ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಹಣː ಲಕೋಟೆ ಒಡೆಯುವ ಅಧಿಕಾರ ವಿಶೇಷ ತಂಡಕ್ಕೆ

|
Google Oneindia Kannada News

ನವದೆಹಲಿ, ಅ.29: ಕಪ್ಪು ಹಣ ಇಡೀ ಭಾರತದಲ್ಲಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರ ಕಪ್ಪು ಹಣ ಹೊಂದಿರುವವರ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಮಾತ್ರಕ್ಕೆ ಹಣ ಭಾರತಕ್ಕೆ ವಾಪಸ್ ಬಂದು ಬಿಡುತ್ತೆಯೇ? ಖಂಡತಿವಾಗಿಯೂ ಇಲ್ಲ.

ಅಲ್ಲದೇ ಈಗ ಬಹಿರಂಗವಾಗಿರುವ ಮೂರು ಹೆಸರುಗಳ ಮೇಲೆ ಜನರಿಗೆ ಯಾವ ಕುತೂಹಲವೂ ಇಲ್ಲ. ಬುಧವಾರ ಸಲ್ಲಿಸಿರುವ 627 ಹೆಸರುಗಳು ಸದ್ಯ ಬಹಿರಂಗವಾಗಲ್ಲ. ರಾಜಕಾರಣಿಗಳು ಮತ್ತು ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿಗಳು ಕಪ್ಪು ಹಣ ಮಾಡಿ ಇಟ್ಟಿದ್ದಾರೆ ಎಂಬ ಬಲವಾದ ಅನುಮಾನ ಜನರಲ್ಲಿ ಇದ್ದರೂ ಅದಕ್ಕೆ ಉತ್ತರ ದೊರೆಯುವ ಕಾಲ ಮುಂದಕ್ಕೆ ಹೋಗಿದೆ.[ಟೈಮ್ ಲೈನ್ : ವಿದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ]

ಕೇಂದ್ರ ಸರ್ಕಾರ ಒಟ್ಟು ಮೂರು ಮುಚ್ಚಿದ ಲಕೋಟೆಯನ್ನು ಸಲ್ಲಿಸಿದ್ದು ಮೊದಲನೇ ಪಟ್ಟಿಯಲ್ಲಿ ವಿದೇಶಗಳೊಂದಿಗೆ ಹೊಂದಿರುವ ಒಪ್ಪಂದದ ಹೆಸರಿದೆ. ಎರಡನೇ ಪಟ್ಟಿಯಲ್ಲಿ 627 ಜನರ ಹೆಸರಿದೆ ಮತ್ತು ಮೂರನೇ ಲಕೋಟೆಯಲ್ಲಿ ತನಿಖಾ ವರದಿಯ ವಿವರಗಳಿದೆ ಎಂದು ಹೇಳಲಾಗಿದೆ.

balck money

ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ ಗೆ 627 ಜನರ ಹೆಸರು ಸಲ್ಲಿಸಿದೆ. ಆದರೆ ನ್ಯಾಯಾಲಯ ಹೆಸರು ಬಹಿರಂಗಗೊಳಿಸುವ ಅಧಿಕಾರವನ್ನು ನಿವೃತ್ತ ನ್ಯಾಯಮೂರ್ತಿ ಎಂ.ಬಿ.ಷಾ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ನೀಡಿದ್ದು 2015ರ ಮಾರ್ಚ್ ವರೆಗೆ ತನಿಖೆಗೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸಹಕಾರವನ್ನು ತನಿಖಾ ತಂಡ ಪಡೆದುಕೊಳ್ಳಬಹುದು.

ಕಪ್ಪು ಹಣ ಎಂದರೇನು?
ಭಾರತದ ಆದಾಯ ತೆರಿಗೆಗೆ ಟೋಪಿ ಹಾಕಿ ಅಕ್ರಮ ಗಳಿಕೆಯ ಮೂಲಕ ಸಂಪಾದಿಸಿದ ಹಣವೇ ಕಪ್ಪುಹಣ. ಇದನ್ನು ವಿದೇಶದಲ್ಲಿ ಇಡುವುದು ಸಾಮಾನ್ಯ. ಒಟ್ಟಿನಲ್ಲಿ ಇಲ್ಲಿ ಎಲ್ಲವೂ ಅಕ್ರಮ ಗಳಿಕೆಯೇ ಆಗಿರುತ್ತದೆ. ಜರ್ಮನಿ, ಫ್ರಾನ್ಸ್ ಮತ್ತು ಸ್ವಿಸ್‌ ನಲ್ಲಿ ಭಾರತದ ಕಪ್ಪು ಹಣ ಇದೆ.[ಕಪ್ಪು ಹಣ: ಮೊದಲ ಮೂವರು ಉದ್ಯಮಿಗಳ ವಿವರ]

ಹಣ ಇಟ್ಟವರು ಯಾರೇ ಆಗಿರಬಹುದು. ಅದು ಕಾನೂನು ಬಾಹಿರವಾಗಿ ಬಂದಿದ್ದೇ ಆಗಿರುತ್ತದೆ. ರಾಜಕಾರಣಿಗಳು ವಿದೇಶದಲ್ಲಿ ಬೆನಾಮಿ ಹೆಸರಲ್ಲಿ ಖಾತೆ ತೆರೆದು ಹಣ ಹೂಡಿದ್ದಾರೆ ಎಂಬುದು ಪ್ರಚಲಿತದಲ್ಲಿರುವ ಮಾತು.

