ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ನಲ್ಲಿ ಬೆಡಗಿ ನರ್ಗೀಸ್ ಜಾಹೀರಾತಿನ 'ಜಂಗ್'

By Mahesh
|
Google Oneindia Kannada News

ಬೆಂಗಳೂರು, ಡಿ. 21: ಬಾಲಿವುಡ್ ಬೆಡಗಿ ನರ್ಗೀಸ್ ಫಕ್ರಿ ಇತ್ತೀಚೆಗೆ ಪಾಕಿಸ್ತಾನ ಪತ್ರಿಕೆಯ ಮುಖಪುಟದಲ್ಲಿ ಮಲಗಿದ್ದೇ ತಡ ಸಾಮಾಜಿಕ ಜಾಲ ತಾಣಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಜಂಗ್ ಪತ್ರಿಕೆಯ ಮುಖಪುಟದಲ್ಲಿ ಮಲಗಿರುವ ನರ್ಗೀಸ್ ಜಾಹೀರಾತು ಈಗ ವಿವಾದಕ್ಕೆ ಕಾರಣವಾಗಿದೆ.

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಈ ಜಾಹೀರಾತಿನ ವಿರುದ್ಧ ಪತ್ರಕರ್ತರು ಸೇರಿದಂತೆ ಹಲವಾರು ಮಂದಿ ಕಿಡಿಕಾರಿದ್ದಾರೆ. ಪಾಕಿಸ್ತಾನದ ತನಿಖಾ ವರದಿಗಾರ ಅನ್ಸರ್ ಅಬ್ಬಾಸಿ ಅವರು ಮೊಟ್ಟ ಮೊದಲಿಗೆ ಈ ಜಾಹೀರಾತನ್ನು ಟ್ವೀಟ್ ಮಾಡಿ ಪ್ರಚಾರಕ್ಕಾಗಿ ಈ ರೀತಿ ಅಶ್ಲೀಲ ರೀತಿಯಲ್ಲಿ ಉರ್ದು ಪತ್ರಿಕೆಯಲ್ಲಿ ಕಾಣಿಸಿಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.[ವಿಡಿಯೋ : ನರ್ಗೀಸ್ ಧರಿಸಿದ್ದ ಗೌನ್ ಜಾರಿದ ಕ್ಷಣ]

ಅಸಲಿಗೆ ನರ್ಗೀಸ್ ಫಕ್ರಿ ಅವರು 3ಜಿ ತಂತಜ್ಞಾನ ಉಳ್ಳ ಮೊಬೈಲ್ ಫೋನ್ ಗೋಸ್ಕರ ಜಾಹೀರಾತು ನೀಡಿದ್ದರು.ಜಾಹೀರಾತಿನಲ್ಲಿ ಕೆಂಪು ವಸ್ತ್ರ ಧರಿಸಿರುವ ನರ್ಗೀಸ್ ಅವರು ಕೈಯಲ್ಲಿ ಫೋನ್ ಹಿಡಿದುಕೊಂಡು ಪತ್ರಿಕೆಯ ಮಧ್ಯ ಭಾಗದಲ್ಲಿ ಮಲಗಿದಂತೆ ಕಾಣಿಸಿಕೊಂಡಿದ್ದಾರೆ.[ನಾನು ಕನ್ಯತ್ವ ಕಳೆದುಕೊಂಡಿಲ್ಲ ಎಂದ ನಟಿ]

ಆದರೆ, ನರ್ಗೀಸ್ ಫಕ್ರಿ ಮೈಮಾಟಕ್ಕೂ ಈ ಕಡಿಮೆ ಬೆಲೆಯ ಮೊಬೈಲ್ ಫೋನಿಗೂ ಯಾವ ಸಂಬಂಧವಿದೆ. ಪತ್ರಿಕೆಯನ್ನು ಅಸಭ್ಯಗೊಳಿಸಬೇಡಿ ಎಂಬ ಕೂಗು ಕೇಳಿ ಬಂದಿದೆ. ಪ್ಲೇ ಬಾಯ್, ಮ್ಯಾಗಜೀನ್ ರೀತಿ ಉರ್ದು ಪತ್ರಿಕೆಗಳು ಆಗುವುದು ಬೇಡ ಎಂದಿದ್ದಾರೆ.

