ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಯಾಟಲೈಟ್ ಫೋನ್ ಸೇವೆ ಆರಂಭಿಸಿದ ಬಿಎಸ್ಎನ್ಎಲ್

ಇದೇ ಮೊದಲ ಬಾರಿಗೆ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸ್ಯಾಟಲೈಟ್‌ ಫೋನ್‌ ಸೇವೆ ಆರಂಭಿಸಿದೆ. ಶೇಷವೆಂದರೆ ಈ ಬಾರಿ ಸ್ಟಾಟಲೈಟ್ ಫೋನ್ ಸೇವೆಗೆ ಬೇಕಾದ ಭೂ ವಿನಿಮಯ ಕೇಂದ್ರವನ್ನು ಪುಣೆಯಲ್ಲಿ ಆರಂಭಿಸಲಾಗಿದೆ.

By Sachhidananda Acharya
|
Google Oneindia Kannada News

ನವದೆಹಲಿ, ಮೇ 25: ಇದೇ ಮೊದಲ ಬಾರಿಗೆ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸ್ಯಾಟಲೈಟ್‌ ಫೋನ್‌ ಸೇವೆ ಆರಂಭಿಸಿದೆ.
ಬುಧವಾರದಿಂದ ಈ ಸೇವೆ ಆರಂಭವಾಗಿದ್ದು ಅಂತರರಾಷ್ಟ್ರೀಯ ಮೊಬೈಲ್‌ ಉಪಗ್ರಹ ಸಂಘಟನೆ (ಇನ್‌ಮಾರ್‌ಸ್ಯಾಟ್‌) ಮೂಲಕ ಈ ಸೇವೆಯನ್ನು ನೀಡಲಾಗುತ್ತಿದೆ.

ವಿಶೇಷವೆಂದರೆ ಈ ಬಾರಿ ಸ್ಟಾಟಲೈಟ್ ಫೋನ್ ಸೇವೆಗೆ ಬೇಕಾದ ಭೂ ವಿನಿಮಯ ಕೇಂದ್ರವನ್ನು ಪುಣೆಯಲ್ಲಿ ಆರಂಭಿಸಲಾಗಿದೆ. ಈ ಹಿಂದೆ ಈ ವಿನಿಮಯ ಕೇಂದ್ರಗಳು ವಿದೇಶಗಳಲ್ಲಿ ಮಾತ್ರವಿತ್ತು. ಇದರಿಂದ ಗೌಪ್ಯ ಮಾಹಿತಿಗಳು ಸೋರಿಕೆಯಾಗುವ ಅಪಾಯವಿತ್ತು.
ಇದೀಗ ಗುಪ್ತಚರ ಇಲಾಖೆಗಳ ಎಚ್ಚರಿಕೆಯೂ ಸೇರಿದಂತೆ ಬಹಳ ಕಾಲದ ಬೇಡಿಕೆ ಇಡೇರಿದೆ. ದೇಶದೊಳಗೆ ವಿನಿಮಯ ಕೇಂದ್ರ ಸ್ಥಾಪನೆಯಾಗಿದೆ.

 BSNL starts satellite phone service

ಹಿಂದೆಯೂ ಇತ್ತು ಸ್ಯಾಟಲೈಟ್ ಫೋನ್

ಭಾರತದಲ್ಲಿ ಸ್ಯಾಟಲೈಟ್ ಫೋನ್ ಹೊಸದೇನೂ ಅಲ್ಲ. ಈ ಹಿಂದೆ ಟಾಟಾ ಕಮ್ಯುನಿಕೇಷನ್ಸ್‌ ಲಿಮಿಟೆಡ್ (ಟಿಸಿಎಲ್‌) ಈ ಸ್ಯಾಟಲೈಟ್ ಫೋನ್ ಸೇವೆ ಒದಗಿಸುತ್ತಿತ್ತು. ಆದರೆ ಇದರ ಹೊಣೆಯನ್ನು ಬಿಎಸ್ಎನ್ಎಲ್ ಹೊತ್ತುಕೊಂಡಿರುವುದರಿಂದ ಜೂನ್ 30ಕ್ಕೆ ಟಾಟಾ ಕಂಪೆನಿ ತನ್ನ ಸ್ಯಾಟಲೈಟ್ ಪೋನ್ ಸೇವೆಗೆ ಅಂತ್ಯ ಹಾಡಲಿದೆ.

ಸದ್ಯಕ್ಕೆ ಜನರಿಗಿಲ್ಲ ಸೇವೆ

ಸಾಮಾನ್ಯ ಮೊಬೈಲ್ ರೀತಿಯಲ್ಲೇ ಇದೂ ಕಾರ್ಯ ನಿರ್ವಹಿಸಲಿದೆ. ಧ್ವನಿ ಸಂಭಾಷಣೆ ಮತ್ತು ಎಸ್ಎಂಎಸ್ ಕಳುಹಿಸಲು ಮಾತ್ರ ಇದರಲ್ಲಿ ಅವಕಾಶವಿದೆ. ಆರಂಭದಲ್ಲಿ ಈ ಸ್ಯಾಟಲೈಟ್ ಫೋನ್ ಸೇವೆ ಜನರಿಗೆ ನೀಡುತ್ತಿಲ್ಲ.

ಸೇನೆ, ಪೊಲೀಸ್, ಸರಕಾರದ ಸಂಸ್ಥೆಗಳು, ವಿಕೋಪ ಪರಿಹಾರ ಸಂಸ್ಥೆಗಳು, ರೈಲ್ವೆ, ಹಡಗುಗಳಿಗೆ ಈ ಸೇವೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಜನರಿಗೆ ಈ ಸೇವೆ ನೀಡಲಾಗುತ್ತದೆ.

English summary
State-owned BSNL on Wednesday started satellite phone service through Inmarsat. This service will be initially offered to government agencies and later opened for citizens in a phased manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X