ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಹಣದ ಮಾಹಿತಿ ಯಾರು ಬೇಕಾದ್ರೂ ಕೊಡಬಹುದು

|
Google Oneindia Kannada News

ನವದೆಹಲಿ, ನ.10 : ಕಪ್ಪು ಹಣ ಇಟ್ಟವರ ಬಗ್ಗೆ ನಿಮಗೆ ಮಾಹಿತಿಯಿದ್ದರೆ ಅಥವಾ ಮಹತ್ವದ ವಿವಾಚಾರಗಳು ಗೊತ್ತಿದ್ದರೆ ಅದನ್ನು ತನ್ನ ಜೊತೆ ಹಂಚಿಕೊಳ್ಳಬಹುದು ಎಂದು ವಿಶೇಷ ತನಿಖಾದಳ (ಎಸ್‍ಐಟಿ) ಸಾರ್ವಜನಿಕರಲ್ಲಿ ಕೇಳಿಕೊಂಡಿದೆ.

ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿಡಲಾಗುವುದು. ಕಪ್ಪು ಹಣ ಹೊಂದಿರುವ ಹೆಸರುಗಳು, ಯಾವ ಯಾವ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದಾರೆ? ಯಾವ ರಾಷ್ಟ್ರದಲ್ಲಿ ಹಣ ಇಟ್ಟಿದ್ದಾರೆ? ಎಂಬ ಮಾಹಿತಿ ನೀಡಬೇಕು ಎಂದು ಭಾನುವಾರ ಮನವಿ ಮಾಡಿದೆ.[ಕಪ್ಪು ಹಣː ಲಕೋಟೆ ಒಡೆಯುವ ಅಧಿಕಾರ ವಿಶೇಷ ತಂಡಕ್ಕೆ]

black money

ಮುಂದಿನ ಮಾರ್ಚ್ ಒಳಗೆ ಕಪ್ಪು ಹಣದ ಸಂಪೂರ್ಣ ವಿಚಾರಣೆ ಮುಗಿಸಬೇಕಾಗಿರುವುದರಿಂದ ನಾಗರಿಕರ ನೆರವು ಅಗತ್ಯವಾಗಿದೆ. ಕಪ್ಪು ಹಣ ಇಟ್ಟವರ ಮಾಹಿತಿಯನ್ನು ಜನ ಯಾವುದೇ ಭಯಕ್ಕೆ ಒಳಗಾಗದೇ ನೀಡಬಹುದು. ಸಂಘ ಸಂಸ್ಥೆಗಳು, ಎನ್ ಜಿಒಗಳು ಸಾಮಾಜಿಕ ಕೆಲಸದಲ್ಲಿ ಪಾಲ್ಗೊಳ್ಳಬಹುದು ಎಂದು ಎಸ್ ಇಟಿ ಮುಖ್ಯಸ್ಥ ಎಂ.ಬಿ.ಶಾ ತಿಳಿಸಿದ್ದಾರೆ.[ಟೈಮ್ ಲೈನ್ : ವಿದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ]

ನಾಗರಿಕರು ಪತ್ರ ಮುಖೇನ ಇಲ್ಲವೇ ಈ ಮೇಲ್ ಮಾಡುವ ಮೂಲಕ ಹೆಸರು ನೀಡಬಹುದು. ಕಂದಾಯ ಇಲಾಖೆಯ "[email protected]" ಅಡ್ರೆಸ್ ಗೆ ಈ ಮೇಲ್ ಕಳಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕಪ್ಪು ಹಣ ಇಟ್ಟ 627 ಜನರ ಹೆಸರುಳ್ಳ ಪಟ್ಟಿಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಗೆ ಈಗಾಗಲೇ ಸಲ್ಲಿಸಿದೆ. ಆದರೆ ಇನ್ನು ಸಾಕಷ್ಟು ಮಾಹಿತಿ ಅಗತ್ಯವಿದ್ದು ವಿಶೇಷ ತನಿಖಾ ತಂಡ ಜನರ ಬಳಿಗೆ ತೆರಳಿದೆ.

English summary
Expanding its reach, the Special Investigation Team (SIT) on black money issued a public notice asking people to furnish "precise" information about any Indian resident or entity holding illegal or secret assets abroad. M B Shah had promised to create such a public window sometime back and it has now given an assurance that the name of the information provider will be kept confidential.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X