ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ ಫಲಿತಾಂಶ: ಮೋದಿ, ಶಾ ಫುಲ್ ಖುಷ್

By Mahesh
|
Google Oneindia Kannada News

ಬೆಂಗಳೂರು, ಫೆ.17: ಕರ್ನಾಟಕ ಮೂರು ಕ್ಷೇತ್ರಗಳಲ್ಲದೆ ದೇಶದ ವಿವಿಧೆಡೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹರ್ಷ ವ್ಯಕ್ತಪಡಿಸಿದ್ದಾರೆ. ಎನ್ಡಿಎ ಸಶಕ್ತವಾಗಿ ಕಾರ್ಯ ನಿರ್ವಹಿಸುತ್ತಿದೆ. 'ಎಲ್ಲರ ಜೊತೆಗೆ ಎಲ್ಲರ ವಿಕಾಸ' ಸಾಧಿಸುವುದು ನಮ್ಮ ಉದ್ದೇಶ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ನಡೆದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬೀದರ್ ಬಿಟ್ಟು ದೇವದುರ್ಗ ಹಾಗೂ ಹೆಬ್ಬಾಳ ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಸಮಾಜವಾದಿ ಪಕ್ಷದ ಆಡಳಿತವಿರುವ ಉತ್ತರಪ್ರದೇಶದ ಮುಝಾಫರ್ ನಗರವನ್ನು ವಶಪಡಿಸಿಕೊಂಡಿರುವುದು ಹಾಗೂ ಬಿಹಾರದಲ್ಲಿ ಎನ್ಡಿಎ ಮಿತ್ರಪಕ್ಷದ ಗೆಲುವು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಭಾರಿ ಸಂತಸ ಉಂಟು ಮಾಡಿದೆ.

ಬಿಜೆಪಿ ಹಾಗೂ ಮಿತ್ರಪಕ್ಷಗಳು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ಭಾಗ ಹೀಗೆ ಎಲ್ಲೆಡೆ ತನ್ನ ಪ್ರಭುತ್ವ ಸಾಧಿಸಿರುವುದು ತುಂಬಾ ಸಂತಸಕರ ವಿಷಯ. ಜನತೆಗೆ ನಾವು ಆಭಾರಿಗಳಾಗಿದ್ದೇವೆ. ಪ್ರಗತಿಯತ್ತ ದೇಶವನ್ನು ಕೊಂಡೊಯ್ಯಲು ಈ ಗೆಲುವು ಸಹಕಾರಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಒಟ್ಟಾರೆ 8 ರಾಜ್ಯಗಳಲ್ಲಿ 12 ಸೀಟುಗಳಿಗಾಗಿ ಉಪಚುನಾವಣೆ ನಡೆದು ಫಲಿತಾಂಶ ಹೊರಬಂದಿದೆ. ಈಪೈಕಿ ಎನ್ಡಿಎ 7 ಸೀಟು ಗೆದ್ದುಕೊಂಡಿದೆ. ಫಲಿತಾಂಶದ ವಿವರಗಳು ಮುಂದಿವೆ...

ಪಂಜಾಬಿನ ಖದೂರು ಸಾಹಿಬ್ ಉಪಚುನಾವಣೆ

ಪಂಜಾಬಿನ ಖದೂರು ಸಾಹಿಬ್ ಉಪಚುನಾವಣೆ

ಪಂಜಾಬಿನ ಖದೂರು ಸಾಹಿಬ್ ಉಪಚುನಾವಣೆ ಗೆದ್ದ ಆಡಳಿತಾರೂಢ ಎಸ್ಎ ಡಿ. ರವೀಂದ್ರ ಸಿಂಗ್ ಬ್ರಹ್ಮಪುತ್ರ ಅವರು ಭೂಪಿಂದರ್ ಸಿಂಗ್ ಅವರನ್ನು 65,664 ಮತಗಳ ಅಂತರದಿಂದ ಸೋಲಿಸಿದರು. ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.