ಪಟ್ಟಿ ಸಲ್ಲಿಕೆ ಮುಂದೇನು?
ಕಪ್ಪು ಹಣ ಭಾರತಕ್ಕೆ ತರುತ್ತೇನೆ ಎಂದುಕೊಂಡೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ಮೊದಲ ಹಂತದ ಕಾರ್ಯಾಚರಣೆ ಆರಂಭಿಸಿರುವುದು ಸುಳ್ಳಲ್ಲ. ಅದರಂತೆ ಮೂವರು ಉದ್ಯಮಿಗಳ ಹೆಸರನ್ನು ಸೋಮವಾರ ಬಹಿರಂಗ ಪಡಿಸಲಾಗಿತ್ತು. ಕಪ್ಪು ಹಣ ಇಟ್ಟ ಎಲ್ಲರ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಪಟ್ಟಿಯನ್ನು ಕೇಂದ್ರ ಸರ್ಕಾರ ಸಲ್ಲಿಸಿದೆ.

ಲಕೋಟೆ ತೆರೆಯುವಂತಿಲ್ಲ
ಕಪ್ಪು ಹಣ ಹೊಂದಿದವರ ಮಾಹಿತಿಯನ್ನು ನೀಡಲಾಗಿದ್ದರೂ ಹೆಸರು ಮಾತ್ರ ಜನರ ಮುಂದೆ ಬರಲ್ಲ. ಯಾಕೆಂದರೆ ಕೇಂದ್ರ ಸರ್ಕಾರ ನೀಡಿರುವ ಲಕೋಟೆಯನ್ನು ತೆರೆಯುವ ಅಧಿಕಾರ ವಿಶೇಷ ತನಿಖಾ ತಂಡಕ್ಕೆ(ಎಸ್ಐಟಿ) ಮಾತ್ರ ಇದೆ. ಕೇಂದ್ರ ಸರ್ಕಾರ 627 ಮಂದಿಯ ಮಾಹಿತಿ ನೀಡಿದೆ ಎನ್ನಲಾಗಿದ್ದರೂ ಯಾರೊಬ್ಬರ ಹೆಸರೂ ಸದ್ಯಕ್ಕಂತು ಹೊರಕ್ಕೆ ಬರಲ್ಲ.

ಹಿಂದೆ ಎಚ್ ಎಸ್ ಬಿಸಿ ನೀಡಿದ್ದ ಪಟ್ಟಿಯಲ್ಲಿರುವ ಹೆಸರುಗಳೇ ಇದಾಗಿವೆ ಎಂದು ಹೇಳಲಾಗಿದ್ದು, ಪ್ರಕರಣದ ಸಮಗ್ರ ತನಿಖೆ ಮತ್ತು ವಿವರ ಬಹಿರಂಗಕ್ಕೆ ಸುಪ್ರೀಂ ಕೋರ್ಟ್ ಎಸ್ಐಟಿಗೆ ಮಾರ್ಚ್ 2015 ರ ಡೆಡ್ ಲೈನ್ ನೀಡಿದೆ. ವಿಶೇಷ ತನಿಖಾ ತಂಡದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾತ್ರ ಲಕೋಟೆ ತೆರೆಯುವ ಅಧಿಕಾರವನ್ನು ಸುಪ್ರೀಂ ದಯಪಾಲಿಸಿದೆ.

ಜನರ ಕುತೂಹಲ ತಣಿದಿಲ್ಲ
ಕಪ್ಪು ಹಣ ಇಟ್ಟವರ ಹೆಸರು ಬಹಿರಂಗವಾಗುತ್ತದೆ ಎಂದು ಕಾಯುತ್ತಿದ್ದ ಭಾರತೀಯರ ಕುತೂಹಲಕ್ಕೆ ಉತ್ತರ ಸಿಗುವ ಕಾಲ ಮಾರ್ಚ್ 2015 ಕ್ಕೆ ಹೋಗಿದೆ. ಅಷ್ಟಕ್ಕೂ ಪಟ್ಟಿ ನೀಡಿದ ಮಾತ್ರಕ್ಕೆ ಕಪ್ಪು ಹಣ ಏನು ದೇಶಕ್ಕೆ ಬಂದು ಬಿಡಲ್ಲ. ಒಟ್ಟಿನಲ್ಲಿ ಕಪ್ಪು ಹಣ ಇಟ್ಟವರು ಪಟ್ಟಿ ಬಹಿರಂಗವಾಗುವವರೆಗೆ ಮಾಧ್ಯಮಗಳಿಂದ ಸೇಫ್, ಒಂದು ವೇಳೆ ಪಟ್ಟಿ ಬಹಿರಂಗವಾದರೂ ಪ್ರಕರಣ ಇತ್ಯರ್ಥವಾಗುವವರೆಗೆ ಕಾನೂನಿಂದ ಸುರಕ್ಷಿತ.

English summary
Centre on Wednesday submitted names of 627 Indians who have accounts in foreign banks to the Supreme Court in the black money case. The government submitted the names in three set of documents in a sealed envelope. Along with this, the Centre also submitted list on treaties and status report. The court also said that the black money case will be investigated by Special Investigation Team (SIT) and not the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X