ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನನಗೆ ಕಿರುಕುಳ ನೀಡುತ್ತಿದ್ದಾರೆ' ತೇಜ್ ಬಹದ್ದೂರ್ ಮತ್ತೊಂದು ವಿಡಿಯೋ

ಬಿಎಸ್ಎಫ್ ಜವಾನ ತೇಜ್ ಬಹದ್ದೂರ್ ಯಾದವ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. 5 ದಿನಗಳ ಹಿಂದೆ ಈ ವಿಡಿಯೋ ಬಿಡುಗಡೆ ಮಾಡಿದ್ದು 'ಭ್ರಷ್ಟಾಚಾರ ಬಯಲಿಗೆಳೆದ ನಂತರ ನನಗೆ ಹಿಂಸೆ ನೀಡುತ್ತಿದ್ದಾರೆ' ಎಂದು ಆಪಾದಿಸಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 3: ಬಿಎಸ್ಎಫ್ ಜವಾನ ತೇಜ್ ಬಹದ್ದೂರ್ ಯಾದವ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. 5 ದಿನಗಳ ಹಿಂದೆ ಈ ವಿಡಿಯೋ ಬಿಡುಗಡೆ ಮಾಡಿದ್ದು 'ಭ್ರಷ್ಟಾಚಾರ ಬಯಲಿಗೆಳೆದ ನಂತರ ನನಗೆ ಹಿಂಸೆ ನೀಡುತ್ತಿದ್ದಾರೆ' ಎಂದು ಆಪಾದಿಸಿದ್ದಾರೆ.

ಸದ್ಯ ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬಳಿ ನೆರವು ನೀಡುವಂತೆ ಅವರು ಕೇಳಿಕೊಂಡಿದ್ದಾರೆ. ಹೈಕೋರ್ಟಿನ ನಿರ್ದೇಶನದಂತೆ ಪತ್ನಿ ಜಮ್ಮುವಿನ ಅತಿಥಿ ಗೃಹದಲ್ಲಿ ತೇಜ್ ಬಹದ್ದೂರ್ ಯಾದವ್ ಭೇಟಿ ಮಾಡಿದ ವೇಳೆ ಈ ವಿಡಿಯೋ ತೆಗೆಯಲಾಗಿದೆ. ಫೆಬ್ರವರಿ ಎರಡನೇ ವಾರದಲ್ಲಿ ಈ ಭೇಟಿ ನಡೆದಿತ್ತು.[ನನ್ನ ಗಂಡನನ್ನು ಹುಡುಕಿಕೊಡಿ.. ತೇಜ್ ಬಹದ್ದೂರ್ ಪತ್ನಿಯ ಅಳಲು]

BSF jawan releases another video, indiscipline says Home Ministry

ವೀಡಿಯೋದಲ್ಲಿ ಸರಣಿ ಆರೋಪಗಳನ್ನು ಹೊರಿಸಿರುವ ತೇಜ್ ಬಹದ್ದೂರ್, "ನನ್ನ ಫೋನನ್ನು ಕಿತ್ತುಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನನಗಿರುವ ಪಾಕಿಸ್ತಾನ ಗೆಳೆಯರ ಮೇಲೆ ಕಣ್ಣಿಡಲಾಗಿದೆ," ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಪಾಕಿಸ್ತಾನ ಗೆಳೆಯರ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಇಷ್ಟಲ್ಲದೆ ನನ್ನ ಸ್ವಯಂ ನಿವೃತ್ತಿ ಅರ್ಜಿಯನ್ನೂ ರದ್ದು ಮಾಡಿದ್ದಾರೆ. ದಯವಿಟ್ಟು ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ. ನಾನು ಹೇಳುತ್ತಿರುವುದೆಲ್ಲಾ ಸತ್ಯ ಎಂದು ಹೇಳಿದ್ದಾರೆ.[ಯೋಧ ಯಾದವ್ ನನ್ನು ಬಂಧಿಸಿಲ್ಲ: ಹೈಕೋರ್ಟ್ ಗೆ ಕೇಂದ್ರದ ಸ್ಪಷ್ಟನೆ]

ಆದರೆ ಇದನ್ನು ಗೃಹ ಇಲಾಖೆ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. 'ಅವರ ಫೋನನ್ನು ಕಿತ್ತೊಕೊಂಡಿಲ್ಲ, ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ ಅಷ್ಟೆ. ಬಹುಶಃ ಅವರ ಹೆಂಡತಿ ಭೇಟಿ ವೇಳೆ ಹೊಸ ಫೋನು ಕೊಟ್ಟಿರಲೂಬಹುದು. ವಿಚಾರಣೆ ಜಾರಿಯಲ್ಲಿರುವುದರಿಂದ ಅವರ ಸ್ವಯಂ ನಿವೃತ್ತಿ ಅರ್ಜಿಯನ್ನು ಕ್ಯಾನ್ಸಲ್ ಮಾಡಲಾಗಿದೆ ಅಷ್ಟೆ,' ಎಂದು ಹೇಳಿದೆ.

ಇದೀಗ ಗೃಹ ಇಲಾಖೆ ಅಧಿಕಾರಿಗಳು ವಿಡಿಯೋ ಮಾಡಿ ವೈರಲ್ ಮಾಡುತ್ತಿರುವುದರ ಹಿಂದೆ ವೃತ್ತಿಪರರ ಕೈವಾಡ ಇರಬಹುದು ಎಂದು ಅಂದಾಜಿಸಿದ್ದು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ವಿಡಿಯೋ ಎಡಿಟ್ ಮಾಡಿ ಕ್ಯಾಪ್ಷನ್ ಹಾಕಿ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಇದರ ಹಿಂದೆ ವೃತ್ತಿಪರರ ಕೈವಾಡ ಇರಬಹುದು ಎಂದು ನಾವು ನಂಬಿದ್ದೇವೆ. ಹೀಗಾಗಿ ಇದರ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

English summary
BSF jawan Tej Bahadur Yadav is back with another video. After complaining about the poor quality of food in a previous video that went viral, the jawan has now appealed to the Prime Minister for support.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X