ಮಹಾರಾಷ್ಟ್ರದಲ್ಲಿ ಶಿವಸೇನೆ ಜಯಭೇರಿ

ಮಹಾರಾಷ್ಟ್ರದಲ್ಲಿ ಶಿವಸೇನೆ ಜಯಭೇರಿ

ಮಹಾರಾಷ್ಟ್ರದ ಪಲ್ಘರ್ ಅಸೆಂಬ್ಲಿ ಉಪಚುನಾವಣೆಯಲ್ಲಿ ಶಿವಸೇನಾ ಅಭ್ಯರ್ಥಿ ಅಮಿತ್ ಘೋಡಾ ಅವರು ಕಾಂಗ್ರೆಸ್ಸಿನ ರಾಜೇಂದ್ರ ಗಾವಿತ್ ಅವರನ್ನು 19,000 ಮತಗಳ ಅಂತರದಿಂದ ಸೋಲಿಸಿದರು. ಬಿಜೆಪಿ ಸ್ಪರ್ಧಿಸಿರಲಿಲ್ಲ. ಘೋಡಾ ಅವರ ತಂದೆ, ಸಚಿವ ಕೃಷ್ಣ ಎ ಘೋಡಾ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರವನ್ನು ಶಿವಸೇನಾ ಉಳಿಸಿಕೊಂಡಿದೆ.

ಬಿಹಾರ ಬೈ ಪೋಲ್ ನಲ್ಲಿ ಬಿಜೆಪಿ ಮಿತ್ರಪಕ್ಷಕ್ಕೆ ಗೆಲುವು

ಬಿಹಾರ ಬೈ ಪೋಲ್ ನಲ್ಲಿ ಬಿಜೆಪಿ ಮಿತ್ರಪಕ್ಷಕ್ಕೆ ಗೆಲುವು

ಬಿಹಾರ ಬೈ ಪೋಲ್ ನಲ್ಲಿ ಬಿಜೆಪಿ ಮಿತ್ರಪಕ್ಷ ಆರ್ ಎಲ್ ಎಸ್ ಪಿ ಅಭ್ಯರ್ಥಿ ಸುಧಾಂಶು ಶೇಖರ್ ಅವರು ಕಾಂಗ್ರೆಸ್ಸಿನ ಮೊಹಮ್ಮದ್ ಶಬೀರ್ ಅವರನ್ನು 18,650 ಮತಗಳ ಅಂತರದಿಂದ ಸೋಲಿಸಿದರು. ಹರ್ಲಾಖಿ ಅಸೆಂಬ್ಲಿ ಮರು ಚುನಾವಣೆ ಶಾಸಕ ಬಸಂತ್ ಕುಮಾರ್ ನಿಧನದಿಂದ ತೆರವಾಗಿದ್ದ ಕ್ಷೇತ್ರವನ್ನು ಆರ್ ಎಲ್ ಎಸ್ ಪಿ ಉಳಿಸಿಕೊಂಡಿದೆ. ಇದರಿಂದ 16ನೇ ಬಿಹಾರ ಅಸೆಂಬ್ಲಿಯಲ್ಲಿ 243 ಸ್ಥಾನಗಳಲ್ಲಿ ಎನ್ ಡಿಎ 58ಸ್ಥಾನಕ್ಕೇರಿದೆ.

ಎನ್ ಡಿಎ ಮಿತ್ರಪಕ್ಷಗಳನ್ನು ಕೊಂಡಾಡಿದ ಶಾ

ಎನ್ ಡಿಎ ಮಿತ್ರಪಕ್ಷಗಳನ್ನು ಕೊಂಡಾಡಿದ ಶಾ, ಎಲ್ಲಾ ಕಾರ್ಯಕರ್ತರಿಗೆ ವಂದನೆಗಳನ್ನು ಅರ್ಪಿಸಿದ್ದಾರೆ.