ಜಂಗ್ ಪತ್ರಿಕೆಯ ಮುಖಪುಟದಲ್ಲಿ ಮಲಗಿರುವ ನರ್ಗೀಸ್

ಜಂಗ್ ಪತ್ರಿಕೆಯ ಮುಖಪುಟದಲ್ಲಿ ಮಲಗಿರುವ ನರ್ಗೀಸ್

ಪಾಕಿಸ್ತಾನದ ಜಂಗ್ ಪತ್ರಿಕೆಯ ಮುಖಪುಟದಲ್ಲಿ ಮಲಗಿರುವ ನರ್ಗೀಸ್ ಜಾಹೀರಾತು ಈಗ ವಿವಾದಕ್ಕೆ ಕಾರಣವಾಗಿದೆ.

ಜಾಹೀರಾತಿನ ವಿರುದ್ಧ ಪತ್ರಕರ್ತರು

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಈ ಜಾಹೀರಾತಿನ ವಿರುದ್ಧ ಪತ್ರಕರ್ತರು ಸೇರಿದಂತೆ ಹಲವಾರು ಮಂದಿ ಕಿಡಿಕಾರಿದ್ದಾರೆ.

ಪಾಕಿಸ್ತಾನದ ತನಿಖಾ ವರದಿಗಾರ ಅನ್ಸರ್

ಪಾಕಿಸ್ತಾನದ ತನಿಖಾ ವರದಿಗಾರ ಅನ್ಸರ್ ಅಬ್ಬಾಸಿ ಅವರು ಮೊಟ್ಟ ಮೊದಲಿಗೆ ಈ ಜಾಹೀರಾತನ್ನು ಟ್ವೀಟ್ ಮಾಡಿ ಪ್ರಚಾರಕ್ಕಾಗಿ ಈ ರೀತಿ ಜಾಹೀರಾತು ಬಳಕೆ ಏಕೆ ಎಂದಿದ್ದಾರೆ.

ಮೊಬೈಲ್ ಫೋನ್ ಗೋಸ್ಕರ ಜಾಹೀರಾತು

ಅಸಲಿಗೆ ನರ್ಗೀಸ್ ಫಕ್ರಿ ಅವರು 3ಜಿ ತಂತಜ್ಞಾನ ಉಳ್ಳ ಮೊಬೈಲ್ ಫೋನ್ ಗೋಸ್ಕರ ಜಾಹೀರಾತು ನೀಡಿದ್ದರು.

ಪತ್ರಿಕಾ ಧರ್ಮದ ವಿರುದ್ಧವಾದ ಜಾಹೀರಾತು

ಪತ್ರಿಕಾ ಧರ್ಮದ ವಿರುದ್ಧವಾದ ಜಾಹೀರಾತು ಇದಾಗಿದೆ. ಹಣ ಗಳಿಕೆಯೇ ಮುಖ್ಯ ಉದ್ದೇಶವಾದರೆ ಹೇಗೆ?

ಪ್ಲೇ ಬಾಯ್ ಮ್ಯಾಗಜೀನ್ ಸಂಸ್ಕೃತಿ ಬೇಡ

ಪ್ಲೇ ಬಾಯ್ ಮ್ಯಾಗಜೀನ್ ಸಂಸ್ಕೃತಿ ನಮಗೆ ಬೇಡ. ಉರ್ದು ಪತ್ರಿಕೆಗಳು ಪ್ಲೇ ಬಾಯ್ ರೀತಿ ಆಗುವುದು ಸರಿಯಲ್ಲ

English summary
Bollywood actress Nargis Fakhri has stokes up controversy with her new advertisement. Reportedly Fakhri's ad on the front page of leading Pakistani Urdu newspaper Jang is inviting her ire of Twitterati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X