ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಮೋದಿ ಪರ, ವಿರೋಧ ಚರ್ಚೆಯಲ್ಲಿ ನಿಂತು ಹೋದ ಮದುವೆ!

By Balaraj
|
Google Oneindia Kannada News

ಕಾನ್ಪುರ (ಉ.ಪ್ರ), ಜುಲೈ 8: ಇದು ವರದಕ್ಷಿಣೆ ವಿಚಾರದಲ್ಲಿ ಅಥವಾ ಇನ್ಯಾವುದೋ ಸಮಸ್ಯೆಯಿಂದ ನಿಂತು ಹೋದ ಮದುವೆಯಲ್ಲ. ಈ ಮದುವೆ ನಿಂತು ಹೋಗಲು ಕಾರಣ ಪ್ರಧಾನಿ ಮೋದಿ ಪರ, ವಿರೋಧ ಚರ್ಚೆ.

ಕಾನ್ಪುರದ ಜೋಡಿಯೊಂದು ಸದ್ಯದಲ್ಲೇ ಹಸಮಣೆ ಏರಲಿತ್ತು. ವಧು ಉತ್ತರಪ್ರದೇಶದ ಸರಕಾರದ ಉದ್ಯೋಗಿಯಾಗಿದ್ದರೆ, ವರ ಉದ್ಯಮಿ. ಮದುವೆಗೆ ದಿನ ನಿಗದಿಯಾಗಿದ್ದರಿಂದ ಮದುವೆಗೆ ತಗಲುವ ಖರ್ಚಿನ ಬಗ್ಗೆ ಚರ್ಚಿಸಲು ಇಬ್ಬರೂ ದೇವಾಲಯವೊಂದಕ್ಕೆ ಬಂದಿದ್ದರು.

ಮದುವೆ ಯಾವ ರೀತಿ ನಡೆಸಬೇಕು, ಖರ್ಚನ್ನು ಯಾವ ರೀತಿ ಹಂಚಿಕೊಳ್ಳಬೇಕು ಎನ್ನುವ ಮಾತುಕತೆಯ ನಡುವೆ, ದೇಶದ ಸದ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಚರ್ಚೆ ಆರಂಭವಾಯಿತು.

Bride and groom fight over PM Modi, call off their marriage

ದೇಶದ ಇಂದಿನ ಆರ್ಥಿಕ ಬೆಳವಣಿಗೆ ನಿಧಾನವಾಗಿ ಸಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರಣ ಎಂದು ವಧು ಹೇಳಿದ್ದು ವರನಿಗೆ ಹಿಡಿಸಲಿಲ್ಲ. ಯಾಕೆಂದರೆ ಆತ ಮೋದಿ ಅಭಿಮಾನಿ.

ಮೋದಿ ಒಬ್ಬ ಸಮರ್ಥ ಪ್ರಧಾನಿ ಎನ್ನುತ್ತಾ ವರ, ಆರ್ಥಿಕ ಸ್ಥಿತಿ ಸುಧಾರಣೆಗೆ ಮೋದಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಲಾರಂಭಿಸಿದ. ಈ ವಿಚಾರದಲ್ಲಿ ವಧು ಮತ್ತು ವರನ ನಡುವೆ ಸುದೀರ್ಘ ಚರ್ಚೆ ನಡೆದು, ಇಬ್ಬರೂ ತಮ್ಮ ತಮ್ಮ ವಾದದಿಂದ ಹಿಂದಕ್ಕೆ ಸರಿಯಲಿಲ್ಲ.

ಕೊನೆಗೆ, ನಮ್ಮಿಬ್ಬರಲ್ಲಿ ಈಗಲೇ ಹೊಂದಾಣಿಕೆಯಿಲ್ಲ, ಇನ್ನು ಮದುವೆಯಾದರೆ ಇನ್ನು ಹೇಗೋ ಎಂದು ಇಬ್ಬರೂ ಮದುವೆಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ಎರಡೂ ಕುಟುಂಬದವರು ಒಪ್ಪಿಗೆಯನ್ನೂ ಸೂಚಿಸಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಒಬ್ಬ 'ಮನೆಮುರುಕ' ಎಂದು ಲೇವಡಿ ಮಾಡುತ್ತಿದ್ದ ಕಾಂಗ್ರೆಸ್ಸಿನವರು, ಈ ಘಟನೆ ನಂತರ ಮೋದಿಯನ್ನು ' ಮದುವೆ ಮುರುಕ' ಎನ್ನುತ್ತಾರಾ ಏನೋ?

English summary
Bride and groom fight over Prime Minister Narendra Modi, call off their marriage. Bride and groom's pro and against heated discussion on Modi is responsible for county's poor economic condition ended with both prospective bride and groom decided to part ways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X