ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಯಶಸ್ವಿ ಉಡಾವಣೆ

By Kiran B Hegde
|
Google Oneindia Kannada News

ಬೆಂಗಳೂರು, ಫೆ. 14: ಭಾರತ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ದಾಪುಗಾಲಿಡುತ್ತಿದೆ. ಶನಿವಾರ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತೀಯ ನೌಕಾದಳದ ಐಎನ್ಎಸ್ ಕೋಲ್ಕತ್ತಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ಕ್ಷಿಪಣಿ ಉಡಾವಣೆಯು ಎಲ್ಲ ನಿರೀಕ್ಷೆಗಳನ್ನು ಮುಟ್ಟಿದೆ ಎಂದು ಬ್ರಹ್ಮೋದ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಭಾರತೀಯ ನೌಕಾದಳಕ್ಕೆ ಭೀಮಬಲ ಒದಗಿಸಿರುವ ಐಎನ್ಎಸ್ ಕೋಲ್ಕತ್ತಾ ಕಾರ್ಯಾರಂಭಿಸಿದ್ದು 20145ರ ಆಗಸ್ಟ್ ತಿಂಗಳಿನಲ್ಲಿ. ಇಂತಹ ಇನ್ನೂ ಎರಡು ಹಡಗುಗಳು ನೌಕಾಪಡೆಯಲ್ಲಿವೆ.

ಎಲ್ಲ ಮೂರೂ ಹಡಗುಗಳಲ್ಲಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಉಡಾವಣೆ ವ್ಯವಸ್ಥೆ ಯೂನಿವರ್ಸಲ್ ವರ್ಟಿಕಲ್ ಲಾಂಚರ್ ಅಳವಡಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

missile

ಯೂನಿವರ್ಸಲ್ ವರ್ಟಿಕಲ್ ಲಾಂಚರ್ ಒಂದು ಅಸಾಧಾರಣ ವ್ಯವಸ್ಥೆಯಾಗಿದೆ. ಇದನ್ನು ಬ್ರಹ್ಮೋಸ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದೆ. ಇಲ್ಲಿಂದ ಉಡಾವಣೆಗೊಳ್ಳುವ ಕ್ಷಿಪಣಿಯು ಲಂಬವಾಗಿ ಯಾವುದೇ ದಿಕ್ಕಿನಲ್ಲಿ ಸಾಗಿ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿವೆ ಎಂದು ತಿಳಿಸಿದರು.

ಈ ಸಾಧನೆಗೆ ಬ್ರಹ್ಮೋಸ್ ಮುಖ್ಯಸ್ಥ ಸುಧೀರ್ ಮಿಶ್ರಾ ಅವರು ಬ್ರಹ್ಮೋಸ್ ತಂಡ ಹಾಗೂ ಭಾರತೀಯ ನೌಕಾದಳವನ್ನು ಅಭಿನಂದಿಸಿದ್ದಾರೆ.

ಆಕಾಶದಲ್ಲಿಯೇ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ ಮಾಡುವ ಮಾದರಿಯನ್ನು ಮುಂದಿನ ತಿಂಗಳು ಸುಖೋಯಿ ಮೂಲಕ ಉಡಾವಣೆ ಮಾಡಲಾಗುವುದು. ಅಲ್ಲದೆ, ಭಾರತವು ತನ್ನ ಆಕಾಶದಲ್ಲಿಯೇ ಉಡಾವಣೆ ಮಾಡಬಹುದಾದ ಸಬ್‌ಸಾನಿಕ್ ಕ್ರೂಸ್ ಕ್ಷಿಪಣಿ ವಾಯು ಮಾದರಿ ನಿರ್ಭಯ್ ಅನ್ನು ಉಡಾವಣೆ ಮಾಡಲು ತಯಾರಿ ನಡೆಸಿದೆ.

English summary
India on Saturday successfully test-fired a BrahMos supersonic cruise missile from Indian Navy's latest destroyer INS Kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X