ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾನುಲಿಯಲ್ಲಿ ಮೋದಿ: ಪ್ರಧಾನ ಸೇವಕನನ್ನು ನಂಬಿ

By Mahesh
|
Google Oneindia Kannada News

ನವದೆಹಲಿ, ನ.2: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ತಮ್ಮ ಮನಸ್ಸಿನ ಮಾತನ್ನು ದೇಶದ ಜನತೆ ಜೊತೆಗೆ ಹಂಚಿಕೊಂಡಿದ್ದಾರೆ. ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮದ ಎರಡನೇ ಕಾರ್ಯಕ್ರಮದಲ್ಲಿ ನಾನು ನಿಮ್ಮ ಪ್ರಧಾನ ಸೇವಕ ನನ್ನ ಮೇಲೆ ನಂಬಿಕೆ ಇರಿಸಿ ಎಂದು ಜನತೆಯನ್ನು ಕೋರಿದ್ದಾರೆ.

ಬಾನುಲಿಯಲ್ಲಿ ಕಪ್ಪುಹಣ ವಾಪಸ್ ತರುವುದು ಹಾಗೂ ಸ್ವಚ್ಛಭಾರತ ಯೋಜನೆ ಬಗ್ಗೆ ಮೋದಿ ಭಾಷಣದುದ್ದಕ್ಕೂ ಪ್ರಸ್ತಾಪಿಸಿದರು. 'ಒಂದೇ ಒಂದು ಬಿಡಿಗಾಸು ಬಿಡದೆ ಭಾರತಕ್ಕೆ ಕಪ್ಪು ಹಣ ವಾಪಸ್ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ದೇಶದ ಜನತೆಗೆ ವಾಗ್ದಾನ ನೀಡಿದರು. ನಾನು ನಿಮ್ಮ ಪ್ರಧಾನ ಸೇವಕ. ನನ್ನ ಮೇಲೆ ನಂಬಿಕೆ ಇಟ್ಟುಕೊಳ್ಳಿ. ವಿದೇಶದಲ್ಲಿ ಭಾರತೀಯರು ಎಷ್ಟು ಕಪ್ಪು ಹಣ ಇಟ್ಟಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ಕಾಳಸಂತೆಕೋರರ ಹಣವನ್ನು ಒಂದು ಪೈಸಾ ಬಿಡದೆ ಸ್ವದೇಶಕ್ಕೆ ತರುತ್ತೇನೆ. ಇದರಲ್ಲಿ ಯಾವುದೇ ಹಿಂಜರಿಕೆ ಇಲ್ಲ' ಎಂದರು.

ಸ್ವಚ್ಛತಾ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮಕ್ಕಳು ಕೂಡಾ ಈ ಸ್ವಚ್ಛತೆಯ ಬಗ್ಗೆ ಗಮನ ಹರಿಸುತ್ತಿದ್ದಾರೆ. ಚಾಕಲೇಟ್ ಪೇಪರ್ ಗಳನ್ನು ದಾರಿಯಲ್ಲಿ ಎಸೆಯದಂತೆ ಮಕ್ಕಳಿಗೆ ಪೋಷಕರು ಬುದ್ಧಿ ಹೇಳುತ್ತಿದ್ದಾರೆ. ದೇಶದಲ್ಲಿ ಇಂಥ ಬದಲಾವಣೆ ತಂದಿರುವ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಹೇಳಿದರು

ಭಾನುವಾರ ಬೆಳಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾದ ಮನ್‌ಕೀಬಾತ್ ಕಾರ್ಯಕ್ರಮವನ್ನು ದೇಶದ ವಿವಿಧೆಡೆಗಳಲ್ಲಿ ಸಾರ್ವಜನಿಕರು ಏಕಕಾಲಕ್ಕೆ ಆಲಿಸಿದರು. ಮೋದಿ ಭಾಷಣದ ಮುಖ್ಯಾಂಶಗಳು ಮುಂದಿವೆ.

 ಸ್ವಚ್ಛತಾ ಆಂದೋಲನದ ಪರಿಣಾಮದ ಬಗ್ಗೆ

ಸ್ವಚ್ಛತಾ ಆಂದೋಲನದ ಪರಿಣಾಮದ ಬಗ್ಗೆ

ಸ್ವಚ್ಛತಾ ಆಂದೋಲನದ ಪರಿಣಾಮದ ಬಗ್ಗೆ ದೃಷ್ಟಾಂತದೊಡನೆ ವಿವರಿಸಿದ ಮೋದಿ, ಒಬ್ಬ ವ್ಯಕ್ತಿ ನನಗೊಂದು ಪತ್ರ ಬರೆದಿದ್ದರು.ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಿರಬೇಕಾದರೆ ಜನರು ಕಸವನ್ನು ಕಂಡ ಕಂಡಲ್ಲಿ ಎಸೆಯದೆ ಅದನ್ನು ಕಸದ ಬುಟ್ಟಿಗೆ ಹಾಕಲು ನೋಡುತ್ತಿದ್ದರು. ಅಲ್ಲಿ ಕಸದ ಬುಟ್ಟಿ ಸಿಗದೇ ಇದ್ದಾಗ ಒಂದು ಮೂಲೆಯಲ್ಲಿ ಎಲ್ಲವನ್ನೂ ರಾಶಿ ಹಾಕಿದರು. ಅಂದರೆ ಅವರೀಗ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದಾಯ್ತು. ಜನರು ದೇಶವನ್ನು ಸ್ವಚ್ಛವಾಗಿಡಲು ನೋಡುತ್ತಿದ್ದಾರೆ ಎಂಬುದನ್ನು ಕೇಳಿ ನನಗೆ ಖುಷಿಯಾಗುತ್ತಿದೆ.

