 crore be recovered from Jayalalitha? Karnataka to see clarification in SC

ಸುಪ್ರಿಂ ಕೋರ್ಟ್ ನಿಯಮಗಳ ಪ್ರಕಾರ ವಿಚಾರಣೆ ವೇಳೆ ವ್ಯಕ್ತಿ ಸಾವನ್ನಪ್ಪಿದರೆ ಮಾತ್ರ ಅವರನ್ನು ಪ್ರಕರಣದಿಂದ ಹೊರಗಿಡಬೇಕು. ಆದರೆ ಇಲ್ಲಿ ಜಯಲಲಿತಾ ಸತ್ತಿದ್ದು ವಿಚಾರಣೆಗಳೆಲ್ಲಾ ಮುಗಿದ ಬಳಿಕ. ಜಯಾ ಸಾಯುವ ವೇಳೆಗೆ ವಿಚಾರಣೆ ಮುಗಿದು ಆದೇಶವನ್ನು ಕಾಯ್ದಿರಿಸಲಾಗಿತ್ತು ಅಷ್ಟೆ; ಹೀಗಾಗಿ ಸುಪ್ರೀಂ ಕೋರ್ಟಿನ ನಿಯಮಗಳಂತೆಯೇ ಜಯಲಲಿತಾರನ್ನು ಪ್ರಕರಣದಿಂದ ಹೊರಗಿಡಲು ಸಾಧ್ಯವಿಲ್ಲ.

ಮೂಲಗಳ ಪ್ರಕಾರ ಜಯಾಲಲಿತಾರ 100 ಕೋಟಿ ವಸೂಲಿ ಮಾಡಬೇಕಾ ಬೇಡ್ವಾ ಎನ್ನುವ ಅಂಶದಲ್ಲಿ ಸರಕಾರಕ್ಕೆ ಸ್ಪಷ್ಟೀಕರಣ ಬೇಕಾಗಿದೆ. ಇದಾದ ನಂತರ 100 ಕೋಟಿ ರೂಪಾಯಿ ವಸೂಲಿಯ ಹಣೆಬರಹ ನಿರ್ಧರವಾಗಲಿದೆ.[ಜಯಾ ಫೋಟೋ ತೆಗೆಸಿ, ಯಾವ ಯೋಜನೆಗೂ ಆಕೆ ಹೆಸರು ಬೇಡ]

ಸದ್ಯ ಕರ್ನಾಟಕ ದಂಡದ ಮೊತ್ತ ವಸೂಲಿ ಮಾಡಲು ತಂಡ ರಚಿಸುವ ಸಿದ್ಧತೆಯಲ್ಲಿದೆ. ಈಗಾಗಲೇ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಅಧಿಕೃತ ಆದೇಶವಷ್ಟೆ ಹೊರಬೀಳಬೇಕಾಗಿದೆ. ಸುಪ್ರೀ ಕೋರ್ಟ್ ಸ್ಪಷ್ಟೀಕರಣ ನೀಡಿದ ನಂತರವಷ್ಟೆ ಈ ಸಮಿತಿಯನ್ನು ರಚಿಸಲಾಗುತ್ತದೆ.

ಈಗಾಗಲೇ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಆರೋಪಿ ಸಂಖ್ಯೆ 2ರಿಂದ 4 ರವರೆಗೆ ಅಂದರೆ ಶಶಿಕಲಾ ನಟರಾಜನ್, ಇಳವರಸಿ ಮತ್ತು ಸುಧಾಕರನ್ ಅಪರಾಧಿಗಳು ಎಂದು ಹೇಳಿದೆ. ಜಯಲಲಿತಾ ಅಸುನೀಗಿದ್ದರಿಂದ ಅವರನ್ನು ಆದೇಶದಿಂದ ಹೊರಗಿಡಲಾಗಿತ್ತು.

English summary
The Supreme Court had said in its judgment in the DA case that the verdict against Jayalalitha stands abated. This order was passed since she was deceased at the time of the order being passed. Effectively this order would mean that the Rs 100 crore fine that was imposed on her by the trial court cannot be recovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X