ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2017: 'ಡಿಜಿಟಲ್ ವ್ಯವಹಾರ'ವೇ ಮೋದಿ ಸರಕಾರದ ಮಂತ್ರ

ಅರುಣ್ ಜೇಟ್ಲಿ ಮಂಡಿಸಿದ 2017ರ ಕೇಂದ್ರ ಬಜೆಟಿನಲ್ಲಿ ಡಿಜಿಟಲ್ ವ್ಯವಹಾರ ಉತ್ತೇಜನಕ್ಕೆ ಸರಕಾರ ಹಲವು ಕೊಡುಗೆಗಳನ್ನು ನೀಡಿದೆ.

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 1: ಅರುಣ್ ಜೇಟ್ಲಿ ಮಂಡಿಸಿದ 2017ರ ಕೇಂದ್ರ ಬಜೆಟಿನಲ್ಲಿ ಡಿಜಿಟಲ್ ವ್ಯವಹಾರ ಉತ್ತೇಜನಕ್ಕೆ ಸರಕಾರ ಹಲವು ಕೊಡುಗೆಗಳನ್ನು ನೀಡಿದೆ. ಅಪನಗದೀಕರಣದ ನಂತರ ಡಿಜಿಟಲ್ ವ್ಯವಹಾರಕ್ಕೆ ಕೇಂದ್ರ ಸರಕಾರ ಆಸಕ್ತಿ ವಹಿಸಿದ್ದು ಬಜೆಟಿನಲ್ಲಿಯೂ ಅವು ಬಿಂಬಿತವಾಗಿವೆ.[ಜೇಟ್ಲಿ ಬಜೆಟನ್ನು ಠುಸ್ ಪಟಾಕಿ ಎಂದ ರಾಹುಲ್ ಗಾಂಧಿ]

Budget: Governments action to promote 'Digital Transactions'

ಡಿಜಿಟಲ್ ವ್ಯವಹಾರದ ಬಗ್ಗೆ ಬಜೆಟಿನಲ್ಲಿ ಘೋಷಿಸಿದ ಪ್ರಮುಖ ಅಂಶಗಳು ಹೀಗಿವೆ,

*ಈ ಹಿಂದೆ ವಾರ್ಷಿಕ 2 ಕೋಟಿವರೆಗೆ ವ್ಯವಹಾರ ಮಾಡುವವರಿಗೆ ಶೇಕಡಾ 8ನ್ನು ಆದಾಯ ಎಂದು ಪರಿಗಣಿಸಲಾಗುತ್ತಿತ್ತು. ಇದೀಗ ನಗದು ರಹಿತ ವ್ಯವಹಾರ ಮಾಡಿದರೆ ಸರಕಾರ ಕೇವಲ ಶೇಕಡಾ 6ನ್ನು ಆದಾಯ ಎಂದು ಪರಿಗಣಿಸಲಿದೆ. ಇದರಿಂದ ಜನರಿಗೆ ತೆರಿಗೆ ಹಣ ಉಳಿತಾಯವಾಗಲಿದೆ.

*ಕೆಲವು ವಿಶೇಷ ಸಂದರ್ಭಗಳನ್ನು ಹೊರತು ಪಡಿಸಿ ಮೂರು ಲಕ್ಷಕ್ಕಿಂತ ಹೆಚ್ಚಿನ ನಗದು ಪಾವತಿಯನ್ನು ಸರಕಾರ ನಿಷೇಧಿಸಿದೆ.

*ಮಿನಿ POS ಕಾರ್ಡ್ ರೀಡರ್ ಗಳು, ಮೈಕ್ರೋ ಎಟಿಎಂ, ಫಿಂಗರ್ ಫ್ರಿಂಟ್ ರೀಡರ್, ಐರಿಸ್ (ಕಣ್ಣು) ಸ್ಯ್ಯಾನರ್ ಮತ್ತು ಅವುಗಳ ಇತರ ಉತ್ಪನ್ನಗಳ ಉತ್ಪಾದನೆ ಮೇಲಿನ ತೆರಿಗೆಯನ್ನು ಸರಕಾರ ರದ್ದು ಪಡಿಸಿದೆ.[ರೈಲ್ವೇ ಬಜೆಟ್ 2017: ಏನುಂಟು.. ಏನಿಲ್ಲ..]

*ದೇಶದಲ್ಲಿ ಈಗಾಗಲೇ 1.25 ಕೋಟಿ ಜನ ಭೀಮ್ (BHIM) ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭೀಮ್ ಆ್ಯಪ್ ಮೂಲಕ ವ್ಯವಹಾರ ಮಾಡುವ ಜನರಿಗೆ ಬೋನಸ್ ಹಾಗೂ ವ್ಯಾಪಾರಿಗಳಿಗೆ ಕ್ಯಾಶ್ ಬ್ಯಾಕ್ ಕೊಡುಗೆಗಳನ್ನು ಸರಕಾರ ನೀಡಲಿದೆ.

*'ಆಧಾರ್ ಪೇ' ಎಂಬ ಆಧಾರ್ ಕಾರ್ಡ್ ಆಧಾರಿತ ವ್ಯಾಪಾರಿಗಳಿಗೆ ಅನುಕೂಲವಾಗುವ ಪಾವತಿ ವ್ಯವಸ್ಥೆಯನ್ನು ಸರಕಾರ ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

*ಕಾರ್ಡು, ಭೀಮ್ ಆ್ಯಪ್, ಆಧಾರ್ ಪೇ ಮುಂತಾದ ವ್ಯವಹಾರಗಳ ಮೂಲಕ 2017-18ರಲ್ಲಿ ಒಟ್ಟು 2,500 ಕೋಟಿ ನಗದು ರಹಿತ ವ್ಯವಹಾರಗಳನ್ನು ಮಾಡುವ ಗುರಿಯನ್ನು ಸರಕಾರ ಹಾಕಿಕೊಳ್ಳಲಾಗಿದೆ.

*ಒಂದು ಹಂತಕ್ಕಿಂತ ನಂತರದ ಸರಕಾರದ ಬಿಲ್ ಪಾವತಿಗಳನ್ನು ಡಿಜಿಟಲ್ ಮೂಲಕವೇ ಮಾಡುವುದನ್ನು ಕಡ್ಡಾಯಗೊಳಿಸಲು ಸರಕಾರ ನಿರ್ಧರಿಸಿದೆ.

ಹೀಗೆ ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸಲು ಸರಕಾರ ಹಲವು ಕ್ರಮ ಕೈಗೊಂಡಿದೆ.

(ಚಿತ್ರ ಕೃಪೆ: ಶಟರ್ ಸ್ಟಾಕ್)

English summary
To promote digital payment in the country, government anounced new schemes in its 2017-18 budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X