ಮೋದಿ ಭಾಷಣ ಕೇಳಿಸಿಕೊಳ್ಳುತ್ತಿರುವ ನಾಗರಿಕರು

ದೇಶದ ವಿವಿಧೆಡೆ ಮನ್ ಕಿ ಬಾತ್ ಮೋದಿ ಭಾಷಣ ಕೇಳಿಸಿಕೊಳ್ಳುತ್ತಿರುವ ನಾಗರಿಕರು

 ದೇಶದ ಅಭಿವೃದ್ಧಿಗಾಗಿ ಎಲ್ಲರೂ ಚಿಂತಿಸುವಂತಾಗಲಿ

ದೇಶದ ಅಭಿವೃದ್ಧಿಗಾಗಿ ಎಲ್ಲರೂ ಚಿಂತಿಸುವಂತಾಗಲಿ

ಈ ಮುಂಚೆ ನನ್ನನ್ನು ಭೇಟಿ ಮಾಡುವ ವ್ಯಕ್ತಿಗಳೆಲ್ಲರೂ ಈಗ ತಮ್ಮ ವೈಯಕ್ತಿಕ ವಿಷಯಗಳ ಬಗೆ ಚರ್ಚಿಸುತ್ತಿದ್ದರು ಈಗ ಅದನ್ನು ಬಿಟ್ಟು ಸಮಾಜದ ಪ್ರಗತಿಗೆ, ಸಮಾಜದ ಸೇವೆಯ ಬಗ್ಗೆ ಮಾತನಾಡುತ್ತಾರೆ. ಇದು ಅಭಿವೃದ್ಧಿಯ ಸಂಕೇತ ಎಂದರು.

ನಮ್ಮ ಸುತ್ತುಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ. ಇದರಿಂದಾಗಿ ನಾವು ಬಡವರಿಗೆ ಸಹಾಯ ಮಾಡುತ್ತೇವೆ. ಕೊಳಕು, ಗಲೀಜುಗಳಿಂದ ರೋಗ ಬೇಗನೆ ಹರಡುವುದು ಶ್ರೀಮಂತರಿಗಲ್ಲ, ಬಡವರಿಗೆ, ಆದ್ದರಿಂದ ನಾವು ಸ್ವಚ್ಛತೆಯನ್ನು ಕಾಪಾಡುವ ಮೂಲಕ ಬಡವರಿಗೆ ಸಹಾಯ ಮಾಡಬಹುದು.

ಕಾಶ್ಮೀರದಲ್ಲಿ ದೀಪಾವಳಿ ಆಚರಣೆ ನೆನಪು

ದೇಶದ ಜನರು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾಗ ನಾನು ಸಿಯಾಚಿನ್‌ಗೆ ಹೋಗಿದ್ದೆ. ಅಲ್ಲಿನ ಜವಾನರೊಂದಿಗೆ ಸಮಯ ಕಳೆದೆ. ನಾವಿಲ್ಲಿ ನೆಮ್ಮದಿಯಾಗಿರುವುದು ಅವರ ಕಾರಣದಿಂದಲೇ ಅಲ್ಲವೆ? ನಾನು ಆ ಜವಾನರಿಗೆ ಸೆಲ್ಯೂಟ್ ಮಾಡ್ತೀನಿ

ಅಕ್ರಮ ಔಷಧಗಳ ಬಗ್ಗೆ ನನಗೆ ದೂರು ಬಂದಿದೆ

ಅಕ್ರಮ ಔಷಧಗಳ ಬಗ್ಗೆ ನನಗೆ ದೂರು ಬಂದಿದೆ ಈ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿ.. ಸರಣಿಯ ಮುಂದಿನ ಭಾಗದಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದ ಮೋದಿ.

ಮನ್ ಕಿ ಬಾತ್ ಕಾರ್ಯಕ್ರಮ ರೆಕಾರ್ಡಿಂಗ್

ಮನ್ ಕಿ ಬಾತ್ ಕಾರ್ಯಕ್ರಮ ಸಂಗ್ರಹಿತ ಧ್ವನಿ ಮುದ್ರಣ ಇಲ್ಲಿದೆ ಕೇಳಿ

English summary
In his second radio address, Man Ki Baat', to the nation, Prime Minister Narendra Modi on Sunday spoke on the issue of black money. The PM in his AIR address assured the citizens of India that his government is committed on the issue of black money and that he'll leave no stones unturned in bringing back the black money back to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X