ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ತನ್ಯಪಾನ ನನ್ನ ಧರ್ಮಕ್ಕೆ ವಿರುದ್ಧ ಅಂದ ಕೇರಳಿಗ

ಕನಿಷ್ಠ ಐದು ಬಾರಿ ಪ್ರಾರ್ಥನೆ ಪೂರ್ಣ ಆಗುವವರೆಗೆ ಆ ಮಗುವಿಗೆ ಮೊಲೆಯೂಡಿಸಬಾರದು ಎಂದು ಆತನಿಗೆ ಧರ್ಮಗುರುಗಳೊಬ್ಬರು ಹೇಳಿದ್ದರಂತೆ

By ವಿಕಾಸ್ ನಂಜಪ್ಪ
|
Google Oneindia Kannada News

ಕೋಳಿಕ್ಕೋಡ್, ನವೆಂಬರ್ 4: ಧಾರ್ಮಿಕ ಕಾರಣಗಳನ್ನು ಮುಂದು ಮಾಡಿ, ವ್ಯಕ್ತಿಯೊಬ್ಬ ತನ್ನ ಹೆಂಡತಿ ಮಗುವಿಗೆ ಹಾಲು ಕುಡಿಸುವುದನ್ನು ತಡೆದ ಘಟನೆ ಕೇರಳದ ಕೋಳಿಕ್ಕೋಡ್ ನಲ್ಲಿ ನಡೆದಿದೆ. ಇದು ನಂಬುವುದಕ್ಕೆ ಕಷ್ಟವಾದ ಸಂಗತಿಯಾದರೂ ನಿಜ. ಆತನಿಗೆ ಇದು ಮೊದಲನೇ ಮಗು. ಆಸ್ಪತ್ರೆಯ ವೈದ್ಯರೂ ಎಷ್ಟೇ ಹೇಳಿದರೂ ಕೇಳದ ಆತ, ಏನೂ ಆಗುವುದಿಲ್ಲ ಎಂದು ವಾದ ಮಾಡಿದ್ದಾನೆ.

ಆ ವ್ಯಕ್ತಿಯ ಹೆಸರು ಅಬೂಬಕರ್. ಆತನಿಗೆ ಧರ್ಮಗುರುಗಳೊಬ್ಬರು ಹೇಳಿದ್ದರಂತೆ, ಮೆಕ್ಕಾದ ನೀರು ಹಾಗೂ ಜೇನುತುಪ್ಪವನ್ನೇ ಮಗುವಿಗೆ ಕೊಡಬೇಕು ಅಂತ. ಇದು ಹಾಗಲ್ಲಪ್ಪ ಎಂದು ಆಸ್ಪತ್ರೆಯವರು ಆತನನ್ನು ಓಲೈಸುವುದಕ್ಕೆ ಯತ್ನಿಸಿದ್ದಾರೆ, ತಿಳಿ ಹೇಳಿದ್ದಾರೆ, ಕೊನೆಗೆ ಹೆದರಿಸಿಯೂ ನೋಡಿದ್ದಾರೆ. ಆದರೆ ಅದ್ಯಾವುದಕ್ಕೂ ಮಣಿಯದ ಅಬೂಬಕರ್, ಬಲವಂತವಾಗಿ ಆಸ್ಪತ್ರೆಯಿಂದ ಹೆಂಡತಿಯನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಹೋಗಿದ್ದಾನೆ.[ಎದೆಹಾಲು ಕುಡಿಸುತ್ತಿದ್ದ ಅಮ್ಮನ ಸ್ಲಟ್ ಎಂದ ದಂಪತಿ]

Breastfeeding

ಅದಕ್ಕೂ ಮುನ್ನ, ಹೊಕ್ಕುಳ ಬಳ್ಳಿ ನಾಳದ ಮೂಲಕ ಮಗುವಿಗೆ ಅಗತ್ಯ ಪೋಷಕಾಂಶ ದೊರೆಯುತ್ತದೆ ಎಂದು ಅಬೂಬಕರ್ ವೈದ್ಯರ ಜೊತೆಗೆ ವಾದ ಕೂಡ ಮಾಡಿದ್ದಾನೆ. ಆತನ ವಾದದಿಂದ ಆಸ್ಪತ್ರೆ ಅಧಿಕಾರಿಗಳು ಅಸಮಾಧಾನಗೊಂಡು, ಕೋಳಿಕೋಡ್ ನ ಕೋ ಆಪರೇಟಿವ್ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.[ಎದೆಹಾಲು ಮಗುವಿಗೆ ಮಾತ್ರವಲ್ಲ ಅಥ್ಲೀಟ್ ಗಳಿಗೂ ಲಭ್ಯ!]

ಅತ ಆ ಮಗವಿನ ಹಕ್ಕನ್ನು ಕಸಿದುಕೊಂಡಿದ್ದಾನೆ. ಆ ತಾಯಿಯು ಮಗುವಿಗೆ ಹಾಲು ಕುಡಿಸುವುದಕ್ಕೆ ಅವಕಾಶ ಮಾಡಿಕೊಡುವಂತೆ ಅತನನ್ನು ಪದೇಪದೇ ಕೇಳಿಕೊಂಡೆವು. ಆದರೂ ಒಪ್ಪಲಿಲ್ಲ. ಆತನ ಮನವೊಲಿಸುವ ನಮ್ಮ ಯಾವ ಪ್ರಯತ್ನವೂ ಫಲಿಸಲಿಲ್ಲ ಎಂದು ಅಸ್ಪತ್ರೆಯ ನರ್ಸ್ ವೊಬ್ಬರು ಹೇಳಿದ್ದಾರೆ. ಕನಿಷ್ಠ ಐದು ಬಾರಿ ಪ್ರಾರ್ಥನೆ ಪೂರ್ಣ ಆಗುವವರೆಗೆ ಆ ಮಗುವಿಗೆ ಮೊಲೆಯೂಡಿಸಬಾರದು ಎಂದು ಆತನಿಗೆ ಧರ್ಮಗುರುಗಳೊಬ್ಬರು ಹೇಳಿದ್ದರಂತೆ.

English summary
Citing religious reasons a man from Kerala prevented his wife from breastfeeding her new born baby. It may sound hard to believe that this person from Kozhikode in Kerala defied pleas from doctors and said he had prevented his wife from breastfeeding their first born and nothing happened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X