ಫಲಿತಾಂಶದ ನಂತರ ಮೋದಿ ಅವರ ಟ್ವೀಟ್

ವಿಧಾನಸಭೆ ಉಪ ಚುನಾವಣೆ ಫಲಿತಾಂಶದ ನಂತರ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು ಹೀಗೆ

ಕರ್ನಾಟಕದಲ್ಲಿ ಎರಡು ಕಡೆ ಅರಳಿದ ಕಮಲ

ಕರ್ನಾಟಕದಲ್ಲಿ ಎರಡು ಕಡೆ ಅರಳಿದ ಕಮಲ

ಬಿಜೆಪಿಯ ವೈಎ ನಾರಾಯಣಸ್ವಾಮಿ ಅವರು ಹೆಬ್ಬಾಳದಲ್ಲಿ ಕಾಂಗ್ರೆಸ್ಸಿನ ಸಿಕೆ ಅಬ್ದುಲ್ ರೆಹಮಾನ್ ಷರೀಫ್ ಅವರ ವಿರುದ್ಧ ಜಯ ಗಳಿಸಿದರು. ರಾಯಚೂರು ಜಿಲ್ಲೆ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಕೆ ಶಿವಣ್ಣ ಗೌಡ ನಾಯಕ್ ಅವರು ಕಾಂಗ್ರೆಸ್ ನ ಎ ರಾಜಶೇಖರ್ ನಾಯಕ್ ವಿರುದ್ಧ ಗೆಲುವು ದಾಖಲಿಸಿದರು. ಬೀದರ್ ನಲ್ಲಿ ಕಾಂಗ್ರೆಸ್ ನ ರಹೀಂ ಖಾನ್ ಗೆದ್ದರು.

ಉತ್ತರಪ್ರದೇಶದಲ್ಲಿ ಬಿಜೆಪಿಗೆ ಗೆಲುವು

ಉತ್ತರಪ್ರದೇಶದಲ್ಲಿ ಬಿಜೆಪಿಗೆ ಗೆಲುವು

ಬಿಜೆಪಿಯ ಕಪಿಲ್ ದೇವ್ ಅಗರವಾಲ್ ಅವರು ಗಲಭೆ ಪೀಡಿತ ಮುಝಾಫರ್ ನಗರದಲ್ಲಿ ಗೆಲುವು ದಾಖಲಿಸಿದ್ದಾರೆ. ಆಡಳಿತರೂಢ ಸಮಾಜವಾದಿ ಪಕ್ಷದ ಶಾಸಕ ಚಿತ್ತರಂಜನ್ ಸ್ವರೂಪ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನವನ್ನು ಎಸ್ ಪಿ ಕಳೆದುಕೊಂಡಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಜಯಭೇರಿ

ಮಧ್ಯಪ್ರದೇಶದಲ್ಲಿ ಬಿಜೆಪಿ ಜಯಭೇರಿ

ಬಿಜೆಪಿಯ ನಾರಾಯಣ್ ತ್ರಿಪಾಠಿ ಅವರು ಕಾಂಗ್ರೆಸ್ ಅಭ್ಯರ್ಥಿ ಮನೀಶ್ ಪಟೇಲ್ ವಿರುದ್ಧ ಮೈಹಾರ್ ಅಸೆಂಬ್ಲಿಯಲಿ ಗೆಲುವು ದಾಖಲಿಸಿದರು. ಈ ಹಿಂದೆ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಮನೀಶ್ ಅವರು ರಾಜೀನಾಮೆ ನೀಡಿ ಬಿಜೆಪಿ ಸೇರಿ ಈಗ ಪುನರ್ ಆಯ್ಕೆಯಾಗಿದ್ದಾರೆ.

English summary
Prime Minister Narendra Modi said the victory of BJP and its allies in bypolls in various states showed that people had reposed faith in the "politics of development".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X